ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ ಜೈಲಿಗೆ

By Staff
|
Google Oneindia Kannada News

ಢಾಕಾ, ಜುಲೈ 16 : ಭಾರೀ ಮಟ್ಟದ ಸುಲಿಗೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರನ್ನು ಸೋಮವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

1996ರಿಂದ 2001ರವರೆಗೆ ಅಧಿಕಾರದಲ್ಲಿದ್ದಾಗ ಈಸ್ಟ್ ಕೋಸ್ಟ್ ಟ್ರೇಡಿಂಗ್ ಲಿ. ಕಂಪನಿಯಿಂದ 2.96 ಕೋಟಿ ಟಾಕಾ(4,42,000 ಅಮೆರಿಕನ್ ಡಾಲರ್)ದಷ್ಟು ಹಣವನ್ನು ಸುಲಿಗೆ ಮಾಡಿದ ಆರೋಪವನ್ನು ಆವಾಮಿ ಲೀಗ್‌ನ ನಾಯಕಿ ಎದುರಿಸುತ್ತಿದ್ದಾರೆ.

ಸುಮಾರು 50 ವಕೀಲರು ಹಸೀನಾ ಅವರ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರೂ ಮ್ಯಾಜಿಸ್ಟ್ರೇಟ್ ಕುಮರುನ್ನಹಾರ್ ಅವರು ಜಾಮೀನು ಅರ್ಜಿಯನ್ನು ತಳ್ಳಿಹಾಕಿ ಹಸೀನಾರನ್ನು ಜೈಲಿಗೆ ಕಳುಹಿಸಿದರು.

ಅತ್ಯಂತ ಬಿಗಿಭದ್ರತೆ ನಡುವೆ ಹಸೀನಾರನ್ನು ಜೈಲಿಗೆ ಕಳುಹಿಸುವ ಆದೇಶ ಹೊರಡುತ್ತಿದ್ದಂತೆ ಅವರು ಬೆಂಬಲಿಗರು, ಬಾಂಗ್ಲಾಗೆ ಜಯವಾಗಲಿ, ಹೆದರಬೇಡಿ ನಾವು ನಿಮ್ಮೊಂದಿಗಿದ್ದೇವೆ ಎಂದು ಘೋಷಣೆಗಳನ್ನು ಕೂಗಿದರು.

ಅವರನ್ನು ಪಾರ್ಲಿಮೆಂಟ್ ಕಟ್ಟಡದ ತಾತ್ಕಾಲಿಕವಾಗಿ ನಿರ್ಮಿಸಿರುವ ಜೈಲಿನಲ್ಲಿ ಇರಿಸಲಾಗುವುದು.

ಐನೂರಕ್ಕೂ ಹೆಚ್ಚು ಪೊಲೀಸರು ಹಸೀನಾ ಅವರ ಮನೆಯನ್ನು ರೇಡ್ ಮಾಡಿ ಇಂದು ಬೆಳಿಗ್ಗೆ ಅವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X