• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದಿ ಅಮೆರಿಕಾದ ಅಧಿಕೃತ ಭಾಷೆಯಾಗಿಸಲು ಒತ್ತಾಯ

By Staff
|


ನ್ಯೂಯಾರ್ಕ್, ಜುಲೈ 16 : ಹಿಂದಿ ಭಾಷೆಯನ್ನು ಅಮೆರಿಕಾದ ಅಧಿಕೃತ ಭಾಷೆಯನ್ನಾಗಿಸಲು ಭಾರತ ಸರಕಾರ ವಿಶ್ವ ಹಿಂದಿ ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕೆಂದು ಇತ್ತೀಚೆಗೆ ಇಲ್ಲಿ ಮುಕ್ತಾಯಗೊಂಡ ಹಿಂದಿ ಸಮ್ಮೇಳನ ಒತ್ತಾಯಿಸಿದೆ. ಇಲ್ಲಿ ನಡೆದ ಮೂರು ದಿವಸದ ಎಂಟನೆ ವಿಶ್ವ ಹಿಂದಿ ಸಮ್ಮೆಳನವು ಈ ನಿಟ್ಟಿನಲ್ಲಿ ಒಂದು ಠರಾವನ್ನು ಅಂಗೀಕರಿಸಿದೆ.

ಹಿಂದಿ ಭಾಷೆಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿಸುವ ಪ್ರಸ್ತಾವನೆ ಈಗಾಗಲೆ ಯುಎನ್ಒ ಮುಂದೆ ಇಡಲಾಗಿದೆ. ಅದನ್ನು ಜಾರಿಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮನ ಮೋಹನ ಸಿಂಗ್‌ ಭರವಸೆ ನೀಡಿದ್ದಾರೆ. ಈ ದಿಶೆಯಲ್ಲಿ ದೇಶದೇಶಗಳಿಂದ ಹಿಂದಿಭಾಷಾಮನ್ನಣೆ ಮತ್ತು ಬಹುಮತವನ್ನು ಸಂಪಾದಿಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕಾಗಿದೆ ಎಂದು ಸಮ್ಮೇಳನ ಪ್ರತಿಪಾದಿಸಿದೆ.

ಮೂರು ದಿವಸದ ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಬನ್- ಕಿ ಮೂನ್ ಅವರು ಪಾಲ್ಗೊಂಡಿದ್ದುದು ಹಿಂದಿ ಭಾಷಿಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಭಾರತದ ಬೇಡಿಕೆ ಈಡೇರುವ ನಿಟ್ಟಿನಲ್ಲಿ ಮೂನ್‌ ಅವರ ಈ ಉಪಸ್ಥಿತಿ ಅತ್ಯಂತ ಮಹತ್ವನ್ನು ಪಡೆದುಕೊಂಡಿದೆ ಎಂದು ಹಿಂದಿ ವಲಯಗಳು ಸಂತಸ ವ್ಯಕ್ತಪಡಿಸಿವೆ.

ಸಮ್ಮೇಳನದಲ್ಲಿ ಹಿಂದಿಭಾಷೆಯನ್ನು ಜನಪ್ರಿಯಗೊಳಿಸುವ ಉದ್ದೇಶದ ಒಂಬತ್ತು ವಿಚಾರ ಸಂಕಿರಣಗಳು ನಡೆದವು. ಸಂಕಿರಣಗಳ ಫಲಶ್ರುತಿ ಏನೆಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿಗೆ ಮನ್ನಣೆ ತರುವ ಹತ್ತು ಅಂಶಗಳ ಪ್ರಣಾಳಿಕೆ ಮೂಡಿಬಂದಿತು. ಹಿಂದಿ ಭಾಷೆಯನ್ನು ಕಲಿಸುವುದು ಮತ್ತು ದೇವನಾಗರಿ ಲಿಪಿಯನ್ನು ಬಳಕೆಗೆ ತರುವುದು ಪ್ರಣಾಳಿಕೆಯ ಮುಖ್ಯಾಂಶಗಳಲ್ಲಿ ಅಡಕವಾಗಿದೆ.

ಪ್ರಣಾಳಿಕೆಯನ್ನು ಹಿಂದೂಸ್ತಾನ್‌ ಪತ್ರಿಕೆಯ ಮುಖ್ಯ ಸಂಪಾದಕ ಮೃಣಾಲ್‌ ಪಾಂಡೆ ಓದಿದರು. ವಿಜ್ಞಾನ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಆಧುನಿಕ ಹಿಂದಿ ಭಾಷೆಯು ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರಲ್ಲದೆ, ಭಾಷಾಭಿವೃದ್ಧಿಗಾಗಿ ವಾರ್ಧಾ ಅಂತಾರಾಷ್ರ್ಟೀಯ ಹಿಂದು ವಿಶ್ವವಿದ್ಯಾಲದಲ್ಲಿನ ವಿದೇಶಗಳ ಹಿಂದಿಭಾಷಾ ತಜ್ಞರು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬೇಕೆಂದೂ ಅವರು ಕರೆ ನೀಡಿದರು.

ಸಮ್ಮಳನದ ಮುಕ್ತಾಯ ಸಮಾರಂಭದಲ್ಲಿ ಭಾರತ ಪ್ರಧಾನಿಯ ಪ್ರತಿನಿಧಿಯಾಗಿ ಡಾ. ಕರಣ್‌ಸಿಂಗ್‌ ಭಾಗವಹಿಸಿದ್ದರು. ಭಾರತದ ಇಪ್ಪತ್ತು ಮಂದಿ ಮತ್ತು ವಿದೇಶಗಳಲ್ಲಿ ನೆಲೆಸಿರುವ ಇಪ್ಪತ್ತು ಮಂದಿ ಹಿಂದಿ ವಿದ್ವಾಂಸರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more