ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀಜಿಯಂತೆ ನೆಹರೂಗೂ ಒಬ್ಬ ಪ್ರೇಯಸಿ ಇದ್ದಳು!

By Staff
|
Google Oneindia Kannada News

Nehru, Edwina were in love: Pamelaನವದೆಹಲಿ, ಜುಲೈ 16 : ಗಣ್ಯರ ಅಫೇರ್‌ಗಳ ಬಗ್ಗೆ ಸಮಾಜದಲ್ಲಿ ಸದಾ ಗುಸುಗುಸು! ಮೊನ್ನೆಯಷ್ಟೇ ಗಾಂಧೀಜಿಗೂ ಒಬ್ಬ ಪ್ರೇಯಸಿಯಿದ್ದಳು, ಆಕೆ ಹೆಸರು ಸರಳದೇವಿ, ಆಕೆ ರವೀಂದ್ರನಾಥ ಟ್ಯಾಗೋರ್‌ರ ತಂಗಿ ಮಗಳು ಎಂಬ ವಿಚಾರ ಕೇಳಿ ಬಂದಿತ್ತು. ಈಗ ನೆಹರೂ ಸರದಿ! ಬಯಲಿಗೆ ಬರಬೇಕಾದ ಸತ್ಯಗಳು ಇನ್ನೆಷ್ಟಿವೆಯೋ?

ಭಾರತದ ಕಡೆಯ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿ ಎಡ್ವಿನಾ ಮತ್ತು ನೆಹರೂ ಮಧ್ಯೆ ಪ್ರೇಮವಿತ್ತು ಎಂಬ ಸಂಗತಿ ಗಾಳಿ ಸುದ್ದಿಯಲ್ಲ. ಮೌಂಟ್ ಬ್ಯಾಟನ್ ಪುತ್ರಿ ಪಮೇಲಾ, ತಮ್ಮ ಇಂಡಿಯಾ ರಿಮೆಂಬರ್ಡ್ : ಪರ್ಸನಲ್ ಅಕೌಂಟ್ ಆಫ್ ಮೌಂಟ್ ಬ್ಯಾಟನ್ಸ್ ಡ್ಯೂರಿಂಗ್ ದಿ ಟ್ರಾನ್ಸ್ಫರ್ ಆಫ್ ಫವರ್ ಪುಸ್ತಕದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸದ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ.

ಪುಸ್ತಕ ಬರೆಯಲು ಮನೆಯವರ ಡೈರಿ, ಫೋಟೊ ಆಲ್ಬಂ ಬಳಸಿಕೊಂಡಿರುವುದಾಗಿ ಹೇಳಿರುವ ಪಮೇಲಾ, ನಮ್ಮ ತಾಯಿ ಎಡ್ವಿನಾ ಸಾಯುವ ತನಕ ನೆಹರೂ ಅವರನ್ನು ಪ್ರೀತಿಸುತ್ತಿದ್ದರು ಎಂದಿದ್ದಾರೆ.

ನನ್ನ ಅಮ್ಮನಿಗೆ ಅನೇಕ ಮಂದಿ ಪ್ರಿಯಕರರಿದ್ದರು. ಈ ವಿಚಾರ ನಮ್ಮ ತಂದೆಗೆ ಜಿಗುಪ್ಸೆ ತಂದಿತ್ತು. ಆದರೆ ನೆಹರೂ ಮತ್ತು ನನ್ನ ತಾಯಿಯ ಪ್ರೀತಿಯನ್ನು ಅವರು ವಿರೋಧಿಸಿರಲಿಲ್ಲ. ಭಾರತ ಬಿಟ್ಟರೂ ಸತತ 12ವರ್ಷಗಳ ಕಾಲ ನನ್ನ ತಾಯಿ ಮತ್ತು ನೆಹರೂ ನಡುವೆ ಪ್ರೇಮ ಸಂಧಾನ ಪತ್ರದ ಮೂಲಕ ನಡೆಯುತ್ತಿತ್ತು. ವರ್ಷಕ್ಕೆ ಎರಡು ಸಲ ಭೇಟಿಯಾಗುತ್ತಿದ್ದರು. ಇವರಿಬ್ಬರ ನಡುವಿನದು ದೈವಿಕ ಪ್ರೀತಿ. ಕಲ್ಮಶವಿಲ್ಲದ ಪರಿಶುದ್ಧ ಪ್ರೀತಿ. ಇವರಿಬ್ಬರ ನಡುವೆ ಯಾವುದೇ ದೈಹಿಕ ಸಂಬಂಧ ಇರಲಿಲ್ಲ ಎಂದು ಪಮೇಲಾ ಪುಸ್ತಕದಲ್ಲಿ ವಿವರಿಸಿದ್ದಾರೆ.

1947ರಲ್ಲಿ ಮೌಂಟ್ ಬ್ಯಾಟನ್ ಬಂದಿದ್ದರು. ಆಗ ಎಡ್ವಿನಾಗೆ 44 ವರ್ಷ. ಪತ್ನಿ ಕಳೆದುಕೊಂಡಿದ್ದ ನೆಹರೂ ಆಗ ಏಕಾಂಗಿ. ಇಬ್ಬರ ನಡುವೆ ಆಸಂದರ್ಭದಲ್ಲಿ ಪ್ರೇಮಾಂಕುರವಾಯಿತು ಎನ್ನಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X