ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನೀಫ್ ಮೊಹಮ್ಮದ್ ಬಿಡುಗಡೆ : ಕಭಿ ಹಾ, ಕಭಿ ನಾ!

By Staff
|
Google Oneindia Kannada News

ಕ್ಯಾನ್‌ಬೆರ್ರಾ, ಜುಲೈ 16 : ಒಮ್ಮೆ ಕಾರ್ಮೋಡ, ಒಮ್ಮೆ ಶುಭ್ರ ಆಕಾಶ. ಒಮ್ಮೆ ಬಿಡುಗಡೆಯ ಮಂದಹಾಸ, ಮುಂದಿನ ಕ್ಷಣದಲ್ಲಿಯೇ ಬಂಧನದ ಹತಾಶೆ.

ಗ್ಲಾಸ್ಗೋ ವಿಮಾನ ನಿಲ್ದಾಣ ದಾಳಿಯ ಸಂಚಿನಲ್ಲಿ ಆರೋಪಿ ಸ್ಥಾನದಲ್ಲಿರುವ ಡಾಕ್ಟರ್ ಹನೀಫ್ ಮೊಹಮ್ಮದ್ ಮತ್ತು ಬೆಂಗಳೂರಿನಲ್ಲಿರುವ ಆತನ ಕುಟುಂಬದ ಸ್ಥಿತಿಯಿದು. ಅವರಿಗೆ ಆಸ್ಟ್ರೇಲಿಯಾ ಪೊಲೀಸರ ಕೈಯಲ್ಲಿ ಸಿಲುಕಿಕೊಂಡಿರುವ ಹನೀಫ್ ಸ್ಥಿತಿಯನ್ನು ನೋಡಿ ನಗಬೇಕೊ ಅಳಬೇಕೊ ತಿಳಿಯದಾಗಿದೆ.

ಇಂದು ಬೆಳಿಗ್ಗೆ ತಾನೆ ಷರತ್ತಿನ ಜಾಮೀನು. ಕೆಲವೇ ಗಂಟೆಗಳಲ್ಲಿ ಮತ್ತೆ ವಲಸೆ ಬಂಧನ!

ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಷರತ್ತಿನ ಜಾಮೀನು ಪಡೆದಿದ್ದ ಹನೀಫ್‌ಗೆ ಜೈಲಿನಿಂದ ಹೊರಬರುವ ಸಂಭ್ರಮವಿಲ್ಲ. ಅವರನ್ನು ಆಸ್ಟ್ರೇಲಿಯಾ ಸರ್ಕಾರ ಈಗ ವಲಸೆ ಬಂಧನದಲ್ಲಿ ಇರಿಸಿದೆ.

ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇವೆ ಎಂದು ಇಂದು ಬೆಳಿಗ್ಗೆ ತಾನೆ ಸಂತಸದಿಂದ ನಲಿದಾಡಿದ್ದ ಹನೀಫ್‌ರ ಮಡದಿ ಫಿರ್ದೌಸ್ ಆರ್ಶಿಯಾ ಅವರಿಗೆ ಈಗ ಹುಚ್ಚು ಹಿಡಿಯುವುದೊಂದು ಬಾಕಿ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X