ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರು ದಾಳಿಯ ಭಯ! ಲಾಡೆನ್ ಮುಗಿಸಲು ಕಸರತ್ತು!

By Staff
|
Google Oneindia Kannada News

ವಾಷಿಂಗ್ಟನ್ , ಜುಲೈ 14 : ವಿಶ್ವದ ಹಿರಿಯಣ್ಣನಂತೆ ಅಧಿಕಾರ ಚಲಾಯಿಸುವ ಅಮೆರಿಕಾ ಬೆಚ್ಚಿ ಬೀಳುವಂತೆ ಮಾಡಿದ್ದು ಬಿನ್ ಲಾಡೆನ್. ಅಮೆರಿಕಾ ಪಾಲಿಗೆ ಲಾಡೆನ್ ಬಂಧನ, ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಲಾಡೆನ್ ತಲೆಗೆ ಅಮೆರಿಕಾ ಸರ್ಕಾರ 20ಕೋಟಿ ರೂ. ಬೆಲೆ ಕಟ್ಟಿದೆ!

2001ರ ಸೆ.11ರಂದು ಅಮೆರಿಕಾ ಮೇಲೆ ದಾಳಿ ಮಾಡಿದ್ದ ಲಾಡೆನ್‌ನನ್ನು ಜೀವಂತ ಅಥವಾ ಹತ್ಯೆ ಮಾಡಿದವರಿಗೆ ಅಥವಾ ಅವನು ಎಲ್ಲಿದ್ದಾನೆ ಎಂಬ ಬಗ್ಗೆ ಸುಳಿವು ನೀಡಿದವರಿಗೆ ಆ ಬಹುಮಾನ ಸಿಗಲಿದೆ.

ಅಲ್‌ಖೈದಾ ಬೇರುಗಳು ಬಲವಾಗುತ್ತಿದ್ದು, ಮತ್ತೊಮ್ಮೆ ಅಮೆರಿಕಾ ಮೇಲೆ ದಾಳಿ ಮಾಡುವ ಸಿದ್ಧತೆ ನಡೆಯುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಈ ನಿಟ್ಟಿನಲ್ಲಿ ಏಕಾಏಕಿ 10ಕೋಟಿಯಿಂದ 20ಕೋಟಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಲು, ಅಮೆರಿಕ ಸೆನೆಟ್ ಸಮ್ಮತಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X