ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿವಿ : ‌ಡಿಗ್ರಿ ಜೊತೆ ಡಿಪ್ಲೊಮಾ ಸಹಾ ಮಾಡಿ!

By Staff
|
Google Oneindia Kannada News

ಮಂಗಳೂರು ಜುಲೈ 14: ಮಂಗಳೂರು ವಿಶ್ವವಿದ್ಯಾಲಯದ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಪದವಿ ಜೊತೆಜೊತೆಗೆ ಡಿಪ್ಲೊಮಾ ಕೋರ್ಸ್ ಸಹಾ ಮಾಡಬಹುದು. ವಿದ್ಯಾರ್ಥಿಗಳು ಸದ್ಯದಲ್ಲೇ ಈ ಅವಕಾಶ ಪಡೆಯಲಿದ್ದಾರೆ ಎಂದು ವಿವಿ ಉಪಕುಲಪತಿ ಪ್ರೊ.ಕಾವೇರಿಯಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪ್ರವಾಸೋದ್ಯಮ, ಕಂಪ್ಯೂಟರ್ ಹಾರ್ಡ್‌ವೇರ್‌ನಲ್ಲಿ ಡಿಪ್ಲೊಮಾ , ಕಲ್ಯಾಣಪುರದಲ್ಲಿರುವ ಮಿಲ್‌ಗ್ರೇಸ್ ಕಾಲೇಜಿನಲ್ಲಿ ಮಹಿಳಾ ಸಶಕ್ತೀಕರಣ, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ವಿಮೆ ಮತ್ತು ತೆರಿಗೆ, ಇ-ಕಾಮರ್ಸ್ ಮತ್ತು ವಿಶ್ವ ವ್ಯಾಪಾರ, ವಿದೇಶಿ ವಿನಿಮಯ ವ್ಯಾಪಾರದಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ವಿವರಿಸಿದರು.

ಆಯಾ ಕಾಲೇಜಿನಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಈ ಡಿಪ್ಲೋಮೋ ಕೋರ್ಸ್‌ಗಳಿಗೂ ಪ್ರವೇಶ ಪಡೆಯಬಹುದು. ಏಕಕಾಲದಲ್ಲಿ ಎರಡು ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಹೊಂದಬಹುದಾಗಿದೆ ಎಂದು ಕಾವೇರಿಯಪ್ಪ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X