ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜೆ ಕಟ್ : ಶಾಲಾ ಮಕ್ಕಳಿಗೆ ಕ್ರಿಸ್ಮಸ್ ರಜೆ ಇನ್ಮುಂದೆ ಇಲ್ಲ!

By Staff
|
Google Oneindia Kannada News

ಬೆಂಗಳೂರು ಜುಲೈ 14: ರಾಜ್ಯದ ಸಮ್ಮಿಶ್ರ ಸರ್ಕಾರ ಶಾಲಾ ಶೈಕ್ಷಣಿಕ ವರ್ಷದ ರಜೆ ಪಟ್ಟಿಯಿಂದ, ಕ್ರಿಸ್ ಮಸ್ ರಜೆಯನ್ನು ಹಿಂತೆಗೆದುಕೊಂಡಿದೆ. ಶಿಕ್ಷಣ ಇಲಾಖೆ ಇತ್ತೀಚೆಗೆ ಟ್ರೈ-ಮಿಸ್ಟರ್ ಪದ್ಧತಿಯಿಂದ ಸೆಮಿಸ್ಟರ್(6 ತಿಂಗಳ ಅವಧಿ)ಗೆ ಬದಲಾವಣೆ ಮಾಡಿದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಜೂನ್ 1ರಿಂದ ಅಕ್ಟೋಬರ್ 9ರವರೆಗೂ ಮೊದಲ ಸೆಮಿಸ್ಟರ್,ಅಕ್ಟೋಬರ್ 30ರಿಂದ ಏಪ್ರಿಲ್ 10ರವರೆಗೆ ಎರಡನೇ ಸೆಮಿಸ್ಟರ್ ಇರುತ್ತದೆ.

ಇದರಂತೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಹಾಗೂ ಮಧ್ಯಂತರ ರಜೆ(ದಸರಾ ರಜೆ?)ಮಾತ್ರ ಲಭ್ಯವಿರುತ್ತದೆ.

ಅಕ್ಟೋಬರ್10ರಿಂದ 30ರವರೆಗೂ ಮಧ್ಯಂತರ ರಜೆ ಹಾಗೂ ಏಪ್ರಿಲ್ 11ರಿಂದ ಮೇ 20ರವರೆಗೂ ಬೇಸಿಗೆ ರಜೆಯ ಮಜ ಅನುಭವಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಮಧ್ಯಂತರ ರಜೆಯನ್ನು ಕಡಿತಗೊಳಿಸಿ, ಕ್ರಿಸ್ಮಸ್ ರಜೆ ನೀಡಬೇಕೆಂದು ಸರ್ಕಾರವನ್ನು ಕೋರುವುದಾಗಿ ಹೇಳಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X