ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ಕಾನೂನು ಗೊಂದಲದಲಿ ಕೂಸು ಬಡವಾಯ್ತು

By Staff
|
Google Oneindia Kannada News

ನವದೆಹಲಿ, ಜುಲೈ 12 : ಕಾನೂನಿನ ಚೌಕಟ್ಟಿನಲ್ಲಿ ಯಾವ ವಯಸ್ಸಿನ ಮಗುವನ್ನು ಕೂಸೆಂದು ಕರೆಯಬಹುದು?

12 ವರ್ಷ? 16 ವರ್ಷ?, 18 ವರ್ಷ? ಕಾನೂನಿನ ನಿಯಮಗಳಲ್ಲಿಯೇ ಭಯಂಕರ ಗೊಂದಲಗಳಿವೆ. ಒಂದೊಂದು ಕಾಯ್ದೆಯಲ್ಲಿ ಒಂದು ವ್ಯಾಖ್ಯಾನ ನೀಡಲಾಗಿದೆ.

ಕಾರ್ಮಿಕ ಕಾಯ್ದೆ 14 ವಯಕ್ಕಿಂತ ಕೆಳಗಿನ ವ್ಯಕ್ತಿ ಮಗು ಎಂದು ವ್ಯಾಖ್ಯಾನಿಸಿದೆ. ಬಾಲಾಪರಾಧಿ ನ್ಯಾಯ (ಮಕ್ಕಳ ಕಾಳಜಿ ರಕ್ಷಣೆ) ಕಾಯ್ದೆ 2000 ಪ್ರಕಾರ 18 ವಯಸ್ಸಿಗಿಂತ ಕೆಳಗಿನ ಬಾಲಕ ಮಗು. ಬಾಲ್ಯವಿವಾಹ ತಡೆ ಕಾಯ್ದೆ 1929 ಪ್ರಕಾರ ಹುಡುಗಿ 18 ಮತ್ತು ಹುಡುಗ 21 ವಯಸ್ಸಿನವರಾಗಿದ್ದರೆ ಮದುವೆಗೆ ಅರ್ಹರು.

ಭಾರತೀಯ ದಂಡ ಸಂಹಿತೆ ಹುಡುಗಿಯ ವಯಸ್ಸು 16ಕ್ಕಿಂತ ಕಡಿಮೆಯಾಗಿದ್ದರೆ ಅಪ್ರಾಪ್ತವಯಸ್ಕಳು ಎನ್ನುತ್ತದೆ. ಶರಿಯತ್ ಕಾನೂನಿನ ಪ್ರಕಾರ ಒಬ್ಬ ಹುಡುಗಿ 15 ವರುಷ ಮುಟ್ಟಿದ ತಕ್ಷಣ ಮದುವೆಗೆ ಅರ್ಹಳು.

ಯಾವ ಕಾನೂನನ್ನು ಪಾಲಿಸಬೇಕು, ಯಾವುದನ್ನು ಪಾಲಿಸಬಾರದು? ಒಂದೊಂದು ಜಾತಿಗೆ ಒಂದೊಂದು ಕಾನೂನು. ಏಕರೀತಿಯ ನಾಗರಿಕ ಸಂಹಿತೆ ತರಬೇಕೆಂಬ ಕೂಗು ಹಿತ್ತಾಳೆ ಕಿವಿಗೆ ಬಿದ್ದಂತಾಗಿದೆ. ಒಟ್ಟಿನಲ್ಲಿ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವವರು ನಾವು.

ಈ ಕುರಿತಂತೆ ಎಲ್ಲ ಕಾನೂನಿನ ಅಡಿಯಲ್ಲಿ ಮಗುವಿಗೆ ಸಂಬಂಧಿಸಿದಂತೆ ಏಕರೀತಿಯ ವ್ಯಾಖ್ಯಾನ ತರಬೇಕು ಮತ್ತು ಪ್ರಾಪ್ತ ವಯಕ್ಕೆ ಬರುವ ಮಗುವಿನ ವಯಸ್ಸನ್ನು ನಿಗದಿತಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಹರ್ಯಾಣಾದ ಮನೋಜ್ ಶರ್ಮಾ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಕೇಂದ್ರ ಮತ್ತು ಇನ್ನಿತರ ಪ್ರತಿವಾದಿಗಳಿಗೆ ಬುಧವಾರ ನೋಟೀಸು ಜಾರಿ ಮಾಡಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X