• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಳು ಅದ್ಭುತಗಳಾಯ್ತು, ಈಗ ಏಳು ಆತಂಕ ವಲಯಗಳು

By Staff
|


ಬೆಂಗಳೂರು: ದೇಶದ ನಾನಾ ಕಡೆ ಆತಂಕ ಉಂಟು ಮಾಡಲು ಮುಂದಾಗಿರುವ ಉಗ್ರಗಾಮಿಗಳು ಕರ್ನಾಟಕದಲ್ಲಿ ಏಳು ವಲಯಗಳನ್ನು ರಚಿಸಿಕೊಂಡಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ.

ಗ್ಲಾಸೋ ದಾಳಿ ಯತ್ನದ ಹಿನ್ನೆಲೆಯಲ್ಲಿ ಬೆಂಗಳೂರು ಉಗ್ರರ ಪಾಲಿನ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿರುವುದರಿಂದ ರಾಜ್ಯದ ಪೊಲೀಸರು ಉಗ್ರರ ಅಡಗುತಾಣ ಹಾಗೂ ಆತಂಕಕಾರಿ ವಲಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಗೃಹ ಸಚಿವ ಎಂ.ಪಿ. ಪ್ರಕಾಶ್ ರವರಿಗೆ ವರದಿ ಸಲ್ಲಿಸಿದ್ದಾರೆ.

ಈ ವರದಿಯಲ್ಲಿ ಉಲ್ಲೇಖಗೊಂಡ 7 ಆತಂಕಕಾರಿ ವಲಯಗಳು ಇಂತಿವೆ:

  • ಬೆಂಗಳೂರು- ಆಸಿಫ್ ನಗರ(ಹೈದರಾಬಾದ್ ಹತ್ತಿರ)
  • ಬೆಂಗಳೂರು-ಚಿಂತಾಮಣಿ-ನೆಲಗೊಂಡ(ಆಂಧ್ರಪ್ರದೇಶ)
  • ಕಾಶ್ಮೀರ-ಹೊಸಪೇಟೆ(ಬಳ್ಳಾರಿ)
  • ಕರ್ನಾಟಕದ ಕರಾವಳಿ-ಮುಂಬಯಿ.
  • ರಾಯಚೂರು-ಮುಂಬಯಿ.
  • ಮೈಸೂರು-ಚಾಮರಾಜನಗರ-ಕೇರಳ.
  • ಭಟ್ಕಳ.
ಈ ವಲಯಗಳ ಮೂಲಕ ನಿಷೇಧಿತ ಉಗ್ರಗಾಮಿ ದಳಗಳಾದ ಅಲ್ ಖೈದಾ, ಲಷ್ಕರಿ-ಇ-ತಯ್ಯಬಾ, ಐಎಸ್ಐ ಮುಂತಾದ ಜಿಹಾದಿ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಸ್ಥಳೀಯ ಕೆಲ ಕೋಮುವಾದಿಗಳು, ವಿದ್ಯಾರ್ಥಿ ಸಂಘಟನೆಗಳ ಬೆಂಬಲದಿಂದ ರಾಜ್ಯದೊಳಗೆ ಉಗ್ರಗಾಮಿಗಳು ನುಸುಳುತ್ತಿದ್ದಾರೆ.

2005ರ ಐಐಎಸ್ ಸಿ ದಾಳಿಯ ಹಿಂದೆ ಬೆಂಗಳೂರು- ಚಿಂತಾಮಣಿ ವಲಯದ ಉಗ್ರರ ಕೈವಾಡವಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಭಟ್ಕಳದಲ್ಲಿ ಕಳೆದ ವರ್ಷ ಪಾಕ್ ಬೆಂಬಲಿತ ಐಎಸ್ ಐ ಸಂಘಟನೆ ಸಮಾವೇಶ ನಡೆಸಲು ಮುಂದಾಗಿತ್ತು. ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ದಕ್ಷಿಣ ರಾಜ್ಯಗಳಲ್ಲಿ ಆತಂಕ ಮೂಡಿಸುವುದು ಉಗ್ರಗಾಮಿಗಳ ಯೋಜನೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more