ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೂರು-ಪಾರು: ಪ್ರತಿಭಾ ಪಾಟೀಲ್ ವಿರುದ್ಧ ವೆಬ್ ಸೈಟ್

By Staff
|
Google Oneindia Kannada News

ರಾಷ್ಟ್ರಪತಿ ಚುನಾವಣಾ ಕಣದಲ್ಲಿರುವ ಯುಪಿಎ ಬೆಂಬಲಿತ ಪ್ರಮುಖ ಅಭ್ಯರ್ಥಿಪ್ರತಿಭಾ ಪಾಟೀಲ್ ಅವರನ್ನು ಅವಹೇಳನ ಮಾಡಲು ವೆಬ್ ಸೈಟ್ ಆರಂಭಿಸಿದೆ.

ಪ್ರತಿಭಾ ಪಾಟೀಲ್ ನಡೆಸಿರುವ ಅವ್ಯವಹಾರಗಳ ಕುರಿತ ಹಲವರ ಅಭಿಪ್ರಾಯ, ಆರೋಪ, ವಿಡಿಯೋ ಕ್ಲಿಪಿಂಗ್, ವ್ಯಂಗಚಿತ್ರಗಳು http://www.knowpratibhapatil.com/ ವೆಬ್ ಸೈಟ್ ನಲ್ಲಿ ಲಭ್ಯ.

ಅರುಣ್ ಶೌರಿ, ಕುಲ ದೀಪ್ ನಾಯರ್ ರವರ ಅಭಿಪ್ರಾಯಗಳ ಸಾರ ಸೇರಿದಂತೆ ಪ್ರಮುಖ ಟಿವಿ ವಾಹಿನಿಗಳಲ್ಲಿ ಪ್ರಸಾರವಾದ ತನಿಖಾ ವರದಿಯ ವಿಡಿಯೋ ಚಿತ್ರಣ ಕೂಡ ಸಿಗುತ್ತದೆ.

ಬಿಜೆಪಿಯ ಈ ಕ್ರಮ ಹತಾಶೆಯಿಂದ ಕೂಡಿದೆ ಎಂದು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

* * *

ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ: ಪಾಸ್ ದರ ಇಳಿಕೆ

ಬೆಂಗಳೂರು, ಜು.11: ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಸರ್ಕಾರ ಮಂಗಳವಾರ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯ ಬಸ್ ಪಾಸ್ ದರ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.

ಪ್ರಸ್ತುತ ಬಸ್ ಪಾಸ್ ಪಡೆಯಲು 1070 ರು. ನೀಡಬೇಕಾಗಿದ್ದ ಕಾಲೇಜಿನ ವಿದ್ಯಾರ್ಥಿಗಳು, ಇನ್ನು ಮುಂದೆ 900 ರು ಕೊಟ್ಟರೆ ಸಾಕು , ಪರಿಷ್ಕೃತ ದರದಂತೆ ವೃತ್ತಿಪರ ಕಾಲೇಜಿನವರು 1400 ರು. ಹಾಗೂ ಸಂಜೆ ಕಾಲೇಜಿನವರು 1500 ರು ನೀಡಬೇಕಾಗುತ್ತದೆ.ಈ ದರ ಇಳಿಕೆ ಕಾಲೇಜು ಐಟಿಐ, ವೃತ್ತಿಪರ ಕಾಲೇಜು ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ ಎಂದು ಸಾರಿಗೆ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಈಗಾಗಲೇ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹಣವನ್ನು ವಾಪಾಸು ಮಾಡಲಾಗುವುದು. ಸಂಬಂಧಪಟ್ಟ ಸಾರಿಗೆ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳ ಬಹುದು

ಆದರೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X