• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಕ್ತ ಹೆಪ್ಪುಗಟ್ಟಿದ ಮೆಣಸಿನಹಾಡ್ಯ ಈಗ ಶಾಂತ

By Staff
|


ಮಂಗಳೂರು, ಜು.11 : ಐದು ಶಂಕಿತ ನಕ್ಸಲೀಯರನ್ನು ಬಲಿ ತೆಗೆದುಕೊಂಡ ಮೆಣಸಿನಹಾಡ್ಯ ಬುಧವಾರ ಶಾಂತ ಸ್ಥಿತಿಗೆ ತಲುಪಿದೆ.

ಮುಂಗಾರು ಮಳೆಯ ಜೊತೆಗೇ ಹರಿದುಹೋದ ರಕ್ತದ ಮಡುವಿನ ಕಲೆ ಅಲ್ಲಲ್ಲಿ ಅಂಟಿಕೊಂಡಿದ್ದರೂ, ಬಂದೂಕಿನ ನಳಿಕೆ ಹೊಗೆಯುಗುಳುತ್ತಿಲ್ಲ. ಪೊಲೀಸ್ ಜೀಪಿಗೆ ಹತ್ತಿದ ಬೆಂಕಿ ಮಳೆಗೆ ನಂದಿದಂತೆ ಜನರೂ ಶಾಂತರಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಠಿಕಾಣಿ ಹೂಡಿರುವ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎ.ಎನ್.ಪ್ರಸಾದ್, ಹತ್ಯೆ ನಡೆದ ಊರಿನಲ್ಲೇ ಆಗಲಿ, ಜಿಲ್ಲೆಯಲ್ಲೇ ಆಗಲಿ ಯಾವುದೇ ಅಹಿತಕರ ಘಟನೆ ನಡೆದಿರುವುದನ್ನು ತಳ್ಳಿಹಾಕಿದ್ದಾರೆ.

ಮಂಗಳವಾರ ಹತರಾದ ಐವರನ್ನು ಭಾರೀ ಪೊಲೀಸ್ ಬಂದೋಬಸ್ತಿನಲ್ಲಿ ಪೋಸ್ಟ್‌ಮಾರ್ಟಂಗಾಗಿ ಇಂದು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ತರಲಾಯಿತು.

ಓರ್ವ ಮನೆಯ ಮಾಲಿಕ, ಆತನ ಹೆಂಡತಿ, ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ ಅವರ ಹತ್ಯೆಯನ್ನು ವಿರೋಧಿಸಿ ಹಳ್ಳಿಯ ಜನ ಸಹಾಯಕ ಕಮಿಷನರ್ ಅವರ ಜೀಪನ್ನು ಭಸ್ಮ ಮಾಡಿದ್ದರು ಮತ್ತು ಮೆಣಸಿನಹಾಡ್ಯದಿಂದ ಹೊರಹೋಗುವ ಎಲ್ಲ ದಾರಿಗಳನ್ನು ಅಗೆದು ಹಾಕಿದ್ದರು. ಆದರೆ, ಪೊಲೀಸರು ನಿನ್ನೆ ರಾತ್ರಿಯೇ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಿದ್ದರು.

ಚಿಕ್ಕಮಗಳೂರು ಎನ್‌ಕೌಂಟರ್: ಐವರು ನಕ್ಸಲರು ಫಿನಿಷ್!

(ಯುಎನ್‌ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more