ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಶಾಸಕರ ಸ್ಥಿರ -ಅಸ್ಥಿರ ಆಸ್ತಿ ವಿವರಗಳ ಓದು

By Super
|
Google Oneindia Kannada News

ರಾಜಕಾರಣಿಗಳನ್ನು ಕೇಳುವ ಧೈರ್ಯ ಯಾರಿಗಿದೆ? ನಾವೇ ಸಾಕಿದ ಆನೆಗೆ ಅಂಕುಶ ಹಾಕುವುದುಂಟೆ?? ಅವರನ್ನು ಕೇಳುವವರಾರು? ಹೇಳುವವರಾರು? ಯಾರೂ ಇಲ್ಲವೇ ಇಲ್ಲ ಎಂದು ಹತಾಶೆಯಿಂದ ಆಪಾದಿಸುವಂತಿಲ್ಲ.

ನದಿ ಮೂಲ ಋಷಿಮೂಲ ಕೇಳಬಾರದಂತೆ ಎನ್ನುವ ಸುಭಾಷಿತ ಸಾಯಂಕಾಲದ ಪ್ರವಚನಗಳಲ್ಲಿ ದ್ವೈಪಾನಾಚಾರ್ಯರು ಹೇಳುವ ಮಾತಾಯಿತು. ಜನಸಾಮಾನ್ಯರಾದ ನಾವು ನೀವು ನಮ್ಮ ನಮ್ಮಲ್ಲೆ ಆಡಿಕೊಳ್ಳುವ ಮಾತೆಂದರೆ ಹೆಣ್ಣಿನ ವಯಸ್ಸು ಮತ್ತು ಗಂಡಿನ ಸಂಬಳ ಕೇಳಬಾರದು. ಇದು ತಿರುಗ ಮುರಗನೂ ಆಗಬಹುದು. ಅಥವಾ ಯಾರನ್ನೂ ಏನನ್ನೂ ಕೇಳಬಾರದು ಎಂದುಕೊಳ್ಳಲೂಬಹುದು. ಚುಪ್‌!

ಲೆಕ್ಕ ಬುಕ್ಕು ಜಮ ಬಂದಿ ಯಾವುದನ್ನೂ ಕೇಳಬಾರದು. ಕೇಳಿದರೆ ಮಹಾಪರಾಧವಾಗಿಬಿಡುತ್ತೆ ಎಂದು ನಂಬಿಕೊಂಡೇ ಹುಟ್ಟಿಬೆಳೆದವರು ನಾವು. ಆದರೆ ಎಲ್ಲದಕ್ಕೂ ಎಲ್ಲೋ ಒಂದು ಕಡೆ ಚೂರುಪಾರಾದರೂ ಅಕೌಂಟಿಬಿಲಿಟಿ ಎನ್ನುವುದಿರಬೇಕಲ್ಲವೆ ಎಂದು ಪ್ರಶ್ನೆಹಾಕುವ ಪ್ರಜೆಗಳು ಭಾರತದಲ್ಲಿ ಈಗೀಗ ಹುಟ್ಟಿಕೊಂಡಿದ್ದಾರೆ. ಲೋಕಸಭೆ, ವಿಧಾನಸಭೆಗಳಲ್ಲಿ ಪ್ರಶ್ನೋತ್ತರ ಸಮಯದಲ್ಲಿ ನಮ್ಮ ಪ್ರಜಾಪ್ರತಿನಿಧಿಗಳು ಇಂತಹ ಲೆಕ್ಕ ಕೇಳುವ ಪರಿಪಾಠವುಂಟು. ಅದು ಬಿಡಿ. ಅವೆಲ್ಲ ಚುನಾಯಿತ ಪ್ರತಿನಿಧಿಯ ಹಕ್ಕುಗಳು. ಮಂತ್ರಿ ಎನಿಸಿಕೊಂಡವರು ಆ ಪ್ರಶ್ನೆಗಳಿಗೆ ಸಿದ್ಧಪಡಿಸಲಾದ ಉತ್ತರಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಅಲ್ಲಿಗೆ ಒಂದು ಫೈಲು ಶಾಸಕಾಂಗ ಕಚೇರಿಯ ಕಡತದಲ್ಲಿ ಅಂತ‌ರ್ದಾನವಾಗುತ್ತದೆ. ಇಟ್ಟಿದ್ದೇ ಬುಕ್ಕು, ಕೊಟ್ಟದ್ದೆ ಲೆಕ್ಕ.

ಪೈಸಕ್ಕೆ ಪೈಸಾ ಲೆಕ್ಕ ಜಮ ಇಡುವುದಕ್ಕೆಂತಲೇ ನಮ್ಮ ಆಡಳಿತದ ಅಂಗಳದಲ್ಲಿ ವ್ಯವಸ್ಥೆಗಳೂ ಇವೆ. ಒಂದು ಇಲಾಖೆಯಲ್ಲಿ ಒಬ್ಬ ನಿರ್ದೇಶಕ ಸಾರ್ವಜನಿಕರ ಎಷ್ಟು ಹಣವನ್ನು ಪೋಲುಮಾಡಿದ? ಯಾಕೆ ಮಾಡಿದ? ಹೇಗೆ ಮಾಡಿದ? ಒಬ್ಬ ಜುಜೂಬಿ ಟೈಪಿಸ್ಟ್ ಫೈಲು ಕೊಡದಹಾಗೆ ಆಟಆಡಿಸುತ್ತಾಳೆ ಸಾರ್‌ ..ಎನ್ನುವ ಮಾತುಗಳು ವಿಧಾನಸೌಧದ ಎದುರುಗಡೆ, ಸಿಒಡಿ ಆಫೀಸಿನ ಹಿಂದುಗಡೆ ಮರಗಳ ಮಧ್ಯೆ ಕೇಳಿಸುತ್ತವೆ. ಅಕೌಂಟೆಂಟ್ ಜನರಲ್‌ ಕಚೇರಿಯ ಮುಂದೆ ಪಪಾಯಿ ಹಣ್ಣು ತಿನ್ನುತ್ತಾ ಕೆಲವರು ಲಂಚ್‌ ಅವರ್‌ನಲ್ಲಿ ಮಾತಾಡುತ್ತಿರುತ್ತಾರೆ. ಅಷ್ಟರಮಟ್ಟಿಗೆ ಸಾಮಾಜಿಕ ಕಳಕಳಿ ಮತ್ತು ಟೈಂ ಪಾಸ್‌ ಏಕಕಾಲಕ್ಕೆ ಸಾಧ್ಯವಾಗುತ್ತದೆ.

ಅದಿರಲಿ.

ರಾಜಕಾರಣಿಗಳನ್ನು ಕೇಳುವ ಧೈರ್ಯ ಯಾರಿಗಿದೆ? ನಾವೇ ಸಾಕಿದ ಆನೆಗೆ ಅಂಕುಶ ಹಾಕುವುದುಂಟೆ?? ಅವರನ್ನು ಕೇಳುವವರಾರು? ಹೇಳುವವರಾರು? ಯಾರೂ ಇಲ್ಲವೇ ಇಲ್ಲ ಎಂದು ಹತಾಶೆಯಿಂದ ಆಪಾದಿಸುವಂತಿಲ್ಲ. ಎಲ್ಲೋ ಒಬ್ಬ ಟಿಎನ್‌ ಶೇಷನ್‌ ಥರದವರು ಇರುತ್ತಾರೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗಿ ಅಂತೂ ಇಂತೂ ಚುನಾವಣೆಗೆ ಸ್ಪರ್ಧಿಸುವ ರಾಜಕಾರಣಿ ತನ್ನ ಆಸ್ತಿ ಪಾಸ್ತಿ ಹಿನ್ನೆಲೆಗಳನ್ನು ನಿಯಮಾವಳಿಗನುಸಾರ ಹೇಳಿಕೊಳ್ಳಬೇಕು ಎನ್ನುವ ನಿಯಮ ಜಾರಿಗೆ ಬರತ್ತೆ.

ನೀವು ಕಳೆದ ತಿಂಗಳ ಪೂರ್ತಿ ಈ ಸುದ್ದಿ ಓದಿರಬಹುದು. ಶಾಸಕರು ತಮ್ಮ ತಮ್ಮ ಆಸ್ತಿಯನ್ನು ಘೋಷಿಸಬೇಕು. ಆಸ್ತಿ ವಿವರ ಸಲ್ಲಿಸಲು ಕಡೆಯದಿನಾಂಕ 31 ಜುಲೈ. ತಪ್ಪಿದರೆ ನಿಮ್ಮ ಶಾಸಕ ಪದವಿಗೆ ಚ್ಯುತಿ ಮುಂತಾದ ಸುದ್ದಿಗಳು ಬರುತ್ತಿದ್ದವು. ನಾವು ಕೂಡ ಸೀರಿಯಸ್‌ ಆಗಿ ಸುದ್ದಿ ಓದಿರಲಿಲ್ಲ. ಯಾಕಂದ್ರೆ ಯಾರು ಆಸ್ತಿ ಮಾಡಿರುತ್ತಾರೋ ಅವರು ತಲೆ ಕೆಡಿಸಿಕೊಬೇಕು. ನಮಗ್ಯಾಕೆ ಉಸಾಬರಿ ಅಂತ ಹಾಯಾಗಿದ್ವು.

ಈ ನಡುವೆ ಕಾನೂನಿನ ಚೌಕಟ್ಟಿನೊಳಗೆ ನಮ್ಮ ಶಾಸಕರು ವರ್ತಿಸುತ್ತಾರೆ ಎಂಬ ಶುಭ ಸಮಾಚಾರ ನಮಗೆ ಕೇಳಿಬಂದಿತು. ಕರ್ನಾಟಕದ ಎಲ್ಲ ಶಾಸಕರು ಮತ್ತು ಅವರ ಜತೆ ಚುನಾವಣೆಗೆ ನಿಂತು ಸೋತ ಉಳಿದೆಲ್ಲ ಹುರಿಯಾಳುಗಳು ಆಸ್ತಿ ವಿವರ ಸಲ್ಲಿಸಿದ ವರದಿ ಕಿವಿಗೂ ಬಿತ್ತು ಕಣ್ಣಿಗೂ ಬಿತ್ತು.. ಇದನ್ನೇನು ನಾವು ವಿಧಾನಸೌಧ ಅಥವಾ ಚುನಾವಣಾ ಕಚೇರಿಗೆ ಹೋಗಿ ತಂದದ್ದಲ್ಲ. ಥ್ಯಾಂಕ್ಸ್‌ ಟು ಇಂಟರ್‌ನೆಟ್‌ 2004 ನೆ ಸಾರ್ವತ್ರಿಕ ಚುನಾವಣೆಯಲ್ಲಿ ನಿಂತು ಸೋತು ಗೆದ್ದವರ, ನಿಮಗೆ ಪರಿಚಿತ ಮತ್ತು ಅಪರಿಚಿತರಾಗಿರುವ ಎಲ್ಲ ಶಾಸಕರ ಆಸ್ತಿ ವಿವರಗಳು ಇಲ್ಲಿ ಸಿಗುತ್ತವೆ, ಓದಿಕೊಳ್ಳಬಹುದು.

ಮೊದಲಿಗೆ ನಮ್ಮ ಯುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಸ್ತಿ ವಿವರ ಓದುವಿಕೆಯಿಂದ ನಿಮ್ಮ ನ್ಯಾವಿಗೇಷನ್‌ ಆರಂಭವಾಗಲಿ. ಶಾಸಕರು ಸಲ್ಲಿಸಿದ ಅಫಿಡವಿಟ್‌ಗಳ ಪೂರ್ಣ ಜಾತಕವೂ ಮೇಲಿನ ಕೊಂಡಿಯಲ್ಲಿ ಸಿಗುತ್ತದೆ. ಯಾರ್ಯಾರು ಎಷ್ಟು ಆಸ್ತಿ ಮಾಡಿದಾರೆ? ಯಾರು ಮಾಡಿಲ್ಲ? ಯಾರು ಎಲ್ಲಿಂದ ಸಾಲ ತಂದಿದಾರೆ? ಸಾಲ ಕೊಟ್ಟಿರುವುದಾದರೂ ಎಷ್ಟು? ಕೇಸುಗಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ? ಹಣಕಾಸಿನ ವ್ಯವಹಾರಗಳು ಮತ್ತು ಸ್ಥಿರ ಚರ ಆಸ್ತಿಗಳ ಬಿಡಿಬಿಡಿ ವಿವರಗಳನ್ನು ಓದಿಬಿಡಿ. ಜೊತೆಗೆ ಗಂಡ ಹೆಂಡತಿಯ ಹತ್ತಿರ ಎಷ್ಟು ಸಾಲ ಮಾಡಿದ್ದಾನೆ, ಹೆಂಡತಿ ಸ್ವಂತ ಗಂಡನಿಗೆ ಕೊಡಬೇಕಾಗಿರುವ ಬಾಬತ್ತೆಷ್ಟು ಮುಂತಾದ ವಿವರಗಳನ್ನು ಓದಿ ಕಾಕಾನ ಅಂಗಡಿ ಬಳಿ ಸಲಾಡ್ ತಿನ್ನುತ್ತಾ ಸ್ನೇಹಿತರೊಂದಿಗೆ ಸುಮ್ಮನೆ ಹರಟಿಕೊಳ್ಳಿ.

ಈ ನಡುವೆ ನಮ್ಮ ನೇತಾರರ ಆಸ್ತಿ ವಿವರಗಳಲ್ಲಿ ಒಂದು ಪೈಸಾ ಹೆಚ್ಚು ಕಮ್ಮಿ ಆಗಿದ್ದರೆ ನಮ್ಮ ಡಾಟ್‌ ಕಾಮ್‌ ಜವಾಬ್ದಾರಿಯಲ್ಲ. 224 ಹಾಲಿ ಶಾಸಕರ ಮತ್ತು 2004ರ ಚುನಾವಣೆಯಲ್ಲಿ ಸೋತವರ ಲೆಕ್ಕ-ಪಕ್ಕ( ದಟ್ಸ್‌ ಕನ್ನಡ ವಾರ್ತೆ)

English summary
MLAs : Who is worth how much?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X