ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೆಂಕಿಭಯಂಕರ ವಾಹನ

By Staff
|
Google Oneindia Kannada News

ಚೆನ್ನೈ , ಜು. 11 : ವಿಮಾನ ನಿಲ್ದಾಣಗಳಲ್ಲಿ ಉದ್ಭವಿಸುವ ಬೆಂಕಿ, ಬಿರುಗಾಳಿ, ಅಪಘಾತ, ಆಕಸ್ಮಿಕ ಸನ್ನಿವೇಶಗಳನ್ನು ತುರ್ತಾಗಿ ತಹಬಂದಿಗೆ ತರುವುದಕ್ಕೆ ಆಧುನಿಕ ಸೌಲಭ್ಯಗಳು ಅಗತ್ಯ. ಕ್ಷಣಾರ್ಧದಲ್ಲಿ ಮಿಂಚಿನಂತೆ ಸಂಚರಿಸಿ ಬೆಂಕಿ ನಂದಿಸುವ ,ಆಪತ್ತಿನಲ್ಲಿ ಸಿಲುಕಿದವರನನ್ನು ರಕ್ಷಿಸುವ ಸಲಕರಣೆಗಳು ಈಗಿನ ಕಾಲದಲ್ಲಿ ತೀರ ಅವಶ್ಯಕ.ಎಷ್ಟು ಹುಷಾರಾಗಿದ್ದರೂ ಕಮ್ಮಿನೇ.

ಅತ್ಯಾಧುನಿಕ ಮತ್ತು ಆಪತ್‌ಬಾಂಧವ ಸಲಕರಣೆಗಳು ಎಂದು ಬಣ್ಣಿಸಬಹುದಾದ [Airport Fire Fighting and Rescue Vehicles] ಎರಡು ಶಕ್ತಿಶಾಲಿ ವಾಹನ-ವಾಹಕಗಳನ್ನು ಇಂದು ಚೆನ್ನೈ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗೆ ಭರ್ತಿ ಮಾಡಲಾಯಿತು.ಈ ವಾಹನಗಳ ಸಾಮರ್ಥ್ಯವೆಂದರೆ ತಟಸ್ಥ ಸ್ಥಿತಿಯಿಂದ ಏಕಾಏಕಿ 80 ಕಿಲೋಮೀಟರ್‌ ದೂರಕ್ಕೆ ಜಿಗಿಯಬಲ್ಲಷ್ಟು ಬಲ. ಅದೂ 25 ಸೆಕೆಂಡುಗಳಲ್ಲಿ. ಈ ವಾಹನಗಳನ್ನು ಆಸ್ಟ್ರಿಯಾದ ರೋಸೆನ್‌ಬಾರ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಎರಡೂ ವಾಹನಗಳ ಒಟ್ಟು ಬೆಲೆ 4.5 ಕೋಟಿ ರೂಪಾಯಿ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ವ್ಯವಸ್ಥೆಯಿಲ್ಲ. ಬೆಂಕಿ ಆರಿಸುವ ಅನಿಲ ಕೊಳವೆಗಳು ಮತ್ತು ಮರಳು ಡಬ್ಬಗಳು ಇವೆ. ಆದರೆ, ಚೆನ್ನೈ ವಿಮಾನ ನಿಲ್ದಾಣದ ಆಡಳಿತ- ಆಲೋಚನೆಗಳೇ ಬೇರೆ. ಅಲ್ಲಿನ ಸವಾಲುಗಳೂ ಬೇರೆಬೇರೆ.

( ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X