• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಮಗಳೂರು ಎನ್‌ಕೌಂಟರ್: ಐವರು ನಕ್ಸಲರು ಫಿನಿಷ್!

By Staff
|

ಮಂಗಳೂರು : ಮಾವೋವಾದಿ ಗುಂಪಿನ ನಕ್ಸಲರು ಮತ್ತು ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ಐವರು ನಕ್ಸಲೀಯರು ಮಂಗಳವಾರ ಬೆಳಗ್ಗೆ ಬಲಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರಿಗೆ ಗುಂಡು ತಗಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಯುಎನ್ಐ ಪ್ರತಿನಿಧಿಗೆ ಐಜಿಪಿ ಎ.ಎಂ.ಪ್ರಸಾದ್ ಮಾಹಿತಿ ನೀಡಿದ್ದಾರೆ.

ಅರಣ್ಯದೊಳಗಿನ ಮನೆಯಲ್ಲಿ ಏಳು ಮಂದಿ ನಕ್ಸಲೀಯರು ಅಡಗಿದ್ದರು. ಖಚಿತ ಮಾಹಿತಿಯನ್ವಯ ನಕ್ಸಲೀಯರ ಬಂಧಿಸಲು ಪೊಲೀಸರು, ಮನೆಯನ್ನು ಸೋಮವಾರ ರಾತ್ರಿಯಿಂದಲೇ ಸುತ್ತುವರೆದಿದ್ದರು. ಶರಣಾಗಲು ನಿರಾಕರಿಸಿದ ನಕ್ಸಲೀಯರು ಏಕಾಏಕಿ ಗುಂಡು ಹಾರಿಸತೊಡಗಿದರು.

ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಬಲಿಯಾಗಿದ್ದು, ಇಬ್ಬರು ಕಾಡಿಗೆ ನುಸುಳಿ ಪರಾರಿಯಾಗಿದ್ದಾರೆ. ಮೃತರನ್ನು ಗೌತಮ್, ಪರಮೇಶ್, ಕಾವೇರಿ, ರಾಮೇಗೌಡ ಮತ್ತು ಸುಬ್ರಹ್ಮಣ್ಯ ಎಂದು ಗುರ್ತಿಸಲಾಗಿದೆ.

ನಕ್ಸಲರ ಹೆಜ್ಜೆ : ಪೊಲೀಸರ ಮಾಹಿತಿದಾರ ಎಂಬ ಸಂಶಯದಿಂದ, ವ್ಯಕ್ತಿಯೊಬ್ಬನನ್ನು ನಕ್ಸಲರು ಈ ಭಾಗದಲ್ಲಿ ಇತ್ತೀಚೆಗೆ ಕೊಂದಿದ್ದರು. ನಕ್ಸಲರು ಮತ್ತು ಅವರ ಬೆಂಬಲಿಗರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದನ್ನು ವಿರೋಧಿಸಿ, ಬಸ್ ಸುಟ್ಟು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಮೊನ್ನೆಯಷ್ಟೇ ಬಿಜೆಪಿ ಮುಖಂಡರೊಬ್ಬರ ಮನೆಗೆ ನುಗ್ಗಿ ಬೆದರಿಸಿದ್ದರು.

(ಯುಎನ್ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more