• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲಾಂ ಬರುವುದನ್ನೇ ಕಾಯುತ್ತಿದೆ ರಾಮೇಶ್ವರಂ!

By Staff
|


Rameswaram eagerly awaits Kalams return ರಾಮೇಶ್ವರಂ : ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಈ ತಿಂಗಳ ಅಂತ್ಯಕ್ಕೆ ಮಾಜಿ ರಾಷ್ಟ್ರ್ಪಪತಿ. ದುಡಿದು ದಣಿದಿರುವ ಕಲಾಂ, ವಿಶ್ರಾಂತ ದಿನಗಳನ್ನು ರಾಮೇಶ್ವರದಲ್ಲಿ ತಮ್ಮೊಂದಿಗೆ ಕಳೆಯಲಿ ಎಂಬ ಹಂಬಲ ಅವರ ಹಿರಿಯ ಸಹೋದರನಲ್ಲಿದೆ.

ಕಲಾಂ ತವರು ನೆಲಕ್ಕೆ ಬಂದು, ನಮ್ಮೊಂದಿಗೆ ನೆಲೆಸಲಿ. ಅವರಿಗಾಗಿ ಮನೆಯನ್ನು ಆಧುನೀಕರಣಗೊಳಿಸಿದ್ದೇವೆ. ಪ್ರೀತಿಯ ತಮ್ಮ(ಕಲಾಂ) ನನ್ನ ಜೊತೆ ಎಂದೂ ಸುದೀರ್ಘವಾಗಿ ವಾಸಿಸಿಲ್ಲ. ಕನಿಷ್ಠ ಈಗಲಾದರೂ ಬರಲಿ. ನನ್ನ ತಮ್ಮ ಬಂದೇ ಬರುತ್ತಾನೆ ಎಂದು ಮುತು ಮೀರನ್ ಮರೈಕ್ಕರ್ ಹೇಳಿದ್ದಾರೆ.

ಪಲ್ಲಿವಸಲ್ ಸ್ಟ್ರೀಟ್‌ನಲ್ಲಿ‌ರುವ ಈ ಮನೆಯಲ್ಲಿಯೇ ಅಕ್ಟೋಬರ್ 15,1931ರಂದು ಕಲಾಂ ಜನಿಸಿದರು. ಈಗ ಮೊದಲ ಮಹಡಿ ರಿಪೇರಿ ಮಾಡಿದ್ದೇವೆ. ಅವರಿಗೆ ಇಲ್ಲಿ ಎಲ್ಲಾ ವ್ಯವಸ್ಥೆಗಳಿವೆ. ರಾಷ್ಟ್ರದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ(2002), ಕಲಾಂ ಈ ಮನೆಗೆ ಬಂದಿದ್ದರು. ಆವಾಗ ಈ ಕೋಣೆಯಲ್ಲಿ ತಂಗಿದ್ದರು ಎನ್ನುತ್ತಾರೆ ಅವರ ಸಹೋದರ.

ಕಲಾಂ ಮನೆಯೆಂದು, ಅನೇಕ ಪ್ರವಾಸಿಗರು ನಮ್ಮ ಮನೆಗೆ ಬರುತ್ತಾರೆ. ನನಗಂತೂ ಖುಷಿ ಎನ್ನುವ ಮರೈಕ್ಕರ್, ತಮ್ಮ 89ನೇ ವಯಸ್ಸಿನಲ್ಲಿಯೂ ಬಂದವರನ್ನು ನಡುಗುವ ಕೈಗಳಿಂದಲೇ ಆತ್ಮೀಯತೆಯಿಂದ ಸ್ವಾಗತಿಸುತ್ತಾರೆ.

ಈ ಕರಾವಳಿ ಪಟ್ಟಣದಲ್ಲಿನ ಎಲ್ಲಾ ಅಂಗಡಿಗಳು ಕಲಾಂ ಹೆಸರು ಮತ್ತು ಪೋಟೋಗಳನ್ನು ಹೊಂದಿವೆ.

ಸಲೂನ್ ಮುಂದೆ, ಕಲಾಂ ಶೈಲಿಯ ಕೇಶ ವಿನ್ಯಾಸ ಇಲ್ಲಿ ಲಭ್ಯ ಎಂಬ ಫಲಕಗಳೂ ಬಂದಿವೆ. ತಮ್ಮೂರಿನ ಹೀರೋ ಕಲಾಂಗೆ, ಎರಡನೇ ಅವಧಿಗೆ ರಾಷ್ಟ್ರಪತಿ ಸ್ಥಾನ ಸಿಗದ ಬಗ್ಗೆ ಊರಿನ ಜನರಿಗೆ ಅಸಮಧಾನ.

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more