ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊತ್ತ 1.5ಲಕ್ಷ ಡಾಲರ್! ಇದು ಇನ್ಫೋಸಿಸ್ ಅವಾರ್ಡ್!

By Staff
|
Google Oneindia Kannada News

ಬೆಂಗಳೂರು : ಸದ್ಯದಲ್ಲೇ ಒಂದೂವರೆ ಲಕ್ಷ ಡಾಲರ್ ಮೊತ್ತದ ಜಾಗತಿಕ ಪ್ರಶಸ್ತಿಯೊಂದನ್ನು ಇನ್ಫೋಸಿಸ್ ಸ್ಥಾಪಿಸಲು ಮುಂದಾಗಿದೆ. ಗಣಕಲೋಕದ ಪ್ರತಿಷ್ಠಿತ ಗೌರವ ಎಂಬ ಮನ್ನಣೆಗೆ ಈ ಪ್ರಶಸ್ತಿ ಪಾತ್ರವಾಗುವ ಸಾಧ್ಯತೆಗಳಿವೆ.

ನ್ಯೂಯಾರ್ಕ್ ಮೂಲದ ಆಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಷಿನರಿ(ಎಸಿಎಂ) ಎಂಬ ವಾಣಿಜ್ಯ ಉದ್ದೇಶವಿಲ್ಲದ ಸಂಸ್ಥೆ ಮೂಲಕ ಪ್ರಶಸ್ತಿ ಪ್ರಕ್ರಿಯೆಗಳು ನಡೆಯಲಿವೆ. ಈ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿವರ್ಷ ಬೆಂಗಳೂರಿನಲ್ಲಿ ಜರುಗಲಿದೆ ಎನ್ನಲಾಗಿದೆ.

ಇಂಟೆಲ್ ಕಾರ್ಪೋರೇಷನ್ ಸಂಸ್ಥೆಯ ಟ್ಯೂರಿಂಗ್ ಪ್ರಶಸ್ತಿಯನ್ನು ಈವರೆಗೆ ಅತಿ ದೊಡ್ಡ ಜಾಗತಿಕ ಪ್ರಶಸ್ತಿ ಎಂದು ಗುರ್ತಿಸಲಾಗಿದೆ. ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ಡಾಲರ್.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X