ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು :ಕಸದ ರಾಶಿಯಲ್ಲಿ ಮನುಷ್ಯ ತಲೆಬುರುಡೆಗಳು!

By Staff
|
Google Oneindia Kannada News


ವರದಿ : ಶ್ರೀನಿಧಿ ಡಿ. ಎಸ್.
ಚಿತ್ರಗಳು : ದಯಾನಂದ ಕುಕ್ಕಜೆ.

Human Bones, skulls found in dust bins
ಮಂಗಳೂರು : ಹಂಪನಕಟ್ಟೆಯ ಹಳೆ ಬಸ್ ಸ್ಟ್ಯಾಂಡಿನ ಕಸದ ರಾಶಿಯಲ್ಲಿ ಸೋಮವಾರ ಮಧ್ಯರಾತ್ರಿ ಮಾನವ ಮೂಳೆಗಳ ಅವಶೇಷಗಳು ಪತ್ತೆಯಾಗಿವೆ. ತಲೆಬುರುಡೆಗಳು, ಅಸ್ತಿ ಅವಶೇಷಗಳು ತಿಪ್ಪೆಗುಂಡಿಯಲ್ಲಿ ಪ್ರತ್ಯಕ್ಷವಾಗಿವೆ. ನಗರ ಪಾಲಿಕೆಯ ಕಾರ್ಮಿಕರೊಬ್ಬರು ಕಸದ ರಾಶಿಯನ್ನ ಎಂದಿನಂತೆ ವಿಲೇವಾರಿ ಮಾಡಲು ಹೊರಟಾಗ ಈ ವಿಷಯ ಬೆಳಕಿಗೆ ಬಂತು.

ತಲೆಬುರುಡೆ- ಮತ್ತು ಇತರ ಮೂಳೆಗಳು ಇರುವ ಸುದ್ದಿ ಹರಡುತ್ತಿದ್ದಂತೆಯೇ ಮಂಗಳೂರಿನಲ್ಲಿ ಗುಲ್ಲಾಯಿತು. ಜನ ಸೇರಲಾರಂಭಿಸಿದರು. ಆನಂತರ, ಹತ್ತಿರದ ಬಂದರು ಪೋಲೀಸ್ ಠಾಣೆಯಿಂದ ಪೋಲೀಸರೂ ಆಗಮಿಸಿ ಪರಿಶೀಲಿಸಿದರು. ಸ್ಥಳವನ್ನು ಹತೋಟಿಗೆ ತೆಗೆದುಕೊಂಡರು.

ಇಲ್ಲಿ ಲಭ್ಯವಾದ ಮೂಳೆ- ತಲೆಬುರುಡೆಗಳು ಮೇಲ್ನೋಟಕ್ಕೆ ಸಣ್ಣ ಮಕ್ಕಳದಂತೆ ಕಾಣುತ್ತಿದ್ದು ಪೂರ್ತಿ ಚಿತ್ರಣ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ. ದೇಶದ ಹಲವೆಡೆ ಮಕ್ಕಳ ಹತ್ಯೆ ( ನೊಯಿಡಾ ಪ್ರಕರಣ) ನಡೆಯುತಿದ್ದು, ಈ ತಲೆಬುರುಡೆಗಳೂ ಕೂಡ ಅಂಥವೇ ಕೃತ್ಯದ ಫಲಶೃತಿಯೇ ಎಂಬ ಅನುಮಾನ ಕಾಡುತ್ತಿದೆ.

ಆದರೆ, ಪೋಲೀಸ್ ಮೂಲಗಳು ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದು, ಮೂಳೆಗಳು ಮಂಗಳೂರಿನ ಯಾವುದಾದರೂ ಮೆಡಿಕಲ್ ಕಾಲೇಜು- ಸಂಸ್ಥೆಗಳದಾಗಿರಬಹುದು ಎನ್ನುತ್ತಾರೆ. ಶಿಕ್ಷಣ ಸಂಬಂಧೀ ಪ್ರಯೋಗ ಇತ್ಯಾದಿಗಳಿಗೆ ಬಳಸಲ್ಪಟ್ಟ ಮೂಳೆಗಳನ್ನ ಅಲ್ಲಿನ ನೌಕರರು ಸರಿಯಾಗಿ ಎಸೆಯದೇ, ಇಲ್ಲಿನ ಕಸದ ರಾಶಿಗೆ ತಂದೆಸೆದಿರಬಹುದು ಎನ್ನುವುದು ಅವರ ಅನುಮಾನಗಳಲ್ಲಿ ಒಂದು. ಹೇಗೂ ಕಾರ್ಪೋರೇಶನ್ ದಿನವೂ ಕಸವನ್ನ ಒಟ್ಟುಗೂಡಿಸಿ ನಗರದ ಹೊರವಲಯದ ಪಚ್ಚನಾಡಿಗೆ ಸಾಗಿಸುತ್ತದೆ, ತಮ್ಮ ಕೆಲಸ ಕಡಿಮೆಯಾಗುತ್ತದೆಂದು ಅವರುಗಳು ಈ ರೀತಿ ಮಾಡಿರಬಹುದು ಎನ್ನುತ್ತಾರೆ ಬಂದರು ಪೋಲೀಸ್.

ಕಸದ ರಾಶಿಯ ಒಳಗೆಲ್ಲೋ ಹುದುಗಿದ್ದ ಈ ಮೂಳೆಯ ಚೂರುಗಳು ಮತ್ತು ತಲೆಬುರುಡೆ ಗುಜುರಿ ಹೆಕ್ಕುವರು, ಭಿಕ್ಷುಕರು, ನಾಯಿಗಳ ಕೆದಕಾಟದಿಂದ ಹೊರ ಬಂದಿರುವ ಸಾಧ್ಯತೆಗಳಿವೆ. ಬಂದರು ಪೋಲೀಸರು ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ವರದಿಗಳಿಗಾಗಿ ಎದುರು ನೋಡಲಾಗುತ್ತಿದೆ.

ಕಸದ ರಾಶಿಯಲ್ಲಿ ಮಾನವನಮೂಳೆಗಳು :ತನಿಖಾ ಚಿತ್ರಗಳನ್ನು ನೋಡಿ

( ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X