• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರೀ ಕನ್ನಡ ಹಾಡು :ಕೆಟ್ಟ ಮೇಲೆ ರೇಡಿಯೋ ಮಿರ್ಚಿಗೆ ಬುದ್ಧಿ ಬಂತು!

By Staff
|


Mirch Masala FM 93.3 an update!ಬೆಂಗಳೂರು : ಕೊನೆಗೂ ಮಿರ್ಚಿಗೆ ಒಸಿ ಬ್ಯಾಡಗಿ ಬಣ್ಣ ಬಂತು ನೋಡಿ!ಬರೀ ಕನ್ನಡ ಹಾಡು ಹಾಕ್ತೀವಿ, ದಯಮಾಡಿ ಕೇಳ್ರಪ್ಪೋ ಎಂದು, ಕನ್ನಡಿಗರಿಗೆ ಅದು ಅಡ್ಡಡ್ಡ ಬೀಳ್ತಾಯಿದೆ! ಕೆಟ್ಟ ಮೇಲೆ ಮಿರ್ಚಿಗೆ ಬುದ್ಧಿ ಬಂದಿದೆ.

ಕರ್ನಾಟಕದಲ್ಲಿ ಕನ್ನಡಕ್ಕೆ "ಮಾರುಕಟ್ಟೆ ಇಲ್ಲ", "ಕನ್ನಡದ ಹಾಡುಗಳಿಗೆ ಹಕ್ಕುಗಳನ್ನು ಪಡೆಯುವುದು ಬಹಳ ಕಷ್ಟ"...ಅಂತೆಲ್ಲ ಅಂದುಕೊಂಡು ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದ ಬೆಂಗಳೂರಿನ ಎಫ್.ಎಂ.ವಾಹಿನಿಗಳಲ್ಲಿ ಮಿರ್ಚಿಯೂ ಒಂದು.

ನಿಮಗೆ ನೆನಪಿರಬಹುದು, 2006ರ ಏಪ್ರಿಲ್ ನಲ್ಲಿ 93.3 ಕಂಪನಾಂಕದಲ್ಲಿ ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ವಾಹಿನಿಯನ್ನು ಆರಂಭಿಸಿದಾಗ ಕೇಳುಗರನ್ನು ತನ್ನತ್ತ ಸೆಳೆಯಲು ಬಳಸಿಕೊಂಡದ್ದು ನಾಗಾಭರಣ, ಕವಿತ ಲಂಕೇಶ್, ಗಿರೀಶ್ ಕಾಸರವವಳ್ಳಿ, ಜಗ್ಗೇಶ್ ಮುಂತಾದ ಕನ್ನಡ ಮನರಂಜನೆ-ಲೋಕದ ದೊಡ್ಡದೊಡ್ಡ ಹೆಸರುಗಳನ್ನೇ. ಆದರೆ ಬರಬರುತ್ತ ಅದೇನು ತಲೆ ತಿರುಗಿತೋ ಕಾಣೆ...ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಾಲ್ಕು ಜನ ವಲಸಿಗರನ್ನು ಕಂಡು ಅಂಥವರೇ ಇಡೀ ಬೆಂಗಳೂರಿನಲ್ಲೆಲ್ಲ ಇರುವ ಜನ ಅಂತ ತಮಗೆ ತಾವೇ ಅಂದುಕೊಂಡು ಹಿಂದಿಯ ಹುಚ್ಚು ಹಿಡಿಸಿಕೊಂಡಿತು.

ಹಿಂದಿ ಹಾಡು, ಹಿಂದಿ ಜಾಹೀರಾತು...ಹೀಗೆ. ಜನ ಕೇಳಲಿ ಬಿಡಲಿ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಬೆಂಗಳೂರಿನ ನಂಬರ್ 1 ವಾಹಿನಿ ಎಂದು ಕೊಚ್ಚಿಕೊಂಡಿದ್ದೇನು! ಅಬ್ಬಬ್ಬಬ್ಬಬ್ಬ! ಎಷ್ಟು ಸರಿ ಸುಳ್ಳು ಹೇಳಿದರೂ ಕೇಳುಗರನ್ನು ಸಕ್ಕತ್ತಾಗಿ ಕಳೆದುಕೊಂಡಿದ್ದು ಸುಳ್ಳಾಗಲ್ಲವಲ್ಲ? ಕನ್ನಡ ಹಾಡು ಕಡಿಮೆ ಮಾಡಿದ್ದರಿಂದ ಬೆಂಗಳೂರಿನಲ್ಲಿ ನೆಲೆ ಕಳದುಕೊಳ್ಳುವ ಸ್ಥಿತಿ ಬಂದಿತ್ತು ಮಿರ್ಚಿಗೆ.

24 ಘಂಟೆಗಳ ಏಕೈಕ ಕನ್ನಡ ವಾಹಿನಿ ಎಂದು ಒಳ್ಳೇ ಹೆಸರು ಮಾಡಿದ್ದ ಎಸ್ ಎಫ್. ಎಂ. 93.5 ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಸಮಯದಲ್ಲಿ ತನ್ನ ಒಲವು ಎಲ್ಲಿಗೆ ಎನ್ನುವುದನ್ನು ತೋರಿಸುತ್ತ ಕನ್ನಡವನ್ನು ಕಡಿಮೆ ಮಾಡಿದೆ ಬೇರೆ! ಹೀಗಾಗಿ ಒಂದು ಕಡೆ ಕನ್ನಡ ಹಾಡುಗಳಿಗಾಗಿ ಹಾತೊರೆಯುತ್ತಿರುವ ಬೆಂಗಳೂರಿನ ಜನತೆ, ಮತ್ತೊಂದು ಕಡೆ ಕನ್ನಡ ಪ್ರಸಾರವನ್ನು ಕಡಿಮೆ ಮಾಡಿದ್ದ ಎಸ್ ಎಫ್. ಎಂ., ಮಗದೊಂದು ಕಡೆ ಬೆಂಗಳೂರಿನ ಕೇಳುಗರನ್ನು ಕಳೆದುಕೊಂಡು ಸಾಯುತ್ತಿರುವ ಮಿರ್ಚಿ.

ವ್ಯಾಪಾರಿಗೆ ಇಲ್ಲಿ ಒಳ್ಳೇ ಅವಕಾಶ ಕಾಣದೆಯೇನಿಲ್ಲ, ಮಿರ್ಚಿ ಗಬಕ್ಕನೆ ತಲೆ ಓಡಿಸಿದೆ! ಸ್ವಲ್ಪ ತಲೆ ಉಪಯೋಗಿಸಿ, ಮೀನ-ಮೇಷ ಎಣಿಸದೆ ಕಳೆದ ವಾರದಿಂದ ಮಿರ್ಚಿ ಇನ್ಮೇಲೆ "ಓನ್ಲಿ ಕನ್ನಡ", "ಶೇಕಡ 10 ಅಲ್ಲ, 50 ಅಲ್ಲ, 75 ಅಲ್ಲ 100 ಕ್ಕೆ 100 ಕನ್ನಡ" ಎಂದು ಡೋಲು ಹೊಡಿತಿದೆ!

ಇದು ಮಿರ್ಚಿಯ ಭವಿಷ್ಯಕ್ಕೆ ಒಳ್ಳೇ ಹೆಜ್ಜೇನೇ. ಬೆಂಗಳೂರಿನ ಇತರ ವಾಹಿನಿಗಳಿಗೂ ಇಷ್ಟು ತಲೆ-ಬೆಲೆ ಬರಲಿ ಅಂತ ಹರಸಬೇಕು!ಹೂಂ..

(ಕನ್ನಡದ ಸೋಗುಹಾಕುವವರ ಬುರ್‌ಖ ಸರಿಸಿ ಕಪಾಳ ಸವರುವ ಬರಹಗಳನ್ನು ಕೆತ್ತುವ http://enguru.blogspot.com/ಭೇಟಿಕೊಡಿ.)

(ದಟ್ಸ್ ಕನ್ನಡ ಸ್ನೇಹಸೇತು )

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more