ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾನಗರದಲ್ಲಿ ಸಪ್ನಾ ಬುಕ್ ಹೌಸ್‌ನ ನಾಲ್ಕನೇ ಶಾಖೆ

By Staff
|
Google Oneindia Kannada News

ಬೆಂಗಳೂರು : ಪುಸ್ತಕ ಕೊಳ್ಳಬೇಕು ಅಂದುಕೊಂಡ ತಕ್ಷಣ ಸಪ್ನಾ ಬುಕ್ ಹೌಸ್ ನೆನಪಾಗುತ್ತದೆ. ಓದುಗರಿಗೆ ಹತ್ತಿರವಾಗಲು, ನಾಲ್ಕನೇ ಮಳಿಗೆಯನ್ನು ಸಪ್ನಾ ತೆರೆಯುತ್ತಿದೆ.

ಇಂದಿರಾನಗರದ 80ಅಡಿ ರಸ್ತೆಯಲ್ಲಿ ಸಪ್ನಾ ಮಳಿಗೆ ತಲೆ ಎತ್ತಿದ್ದು, ಭಾನುವಾರ ಬೆಳಗ್ಗೆ 10.30ಕ್ಕೆ ಮಳಿಗೆಯ ಉದ್ಘಾಟನೆಯನ್ನು ಗೃಹ ಸಚಿವ ಎಂ.ಪಿ.ಪ್ರಕಾಶ್ ನೆರವೇರಿಸುವರು. ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಪ್ರೊ.ಕೆ.ನಿಸಾರ್ ಅಹಮದ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಈ ಬಗ್ಗೆ ಸುದ್ದಿಗಾರರಿಗೆ ಸಪ್ನಾ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲೂ ಮಳಿಗೆ ಆರಂಭಿಸುವ ಉದ್ದೇಶ ನಮಗಿದೆ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಮಾತಿನಲ್ಲಿ ಅರ್ಥವಿಲ್ಲ. ಓದುಗರಿಗೆ ಪುಸ್ತಕಗಳನ್ನು ತಲುಪಿಸುವ ಕೆಲಸ ಆಗಬೇಕಾಗಿದೆ ಎನ್ನುವುದು ನಿತಿನ್ ಷಾ ಅಭಿಪ್ರಾಯ.

1967ರಲ್ಲಿ ಆರಂಭವಾದ ಸಪ್ನಾ, ಕಳೆದ ನಾಲ್ಕು ದಶಕಗಳಲ್ಲಿ ವ್ಯಾಪಕವಾಗಿ ಬೆಳೆದಿದೆ. ಗಾಂಧಿನಗರ(ಮುಖ್ಯ ಮಳಿಗೆ), ಸದಾಶಿವನಗರ ಮತ್ತು ಜಯನಗರದಲ್ಲಿ ಈಗಾಗಲೇ ಸಪ್ನಾ ಮಳಿಗೆಗಳು, ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿವೆ.

ನೂತನ ಸಪ್ನಾ ಮಳಿಗೆಯ ವಿಳಾಸ :

ನಂ.2725, 80ಅಡಿ ರಸ್ತೆ,
ಚಿನ್ಮಯ ಕೃಷ್ಣ ದೇಗುಲದ ಎದುರು,
ಇಂದಿರಾನಗರ, ಬೆಂಗಳೂರು.
ದೂರವಾಣಿ : 4045 5999

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X