ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತರ ಮೇಲಿನ ದೌರ್ಜನ್ಯ ಇಳಿಮುಖ:ಓಲೇಕಾರ್

By Staff
|
Google Oneindia Kannada News

ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ. ಓಲೇಕಾರ್ ಅವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕಲ್ಯಾಣ ಮತ್ತು ಸಂರಕ್ಷಣೆಯ ಕಾರ್ಯಕ್ಷಮತೆಯ ಪರಿಶೀಲನಾ ಸಭೆ ನಡೆಸಿದರು

ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ 2006,07ನೇ ಸಾಲಿನಲ್ಲಿ ದಲಿತರ ಮೇಲೆ ದೌರ್ಜನ್ಯ ಕುರಿತ 53 ಪ್ರಕರಣಗಳು ವರದಿಯಾಗಿದ್ದು, ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು 20.77ಲಕ್ಷ ರೂಪಾಯಿಗಳ ಸಹಾಯಧನ ವಿತರಿಸಲಾಗಿದೆ ಎಂದು ಸಭೆ ನಂತರ ಎನ್. ಹೆಚ್. ಓಲೇಕಾರ್ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 92 ಅಂತರ ಜಾತಿ ವಿವಾಹಗಳು ಜರುಗಿದ್ದು, ಸರ್ಕಾರದಿಂದ ಬಂದಿರುವ ಸಹಾಯಧನವನ್ನು ವಿತರಿಸಲಾಗಿದೆ.ಬೆಂಗಳೂರು ನಗರ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣ ಹೊರತುಪಡಿಸಿ ಸಂಘರ್ಷದ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ. ಕಳೆದ ನಾಲ್ಕು ವರ್ಷಗಳ ಅಂಕಿ ಸಂಖ್ಯೆಯನ್ನು ಹೋಲಿಸಿದಾಗ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣ ಇಳಿಮುಖವಾಗಿದೆ ಎಂದು ತಿಳಿಸಿದರು.

* * *

ಕೊರತೆ ಹೇಳಿಕೊಳ್ಳಲು ಜು.9ರಂದು ಸಾರಿಗೆ ಅದಾಲತ್

ಸಾರ್ವಜನಿಕರ ಕುಂದು ಕೊರತೆ ಆಲಿಸುವ ಸಲುವಾಗಿ ಜುಲೈ 9 ಮಧ್ಯಾಹ್ನ 3ಘಂಟೆಗೆ ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೆಂಗಳೂರು (ಕೇಂದ್ರ), ಬಿ.ಡಿ.ಎ. ವಾಣಿಜ್ಯ ಸಂಕೀರ್ಣ, ಕೊಠಡಿ ಸಂಖ್ಯೆ ೦೪, ೨ನೇ ಮಹಡಿ ಕೋರಮಂಗಲ, ಬೆಂಗಳೂರು ಇಲ್ಲಿ ಸಾರಿಗೆ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

* * *

ಜುಲೈ 9ರಂದು ಬಾನುಲಿ ಪಾಠ ಪ್ರಸಾರ

ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ಜುಲೈ 9ರಂದು ಆಕಾಶವಾಣಿ ಬೆಂಗಳೂರು ಕೇಂದ್ರ 2007,08ನೇ ಸಾಲಿನ ಬಾನುಲಿ ಪಾಠ ಪ್ರಸಾರವನ್ನು ಉದ್ಘಾಟಿಸಲಿದ್ದಾರೆ.

ಈಶಾನ್ಯ ವಲಯದ ಕೆಲವು ಜಿಲ್ಲೆಗಳಿಗೆ 3ನೇ ತರಗತಿ ಮಕ್ಕಳಿಗೆ ಪ್ರಾರಂಭವಾದ ಕೇಳಿ ಕಲಿ ಬಾನುಲಿ ಪಾಠ ಕಾರ್ಯಕ್ರಮದಿಂದಾಗಿ ಮಕ್ಕಳ ಕಲಿಕೆಯಲ್ಲಿ ಆದ ಗುಣಾತ್ಮಕ ಬದಲಾವಣೆಗಳನ್ನು ಪರಿಗಣಿಸಿ, ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. 6,7ಮತ್ತು 8ನೇ ತರಗತಿಗಳಿಗೆ ಕೇಳಿ ಕಲಿ ಪಾಠಪ್ರಸಾರವಾಗಲಿದೆ.

* * *

ಸಚಿವರ ಪ್ರವಾಸ

ಸಾರಿಗೆ ಸಚಿವ ಎನ್. ಚಲುವರಾಯಸ್ವಾಮಿ ಅವರು ಗುರುವಾರ,ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅಂದೇ ನಗರಕ್ಕೆ ಹಿಂದಿರುಗುವರು.

* * *

ಕ್ಷೇತ್ರ ವಿಂಗಡಣೆ : ನೂರಾರು ಶಾಸಕರಿಗೀಗ ತಲೆನೋವು!

ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ ಅನೇಕ ಶಾಸಕರು ಮತ್ತು ಸಚಿವರು ಗಲಿಬಿಲಿಗೊಂಡಿದ್ದಾರೆ.

ಎಂಟು ಮಂದಿ ಶಾಸಕರು ಮತ್ತು 85ಶಾಸಕರು, ಹೊಸ ಕ್ಷೇತ್ರ ಹುಡುಕಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವೆಡೆ ಮೀಸಲಾತಿ ಬದಲಾಗಿದ್ದರೆ, ಕೆಲವು ಕ್ಷೇತ್ರಗಳೇ ಮಾಯವಾಗಿವೆ.

ಸಚಿವ ಎಂ.ಪಿ.ಪ್ರಕಾಶ್, ಸಿ.ಚೆನ್ನಿಗಪ್ಪ, ಡಿ.ಟಿ.ಜಯಕುಮಾರ್, ರೇವುನಾಯಕ ಬೆಳಮಗಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಗುರುಪಾದಮ್ಮ ನಾಗಮಾರಪಲ್ಲಿ, ಡಿ.ಕೆ.ಶಿವಕುಮಾರ್ ಕ್ಷೇತ್ರ ಕಳೆದುಕೊಂಡ‌ ಪ್ರಮುಖರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X