• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆವಾಸಿಗಳಿಗೆ ಆತ್ಮತೃಪ್ತಿ ಪರಮಾತ್ಮನ ಸೇವೆ

By Staff
|

Cheers!!ಬೆಂಗಳೂರು : ಇನ್ನು ಮೇಲೆ ಹೊಟೇಲುಗಳಲ್ಲಿ ಎಣ್ಣೆ ಹೀರಿ, ಬಿಲ್ ನೋಡಿ ಹರಳೆಣ್ಣೆ ಮುಖದವರಾಗುವ ಅವಶ್ಯಕತೆಯಿಲ್ಲ. ಹೊಟೇಲ್ ಬದಲು ಮನೆವಾಸಿಗಳಾಗಿ ತೀರ್ಥ ಹೀರಿ ಕೃತಾರ್ಥರಾಗಿ.

ಮನೆವಾಸಗಳಲ್ಲಿ ತಂಗುವ ಪ್ರವಾಸಿಗರು ಸೇವಿಸುವ ಮದ್ಯಕ್ಕೆ ಯಾವುದೇ ತೆರಿಗೆಯನ್ನು ವಿಧಿಸಬಾರದು ಎಂಬ ಹೊಸ ನಿಯಮವನ್ನು ಕರ್ನಾಟಕ ಸರ್ಕಾರ ಜಾರಿಗೆ ತರಲಿದೆ. ಅತಿಥಿಗಳಿಗೆ ಸರಬರಾಜಾಗುವ ಮದ್ಯ ಅವರ ವೈಯಕ್ತಿಕ ಸೇವನೆಗಾಗಿರುವುದರಿಂದ ಸಾಮಾನ್ಯವಾಗಿ ಮದ್ಯದ ಮೇಲಿರುವ ನಿಯಮಗಳು ಇವುಗಳಿಗೆ ಅನ್ವಯವಾಗುವುದಿಲ್ಲ ಎಂದು ಪ್ರವಾಸ ಇಲಾಖೆ ತನ್ನ ಹೊಸ ನಿಯಮಾವಳಿಗಳಲ್ಲಿ ತಿಳಿಸಿದೆ.

ಹೊಟೇಲಿನ ಬದಲು ಈಗಾಗಲೇ ಜಾರಿಯಲ್ಲಿರುವ ಮನೆವಾಸವನ್ನು ಜನಪ್ರಿಯ ಮಾಡಲು ಸರ್ಕಾರ ನಿರ್ಧರಿಸಿದೆ.

ನೊಂದಾಯಿತರಾದವರಿಗೆ ಮದ್ಯ ಸಂಗ್ರಹಿಸಲು ಯಾವುದೇ ಲೈಸೆನ್ಸ್ ಬೇಕಿಲ್ಲ. ಯಾವುದೇ ದಾಖಲೆಗಳನ್ನು ಜೋಪಾನವಾಗಿಡಬೇಕಿಲ್ಲ. ಮನೆವಾಸವನ್ನು ಲಾಭರಹಿತ ಚಟುವಟಿಕೆ ಎಂದು ಪರಿಗಣಿಸಲಾಗಿದೆ. ಇದೆಲ್ಲದರ ಜೊತೆಗೆ ಬಳುವಳಿಯಾಗಿ ಪ್ರೋತ್ಸಾಹಧನ ಬೇರೆ. ಮತ್ತಿನ್ನೇನು ಬೇಕು?

ರಾಜ್ಯದಲ್ಲಿ ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏನಿಲ್ಲವೆಂದರೂ 800ಕ್ಕೂ ಹೆಚ್ಚು ಮನೆಮಾಸದ ವ್ಯವಸ್ಥೆಯಿದೆ. ಇದನ್ನು ಮನಗಂಡ ವಾಣಿಜ್ಯ ತೆರಿಗೆ ಇಲಾಖೆ ಅವರಿಂದ ಸುಪ್ಪತ್ತು ತೆರಿಗೆ ವಿಧಿಸಲು ಸಜ್ಜಾಗಿತ್ತು, ಅಬಕಾರಿ ಇಲಾಖೆ ಗುಂಡು ಲೈಸೆನ್ಸ್ ದರ ಹೇರಲು ಸಜ್ಜಾಗಿತ್ತು, ರೆವೆನ್ಯೂ ಇಲಾಖೆ ಮತ್ತು ಪೊಲೀಸ್ ಇಲಾಖೆಗಳೂ ಇಂಥವೇ ಯೋಜನೆಗಳನ್ನು ಹೂಡಿದ್ದವು.

ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಹಾಗೆ, ಪ್ರವಾಸ ಇಲಾಖೆ ತನ್ನದೇ ಜನಪ್ರಿಯ ದಾರಿಯನ್ನು ಕಂಡುಕೊಂಡಿದೆ.

800 ಇರುವ ಮನೆವಾಸಗಳನ್ನು 1500ಕ್ಕೆ ಏರಿಸುವ ಇರಾದೆಯನ್ನು ಇಲಾಖೆ ಹೊಂದಿದೆ. ಇವುಗಳಲ್ಲಿ ಮದ್ಯವನ್ನು ಎಷ್ಟಾದರೂ ಸಂಗ್ರಹಿಸಿಡಬಹುದು. ಎಷ್ಟಾದರೂ ಸರಬರಾಜು ಮಾಡಬಹುದು. ಮನೆವಾಸಿಗಳಿಗೆ ಎಣ್ಣೆಬಂಡಿ, ಹೊಟೇಲುಗಳಿಗೆ ಎಣ್ಣೆಗುಂಡಿ. ಒಟ್ಟಿನಲ್ಲಿ ಪ್ರವಾಸಿಗರಿಗೆ ಸ್ವರ್ಗ ಮೂರೇ ಗೇಣು. ಆಗಲಿ ಪರಮಾತ್ಮನ ಸೇವೆ ಮನತೃಪ್ತಿ.

ರಂಗೋಲಿ ಕೆಳಗೆ... : ಈ ನಡುವೆ ಸಾರಾಯಿಗೆ ಸಂಚಕಾರ ಬಂದನಂತರ ಅಷ್ಟೇನೂ ಬ್ರಾಂಡಿಂಗ್ ಇಲ್ಲದ ಮದ್ಯದ ನಾನಾ ನಮೂನೆಗಳಿಗೆ ಏಕ್‌ದಂ ಲಾಟರಿ ಹೊಡೆದಿದೆ. ಸಾರಾಯಿಗಿಂತ ಸಸ್ತಾ ಬೆಲೆಯಲ್ಲಿ ದೊರಕುವ ಈ ಬ್ರಾಂಡ್ ಉತ್ಪಾದಕರಿಗೆ ಏಕಾಏಕಿ ಲಾಭದ ಮಾರ್ಗಗಳು ಕಂಡಿವೆ. ಕುಡಿಯುವವರು ಹೇಗೂ ಚಟ ನಿಲ್ಲಿಸುವುದಿಲ್ಲ, ಹಾಗಾಗಿ ಸಣ್ಣಪುಟ್ಟ ಕಂಪನಿಗಳು ತಯಾರಿಸುವ ಚೀಪ್‌ ವಿಸ್ಕಿ, ಬ್ರಾಂಡಿಗೆ ಕುಡುಕರು ಎಡತಾಕುತ್ತಿದ್ದಾರೆ.

ಅಂದಹಾಗೆ ಒಂದು ಸಮೀಕ್ಷೆಯ ಪ್ರಕಾರ ಈ ವರ್ಷದಲ್ಲಿ ಐದು ದಶಲಕ್ಷ ಹೊಸ ಕುಡುಕರು ಮಾರುಕಟ್ಟೆ ಪ್ರವೇಶಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ! ಪರಮಾತ್ಮ!!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X