ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಿನ್ನರ್‌ಗಳಿಗೆ ದುಃಸ್ವಪ್ನವಾಗಿದ್ದ ಕ್ರಿಕೆಟರ್ ಸರ್ದೇಸಾಯಿ ಬಗ್ಗೆ..

By Staff
|
Google Oneindia Kannada News

Former Test cricketer Dilip Sardesai passes awayಮುಂಬಯಿ:ಮಾಜಿ ಟೆಸ್ಟ್ ಆಟಗಾರ ದಿಲೀಪ್ ಸರ್ದೇಸಾಯಿ ಅಂಗಾಂಗಗಳ ವೈಫಲ್ಯದಿಂದ ಸೋಮವಾರ ಅಸುನೀಗಿದರು.ಅವರಿಗೆ 67ವರ್ಷ ವಯಸ್ಸಾಗಿತ್ತು.

ಕಳೆದ ಎರಡು ತಿಂಗಳಿನಿಂದ ಶ್ವಾಸಕೋಶದ ಸೋಂಕಿಗೆ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರು ಪತ್ನಿ, ಪುತ್ರಿ ಹಾಗೂ ಪುತ್ರ ಹೆಸರಾಂತ ಸಿಎನ್ನೆನ್ ಐಬಿನ್ ಟಿವಿ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರನ್ನು ಅಗಲಿದ್ದಾರೆ.

ಸರ್ದೇಸಾಯಿಯವರ ಬಗ್ಗೆ ಒಂದಿಷ್ಟು :

1940ರ ಆಗಷ್ಟ್8ರಂದು ಮಾರ್ಗೋವಾದಲ್ಲಿ ದಿಲೀಪ್ ನಾರಾಯಣ್ ಸರ್ದೇಸಾಯಿಜನಿಸಿದರು. 1961ರಲ್ಲಿ ಇಂಗ್ಲೆಂಡ್ ವಿರುದ್ಧ ಕಾನ್ಪುರದ ಟೆಸ್ಟ್ ಪಂದ್ಯದೊಂದಿಗೆ ಕ್ರಿಕೆಟ್ ಜೀವನ ಆರಂಭಿಸಿದರು. 1972ರಲ್ಲಿ ತಮ್ಮ ಕೊನೆ ಪಂದ್ಯವನ್ನು ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದರು.

11ವರ್ಷಗಳಲ್ಲಿ ಒಟ್ಟು 30 ಟೆಸ್ಟ್ ಪಂದ್ಯಗಳ 55 ಇನ್ನಿಂಗ್ಸ್ ನಲ್ಲಿ 2001 ರನ್ ಗಳಿಸಿದ್ದರು.39.23 ಸರಾಸರಿಯಲ್ಲಿ ಗಳಿಸಿದ ಮೊತ್ತದಲ್ಲಿ ಒಂದು ದ್ವಿ ಶತಕ ಹಾಗೂ 4 ಶತಕ ಸೇರಿದೆ. 1971ರಲ್ಲಿ ಭಾರತ,ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ ಐತಿಹಾಸಿಕ ಜಯದಲ್ಲಿ ಸರ್ದೇಸಾಯಿಯ ಪಾತ್ರ ಹಿರಿದಾದರು.

ಪ್ರಧಾನಿ ಮನಮೋಹನ್ ಸಿಂಗ್ ,ಬಿಸಿಸಿಐನ ಅಧ್ಯಕ್ಷ ಶರದ್ ಪವಾರ್ ಹಾಗೂ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X