ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ಪಾಟೀಲ್ Vs ಶೇಖಾವತ್ ನಡುವೆ ನೇರ ಸ್ಪರ್ಧೆ

By Staff
|
Google Oneindia Kannada News

ನವದೆಹಲಿ : ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಮತ್ತು ಎನ್‌ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೇಖಾವತ್ ನಡುವೆ, ರಾಷ್ಟ್ರಪತಿ ಸ್ಥಾನಕ್ಕೆ ಹಣಾಹಣಿ ನಡೆಯುವುದು ಸೋಮವಾರ ಸ್ಪಷ್ಟವಾಗಿದೆ.

ರಾಷ್ಟ್ರ್ಪಪತಿ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಇಂದು ಮುಗಿದಿದೆ. ಪ್ರತಿಭಾ ಮತ್ತು ಶೇಖಾವತ್ ಹೊರತು ಪಡಿಸಿ, ಉಳಿದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.

ಜು.19ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ, ಅನೇಕರು ಸ್ಪರ್ಧಿಸಿದ್ದರು. ನಾಮಪತ್ರ ವಾಪಸ್ಸು ಪಡೆಯಲು ಜು.4ಕಡೆಯ ದಿನ. ಜು.21ರಂದು ಮತಎಣಿಕೆ ನಂತರ ಫಲಿತಾಂಶ ಹೊರಬೀಳಲಿದೆ. ಹಾಲಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಧಿಕಾರವಧಿ ಜು.24ಕ್ಕೆ ಮುಕ್ತಾಯವಾಗಲಿದೆ.

ರಾಜಸ್ಥಾನ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪ್ರತಿಭಾ, ಚುನಾವಣೆಗೆ ಸ್ಪರ್ಧಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X