• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನ್‌ಇಂಡಿಯಾ.ಇನ್ ‌ನಿಂದ ಬುಕ್‌ಮಾರ್ಕ್ಸ್ ಸೇವೆ ಶುರು

By Super
|

ಬೆಂಗಳೂರು : ಒನ್‌ಇಂಡಿಯಾ.ಇನ್ ಒನ್‌ಬುಕ್‌ಮಾರ್ಕ್ಸ್.ಕಾಂ ಎಂಬ ಬಹುಭಾಷಾ ಬುಕ್ ಮಾರ್ಕಿಂಗ್ ವೆಬ್‌ಸೈಟೊಂದನ್ನು ಆರಂಭಿಸಿದೆ. ಇದು ಗ್ರಾಹಕ ಸ್ನೇಹಿ ಇಂಟರ್ಫೇಸ್‌ನೊಂದಿಗೆ, ಆರು ಭಾಷೆಗಳ ಲ್ಲಿ ಲಭ್ಯವಿದೆ.ಇದು ಆರು ಭಾಷೆಗಳಲ್ಲಿ ಬಿಡುಗಡೆಯಾದ ಮೊಟ್ಟಮೊದಲ ಸಾಮಾಜಿಕ ಬುಕ್‌ಮಾರ್ಕಿಂಗ್ ವೆಬ್‌ಸೈಟ್ .

ಗ್ರೇನಿಯಂ ಇನ್‌ಫರ್ಮೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್., ಬೆಂಗಳೂರು ಇವರ ಮಾಲೀಕತ್ವದಲ್ಲಿರುವ ಒನ್‌ಇಂಡಿಯಾ.ಇನ್ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿರುವ ಅಂತರ್ಜಾಲ ತಾಣ.ಐದು ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒನ್‌ಇಂಡಿಯಾ ಬುಕ್‌ಮಾರ್ಕಿಂಗ್‌ ಸೌಲಭ್ಯ ಒದಗಿಸುತ್ತಿದೆ. ಹಿಂದಿ, ತಮಿಳು,ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸೌಲಭ್ಯ ಲಭ್ಯ.

ಹೆಚ್ಚುತ್ತಿರುವ ಪ್ರಾದೇಶಿಕ ಅಂತರ್ಜಾಲ ಬಳಕೆದಾರರು ಹಾಗೂ ಅಂತರ್ಜಾಲದಲ್ಲಿ ರಭಸದಿಂದ ಏರುತ್ತಿರುವ ಸ್ಥಳೀಕರಣಗೊಂಡ ವಿಷಯದ ಮಧ್ಯೆ ಸೇತುವೆಯಾಗುವುದು ನಮ್ಮ ಗುರಿ ಎನ್ನುತ್ತಾರೆ ಗ್ರೇನಿಯಂ ಇನ್‌ಫರ್ಮೇಶನ್‌ ಟೆಕ್ನಾಲಜೀಸ್‌ ಪ್ರೈ.ಲಿ., ಸಂಸ್ಥೆಯ ಮುಖ್ಯ ಚಾಲನಾಧಿಕಾರಿ(ಸಿಓಓ)ಶ್ರೀರಾಂ ಹೆಬ್ಬಾರ್ .

ಕೆಲವು ಸರ್ಚ್ ಇಂಜಿನ್‌ಗಳು ಸ್ಥಳೀಯ ಭಾಷೆಗಳಲ್ಲಿಹುಡುಕುವ ಸೌಲಭ್ಯ ನೀಡುತ್ತಿದ್ದು,ಸ್ಥಳೀಯ ವಿಷಯಗಳ ಹುಡುಕು(ಸರ್ಚ್ ಇಂಜಿನ್‌ಗಳು )ವ್ಯವಸ್ಥೆ ನೀಡುವುದು ಕೂಡ ಮುಖ್ಯ ಎಂದು ಶ್ರೀರಾಂ ಅಭಿಪ್ರಾಯಪಟ್ಟಿದ್ದಾರೆ.

ಜಕ್ಸ್‌ಟ್‌ ಕನ್ಸಲ್ಟ್ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ,ಭಾರತದಲ್ಲಿರುವ ಶೇಕಡಾ 41ರಷ್ಟು ನಗರ ಪ್ರದೇಶದ ಅಂತರ್ಜಾಲ ಬಳಕೆದಾರರು ವಿಷಯಗಳನ್ನು ಸ್ಥಳೀಯ ಭಾಷೆಗಳಲ್ಲಿ ಓದಲು ಆದ್ಯತೆ ನೀಡುತ್ತಾರೆ.ಇದಲ್ಲದೆ, ಈಗಾಗಲೇ ದೂರಸಂಪರ್ಕ ಇಲಾಖೆ 2010ನೇ ಇಸವಿ ವೇಳೆಗೆ 1,00,000 ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲಾಗುವುದು ಎಂದು ಘೋಷಿಸಿದೆ. ಡಾಟ್ ಇನ್ ನೋಂದಣಿ ಈಗಾಗಲೇ 2,00,000 ಗಡಿಯನ್ನು ಮುಟ್ಟಿದೆ. ಈ ಎಲ್ಲ ಬೆಳವಣಿಗೆಗಳು ಭವಿಷ್ಯದಲ್ಲಿ ಸ್ಥಳೀಯ ಭಾಷೆಗಳ ವಿಷಯಕ್ಕೆ ಅಗಾಧ ಬೇಡಿಕೆ ಉಂಟಾಗಲಿದೆ ಎನ್ನುವ ಮುನ್ಸೂಚನೆ ನೀಡಿವೆ.

ಒನ್‌ಬುಕ್‌ಮಾರ್ಕ್ಸ್.ಕಾಂ, ಎಲ್ಲ ಬಳಕೆದಾರರಿಗೂ ಆಸಕ್ತಿದಾಯಕ ಹಾಗೂ ಉಪಯುಕ್ತ ಅಂತರ್ಜಾಲ ಸಂಪನ್ಮೂಲಗಳನ್ನು ನೀಡಲಿದೆ. ಇದಲ್ಲದೆ ಬಳಕೆದಾರರು ತಮ್ಮ ಬುಕ್‌ಮಾರ್ಕ್‌ಗಳನ್ನು ಹಂಚಿಕೊಳ್ಳಬಹುದು.ಇತರ ಓದುಗರು ಇಂಗ್ಲಿಷ್ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ(ಯೂನಿಕೋಡ್) ಕೂಡ ನೋಡಬಹುದು. ಲೇಖನ, ಕಥೆ, ಕವನ ಮೊದಲಾದ ಬರಹಗಳು ಹಾಗೂ ಬುಕ್‌ಮಾರ್ಕ್‌ಗಳ ಬಗ್ಗೆ ಇತರರೊಂದಿಗೆ ಹಾಗೂ ನಿಮ್ಮ ಗೆಳೆಯರೊಂದಿಗೆ ಚರ್ಚಿಸಬಹುದು.

ಗ್ರೇನಿಯಂ ಇನ್‌ಫಾರ್ಮೇಶನ್ ಟೆಕ್ನಾಲಜಿ ಪ್ರೈ.ಲಿ.,ನ ಒಂದು ಭಾಗವಾಗಿರುವ ಜನಪ್ರಿಯ ಮತ್ತು ಪ್ರಭಾವಿ ವೆಬ್‌ಸೈಟ್ ಆಗಿರುವ ಒನ್ಇಂಡಿಯಾ.ಇನ್. ಇದು ಭಾರತೀಯ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುತ್ತ, ಜಾಗತಿಕ ಮಟ್ಟದಲ್ಲಿ ಭಾರತೀಯ ಸಮುದಾಯದ ವೇದಿಕೆಯಾಗಿ ರೂಪುಗೊಂಡಿದೆ. 2000ನೇ ಇಸವಿಯಿಂದಲೂ ಒನ್ಇಂಡಿಯಾದ ಪ್ರಾದೇಶಿಕ ಪೋರ್ಟಲ್(ಕನ್ನಡ, ತೆಲುಗು, ತಮಿಳು, ಮಲಯಾಳಂ)ಗಳನ್ನು ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oneindia.in launched OneBookmarks.com, the first multilingual bookmarking website with a user-friendly interface in six different language options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more