ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಥಾಪ್ರಕಾರ ಕೆಎಸ್ಸ್ಸಾರ್ಟಿಸಿ ಪ್ರಯಾಣಿಕರ ಜೇಬಿಗೆ ಬತ್ತಿ?!

By Staff
|
Google Oneindia Kannada News

ಬೆಂಗಳೂರು : ಲಾಭದಲ್ಲಿದ್ದರೂ, ಪ್ರಯಾಣಿಕರ ಜೇಬಿಗೆ ಕೈಹಾಕುವ ಮನಸ್ಥಿತಿಯನ್ನು ಕೆಎಸ್ಆರ್‌ಟಿಸಿ ಬದಲಿಸಿಕೊಂಡಿಲ್ಲ. ಈ ದೂರು ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಕೇಳಿ ಬಂತು. ಈ ದೂರಿಗೆ ಕಾರಣ; ಕೆಎಸ್ಆರ್‌ಟಿಸಿ ಪ್ರಯಾಣ ದರದ ಹೆಚ್ಚಳ!

ಮಧ್ಯರಾತ್ರಿಯಿಂದಲೇ ಪ್ರಯಾಣ ದರವನ್ನು ಸದ್ದಿಲ್ಲದೇ, ಕೆಎಸ್ಆರ್‌ಟಿಸಿ ಹೆಚ್ಚಿಸಿದೆ. ಈ ಸಲ ಪ್ರಯಾಣ ದರ ಹೆಚ್ಚಳಕ್ಕೆ ಬೇರೆ ಸಬೂಬನ್ನು ಸಂಸ್ಥೆ ಮುಂದಿಟ್ಟಿದೆ.

ಬಸ್ ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು, ಹೆಚ್ಚುವರಿ ಪ್ರಯಾಣ ದರದ ಹಣವನ್ನು ಬಳಸಿಕೊಳ್ಳುತ್ತೇವೆ. ಸಾರ್ವಜನಿಕರ ಸಹಕರಿಸಬೇಕು ಎಂಬುದು ಸಾರಿಗೆ ಸಚಿವ ಎನ್. ಚೆಲುವರಾಯ ಸ್ವಾಮಿ ಅವರ ಮನವಿ.

ಪ್ರಯಾಣ ದರ ಎಷ್ಟು ಜಾಸ್ತಿಯಾಗುತ್ತೆ?

ಹೊಸ ಪ್ರಯಾಣ ದರದ ಪ್ರಕಾರ 11ರಿಂದ 20ರೂ. ಒಳಗಿನ ಟಿಕೆಟ್‌ಗಳಿಗೆ 1ರೂ. ಹೆಚ್ಚಳವಾಗಲಿದೆ. ಅದೇ ರೀತಿ 21ರಿಂದ 50ರೂ.ಒಳಗಿನ ಟಿಕೆಟ್‌ಗಳಿಗೆ 2 ರೂ., 51ರಿಂದ 100ರೂ.ವರೆಗಿನ ಟಿಕೆಟ್‌ಗಳಿಗೆ 5ರೂ., 100ರೂ. ಮೇಲ್ಪಟ್ಟ ಟಿಕೆಟ್ ದರ 10ರೂ.ಹೆಚ್ಚಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X