• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭಾ ಪಾಟೀಲ್ ಬೆಂಬಲಕ್ಕೆ ಬಂದ ಸಿಪಿಐನ ಬರ್ಧನ್

By Staff
|


ನವದೆಹಲಿ : ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಿರುದ್ಧ ಮಾಡಿರುವ ಆರೋಪಗಳೆಲ್ಲ ಬಿಜೆಪಿಯ ಹೊಲಸು ಸೃಷ್ಟಿಸುವ ಕಾರ್ಖಾನೆಗೆ ಹಿಡಿದ ಪ್ರತಿಬಿಂಬ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಕೆಂಡ ಕಾರಿದ್ದಾರೆ.

ಅವರು ಸಿಎನ್‌ಎನ್-ಐಬಿಎನ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್‌ಗೆ ತಮ್ಮ ಪಕ್ಷ ನೀಡಿರುವ ಬೆಂಬಲವನ್ನು ಪುಷ್ಟೀಕರಿಸಿಕೊಂಡಿದ್ದಾರೆ.

ಪ್ರತಿಭಾ ಅವರನ್ನು ಅತ್ಯುತ್ತಮ ಆರ್ಥಿಕ ತಜ್ಞ ಅಥವಾ ಬ್ಯಾಂಕೊಂದರ ಮುಖ್ಯಸ್ಥೆ ಎಂದು ತಾವು ಎಂದೂ ಪರಿಗಣಿಸಿಲ್ಲ ಎಂದು ಪ್ರತಿಭಾ ಮಹಿಳಾ ಸಹಕಾರಿ ಬ್ಯಾಂಕ್ ಮುಚ್ಚಿದ್ದರ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಪ್ರತಿಭಾ ಅವರ ಸನಿಹದ ಬಂಧುಗಳು ಅಕ್ರಮವಾಗಿ ಸಾಲ ತೆಗೆದುಕೊಂಡಿದ್ದರೂ ಪ್ರತಿಭಾ ಅವರನ್ನು ಪರೋಕ್ಷವಾಗಿ ಬೆಂಬಲಿಸಿದ್ದ ಆರೋಪ ಕುರಿತು ಪ್ರಶ್ನಿಸಿದಾಗ, ಇದರಲ್ಲಿ ಏನೂ ಆಶ್ಚರ್ಯವಿಲ್ಲ, ಸಹಕಾರಿ ಬ್ಯಾಂಕುಗಳಿಂದ ಅನೇಕ ಜನ ಸಾಲ ತೆಗೆದುಕೊಳ್ಳುತ್ತಾರೆ, ಇದು ಭ್ರಷ್ಟಾಚಾರವೂ ಅಲ್ಲ, ಸ್ವಜನ ಪಕ್ಷಪಾತವೂ ಅಲ್ಲ ಎಂದು ಹೇಳಿದರು.

ಅಷ್ಟೊಂದು ಕಳಂಕಗಳನ್ನು ಹೊತ್ತಿದ್ದರೂ ಪ್ರತಿಭಾರನ್ನು ಬೆಂಬಲಿಸುತ್ತಿರುವುದೇಕೆ ಎಂದು ಕೇಳಿದಾಗ, ಬರ್ಧನ್ ಅವರು ಎಲ್.ಕೆ.ಅಡ್ವಾಣಿಯವರ ಉದಾಹರಣೆ ನೀಡಿ, ಹವಾಲಾ ಹಗರಣದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿ, ಬಾಬರಿ ಮಸೀದಿ ಧ್ವಂಸ ಮಾಡಿದ ಆರೋಪ ಹೊತ್ತಿದ್ದ ವ್ಯಕ್ತಿ ಉಪಪ್ರಧಾನಿಯಾಗಬೇಕಾದರೆ, ಕೇವಲ ವಿಫಲವಾದ ಬ್ಯಾಂಕೊಂದರ ಮುಖ್ಯಸ್ಥೆ ರಾಷ್ಟ್ರಪತಿಯಾಕಾಗಬಾರದು ಎಂದು ಮರುಪ್ರಶ್ನಿಸಿದರು.

ಎಸೆದ ಮಣ್ಣಲ್ಲಿ ಸ್ವಲ್ಪವಾದರೂ ಮೆತ್ತಿಕೊಂಡರೆ ಅಷ್ಟೇ ಸಾಕು ಎನ್ನುವ ಕುತಂತ್ರ ಬಿಜೆಪಿಯದ್ದು ಎಂದು ಅವರು ಕಟಕಿಯಾಡಿದರು.

ಮುಂಬಯಿಯಲ್ಲಿ ನಾಲ್ಕಾರು ಹಾಸ್ಟೆಲ್, ಸಕ್ಕರೆ ಕಾರ್ಖಾನೆ, ಪುಣೆ ಬಳಿ ಶ್ರಮ ಸಾಧನಾ ಟ್ರಸ್ಟ್ ಶಾಲೆ ಹೊಂದಿರುವ ಪ್ರತಿಭಾ ಪಾಟೀಲ್ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಕೇಂದ್ರದ ಹಣ ಬಳಸಿಕೊಂಡಿರುವ, ಸುನಾಮಿಗಾಗಿ ಸಂಗ್ರಹಿಸಲಾದ ಹಣದ ದುರ್ಬಳಕೆ ಮಾಡಿಕೊಂಡ, ಕೊಲೆ ಆರೋಪ ಹೊತ್ತ ಪತಿ, ಸಹೋದರರನ್ನು ಬೆಂಬಲಿಸಿ ರಕ್ಷಿಸಿದ, ನೆಂಟರಿಷ್ಟರಿಗೆ ಯಥೇಚ್ಛವಾಗಿ ಸಾಲ ಕೊಡಿಸಿದ ಆರೋಪಗಳನ್ನು ಹೊತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more