• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಾಫಿಕ್ ಗಿಜಿಬಿಜಿ ತಡೆಯಲು ಬಿಎಮ್‌ಟಿಸಿ ಇನ್ನೊಂದು ಪ್ರಯತ್ನ

By Staff
|


Say goodbye to traffic jam, bye to your bike, carಬೆಂಗಳೂರು : ಆಮೆ ವೇಗದಲ್ಲಿ ಸಾಗುವ ರಶ್ಶೋರಶ್ಶು ಬಿಎಮ್‌ಟಿಸಿ ಬಸ್ಸುಗಳನ್ನು ಕಂಡು ಖಾಸಗಿ ವಾಹನವೇ ಬೆಸ್ಟ್ ಎಂದು ನಿರ್ಧರಿಸಿದ್ದೀರಾ? ಹಾಗಿದ್ದರೆ ಸ್ವಲ್ಪ ತಾಳಿ!

ಜನರಿಂದ ಗಿಜಿಗುಡುತ್ತಿದ್ದರೂ ಶಾಪಿಂಗ್ ಮಾಲ್‌ಗಳಿಗೆ ಹೋದಾಗ ಸಿಗುವ ಖುಷಿ ಇನ್ನು ಮುಂದೆ ಬಿಎಮ್‌ಟಿಸಿ ಬಸ್‌ನಿಲ್ದಾಣಗಳಲ್ಲಿಯೂ ಸಿಗಲಿದೆ. ಹಾಗಂತ ಹೇಳಿದ್ದು, ನಮ್ಮ ರಸ್ತೆ ಸಾರಿಗೆ ಸಚಿವ ಎನ್. ಚೆಲುವರಾಯಸ್ವಾಮಿ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಬಸ್ ಬಿಡ್ತಾ ಇದ್ದಾರೆ ಅಂದುಕೊಳ್ಳಬೇಡಿ.

ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸುವಂತೆ ಮಾಡಲು 3000 ಕೋಟಿ ರು. ಬಂಡವಾಳದ ಯೋಜನೆಯನ್ನು ರಾಜ್ಯ ಸರ್ಕಾರ ಹೂಡಿಕೊಂಡಿದೆ. ಈ ನಿಮಿತ್ತ, ಬೆಂಗಳೂರಿನದ್ಯಂತ 44 ಟ್ರಾಫಿಕ್ ಟ್ರಾನ್ಸಿಟ್ ಮ್ಯಾನೇಜಮೆಂಟ್ ಸೆಂಟರ್‌ಗಳನ್ನು ತೆರೆಯಲಿದೆ ಎಂದು ಅವರು ಯೋಜನೆಯ ರೂಪುರೇಷೆಗಳನ್ನು ಶುಕ್ರವಾರ ವಿವರಿಸಿದರು.

ಈ ಕೇಂದ್ರಗಳಲ್ಲಿ ಬಸ್ ಸೌಕರ್ಯದೊಂದಿಗೆ, ನಿಲುಗಡೆ, ಅಂಗಡಿ ಮುಂಗಟ್ಟುಗಳು, ಹೊಟೇಲುಗಳು, ರಿಸರ್ವೇಷನ್ ಕೌಂಟರ್, ವೈದ್ಯಕೀಯ ಸೇವೆ ಮುಂತಾದ ಸೌಲಭ್ಯಗಳು ಒಂದೇ ಸ್ಥಳದಲ್ಲಿ ದೊರೆಯಲಿವೆ. 10 ಕೋಟಿ ರು. ವೆಚ್ಚದಲ್ಲಿ ಜಯನಗರದಲ್ಲಿ ಈ ಯೋಜನೆಯ ಮೊದಲ ಕೇಂದ್ರ ಕಾರ್ಯರೂಪಕ್ಕಿಳಿದಿದೆ ಎಂದು ಅವರು ತಿಳಿಸಿದರು.

ಯಶವಂತಪುರ ಮತ್ತು ದೊಮ್ಮಲೂರಿನಲ್ಲಿ ಮುಂದಿನ ಕೇಂದ್ರಗಳ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

2006-07ನೇ ವರ್ಷದಲ್ಲಿ ಬಿಎಮ್‌ಟಿಸಿಯೊಂದೇ 224 ಕೋಟಿ ರು. ಲಾಭ ಗಳಿಸಿದ ಸರ್ಕಾರಿ ಸ್ವಾಮ್ಯದ ಸಂಸ್ಥೆ.

ಅಷ್ಟೊಂದು ಲಾಭ ಮಾಡಿದ ಸಂಸ್ಥೆ ಅಷ್ಟೂ ಸೌಲಭ್ಯ ನೀಡಿದರೇನು ತಪ್ಪು ಎಂದು ಅಂದುಕೊಳ್ಳುತ್ತಿರುವಿರಾ? ಹಾಗಾದರೆ, ನಿಮ್ಮ ಬೈಕು, ಕಾರು ಮುಂತಾದವುಗಳನ್ನು ಗ್ಯಾರೇಜಿಗೆ ಸೇರಿಸಿ, ಆಟೋವನ್ನು ಅದರ ಪಾಡಿ ಅದನ್ನು ಬಿಟ್ಟು ಸಾರ್ವಜನಿಕ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿರಿ.

ನಿಮ್ಮ ಬೈಕನ್ನು ಪೊಲೀಸಪ್ಪ ಇಲ್ಲವೆಂದು ಫುಟ್‌ಪಾತ್ ಮೇಲೆ ಹತ್ತಿಸಿದ್ದೂ ಸಾಕು. ಸಿಗ್ಹಾಕ್ಕಿಕೊಂಡಾಗ ಗೊಣಗಿಕೊಂಡು ದಂಡ ಕಟ್ಟಿದ್ದೂ ಸಾಕು. ಆಟೋ, ಸ್ಕೂಟರು, ಯಮಹಾ, ಸುಜುಕಿಗಳು ಬುರ್ರನೆ ಬಿಟ್ಟ ಹೈಡ್ರೋಜನ್ ಮೊನಾಕ್ಸೈಡ್ ಕುಡಿದು ಕೆಮ್ಮಿ, ಕಣ್ಣುಜ್ಜಿಕೊಳ್ಳುತ್ತ ಟ್ರಾಫಿಕ್ಕನ್ನು ಶಪಿಸಿದ್ದೂ ಸಾಕು. ಅಯ್ಯೋ ಇವರ ಭರವಸೆ, ನಮ್ಮ ರಾಮಾಯಣ, ಟ್ರಾಫಿಕ್ ಗೌಜು ಇದ್ದದ್ದೇ ಬಿಡಿ ಎಂದು ಮೂಗು ಮುರಿಯುತ್ತ ಕೂರಬೇಡಿ. ಸೌಲಭ್ಯದ ಬಳಸಿಕೊಳ್ಳಿ. ಟ್ರಾಫಿಕ್ ಜಾಮ್ ಕಡಿಮೆಯಾಗಲು ನಿಮ್ಮದೂ ಸ್ವಲ್ಪ ಪ್ರಯತ್ನವಿರಲಿ. ಆಶಾವಾದಿಯಾಗಿರೋಣ ಏನಂತೀರಾ? ಜೈ ಬಿಎಮ್‌ಟಿಸಿ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more