• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಬರ್‌ ಅಪರಾಧ ತಡೆಗೆ ವೆಬಿ‌ನಾರ್..ನೀವೂ ಭಾಗವಹಿಸಿ..

By Staff
|

Webinar on Cyber Crimes..Image Courtesy : Planetindia.net.ಬೆಂಗಳೂರು : ಸೈಬರ್‌ ಅಪರಾಧಗಳ ಬಗೆಗೆ ಜನಜಾಗೃತಿ ಮೂಡಿಸುವ ಒಂದು ಸೆಮಿನಾರ್‌ ಅಲ್ಲ ವೆಬಿನಾರ್‌ 29 ಜೂನ್ 2007ರ ಶುಕ್ರವಾರ ಸಂಜೆ 4 ಗಂಟೆಗೆ ಅಂತರ್ಜಾಲದಲ್ಲಿ ನಡೆಯಲಿದೆ.

ಸಂಕಿರಣವು ವೆಬ್‌ ಮೂಲಕವೇ ನಡೆಯುವುದರಿಂದ ಇದನ್ನು ವೆಬಿ‌ನಾರ್‌ ಎಂದು ಕರೆಯಲಾಗುತ್ತದೆ. ಸೈಬರ್ ಅಪರಾಧಗಳು ಎಂದ ಮಾತ್ರಕ್ಕೆ ಅದು ತಾಂತ್ರಿಕತೆಯ ಉನ್ನತ ಸ್ಥರಗಳಲ್ಲಿ ಜರಗುವ ಗೋಲ್ಮಾಲ್, ಅಪರಾತಪರಾ, ಮೋಸ, ದಗ, ವಂಚನೆಗಳೆಂದು ಭಾವಿಸುವ ಅಗತ್ಯವಿಲ್ಲ. ವಿದ್ಯುನ್ಮಾನ ದಾಖಲೆಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಅಪರಾಧಗಳು ಜರಗುವ ಸಂಭವವಿದೆ. ಇಂಥ ಅಪರಾಧಗಳನ್ನು ಪತ್ತೆಮಾಡುವ, ತಡೆಯುವ ಜಾಣತನಗಳು ನಮ್ಮ ಸಮಾಜಕ್ಕೆ ಬರಬೇಕಾಗಿದೆ.

ಎಲ್ಲೋ ಯಾರೋ ಅಪರಾಧ ಮಾಡಿದರೆ ಇಡೀ ಸಮಾಜಕ್ಕೆ ಅದರ ಅಡ್ಡ ಪರಿಣಾಮಗಳು ತಾಕುತ್ತವೆ. ಉದಾಹರಣೆಗೆ, ಕಂಪ್ಯೂಟರ್‌, ಸೆಲ್‌ಫೋನ್‌, ಬ್ಯಾಂಕು, ಭೂ ದಾಖಲೆಗಳು, ಎಟಿಎಂ ಪಾಯಿಂಟ್‌ಗಳಲ್ಲಿ ಮೋಸ ಆಗಬಹುದು. ಆದ್ದರಿಂದ ಸೈಬರ್‌ ಅಪರಾಧದ ಬಿಸಿ ಪ್ರತಿಯೊಬ್ಬರಿಗೂ ಅಂದರೆ ಫಾರ್ ಎಕ್ಸಾಂಪಲ್‌ ಎನ್.ಆರ್‌. ನಾರಾಯಣಮೂರ್ತಿಯಿಂದ, ಸಾಲುಮರದ ತಿಮ್ಮಕ್ಕನವರೆಗೆ ಇಂಟರ್‌ನೆಟ್ ಬಳಸುವವರಿಗೆ ಹಾಗೂ ಬಳಸದವರಿಗೂ ತಟ್ಟುತ್ತದೆ.

ಸೈಬರ್‌ ಅಪರಾಧದ ವಾಖ್ಯೆ ವಿಶಾಲವಾದುದು. ವಿದ್ಯುನ್ಮಾನ ದಾಖಲೆಗಳನ್ನು ಉಪಯೋಗಿಸುವ ಜಾಗಗಳಲ್ಲಿ , ಸಂದರ್ಭಗಳಲ್ಲಿ ಯಾವುದೇ ತೆರನಾದ ಹೆಚ್ಚು ಕಮ್ಮಿ ಆದರೆ ಅದು ಸೈಬರ್‌ ಕಾನೂನಿನ ಉಲ್ಲಂಘನೆ ಆಗುತ್ತದೆ. ಸೈಬರ್‌ ಅಪರಾಧಗಳ ವ್ಯಾಪ್ತಿ Information Technology Act 2000ದಿಂದ ಆಚೆಗೂ ಇದೆ. ನಿಮಗೆ ತಿಳಿದಿರಲಿ.

ಈ ವೆಬಿನಾರ್‌ನಲ್ಲಿ ಎಲ್ಲರೂ, ಯಾರು ಬೇಕಾದರೂ ಭಾಗವಹಿಸಬಹುದು. ವಿಚಾರ ವಿನಿಮಯ ಮಾಡಿಕೊಂಡು ಸೈಬರ್‌ ಲೋಕದ ನಿಯಮ, ನಿಯಮಾವಳಿ, ವಿಮರ್ಶೆ ಮಾಡಿಕೊಳ್ಳುತ್ತಾ ಸೈಬರ್‌ ಭೂಗತ ಚಟುವಟಿಕೆಗಳ ಬಗ್ಗೆ ಹೆಚ್ಚು ಅರಿತುಕೊಳ್ಳಬಹುದು.

ವೆಬ್‌ನಾರ್‌ನಲ್ಲಿ ಭಾಗವಹಿಸಲು ಬಯಸುವವರು ಇಂದು ಗುರುವಾರ ಸಂಜೆ 5 ಗಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸೋ, ಹರಿಯಪ್..ಡಿಯರ್ ಪ್ರೆಂಡ್ಸ್

ನೊಂದಾವಣೆಗೆ ಇಲ್ಲಿ ಕ್ಲಿಕ್‌ ಮಾಡಿ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more