• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುಧವಾರ ಸಂಜೆ ಯವನಿಕಾದಲ್ಲಿ ಅಸಹಾಯಕರ ಧ್ವನಿ

By Staff
|

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಅಹಮದಾಬಾದ್‌ನ ದರ್ಪಣ ಅಕಾಡೆಮಿ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್ ಸಂಯುಕ್ತಾಶ್ರದಲ್ಲೊಂದು ವಿನೂತನ ಕಾರ್ಯಕ್ರಮ.

ಸುಪ್ರಸಿದ್ಧ ಅಂತಾರಾಷ್ಟ್ರೀಯ ಕಲಾವಿದೆ ಡಾ ಮಲ್ಲಿಕಾ ಸಾರಾಭಾಯಿಯವರ ಪರಿಕಲ್ಪನೆ, ನಿರ್ದೇಶನ ಸಂಯೋಜನೆಯಲ್ಲಿ, ಹರ್ಷಮಂಡೇಲ್ ವಿರಚಿತ ನೃತ್ಯ ಆಧಾರಿತ ಅನ್‌ಹರ್ಡ್ ವಾಯ್ಸಸ್ ಎಂಬ ಕಾರ್ಯಕ್ರಮವನ್ನು, ಬುಧವಾರ ಸಂಜೆ 6 ಗಂಟೆಗೆ ನೃಪತುಂಗ ರಸ್ತೆಯಲ್ಲಿರುವ ಯವನಿಕಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ನಿತ್ಯ ಜೀವನದ ಬದುಕಿನಲ್ಲಿ ಸಮಾಜದ ತೀರ ಕೆಳಸ್ತರದ ನಿರಾಶ್ರಿತರ, ನಿರ್ಗತಿಕರ ಬದುಕಿನ ಒಂದು ಮುಖವನ್ನು ಪ್ರತಿಬಿಂಬಿಸುವ, ಶೋಷಣೆಯ ವಿರುದ್ಧ ಧ್ವನಿ ಎತ್ತಲಾಗದ ಅಸಹಾಯಕರ ಧ್ವನಿಯಾಗುವ ವಿನೂತನ ಕಥಾವಸ್ತುವಿನ ಪ್ರದರ್ಶನ ಇದು.

***

ರಾಜ್ಯ ಕಾನೂನು ಪ್ರಾಧಿಕಾರಕ್ಕೆ ಹೊಸ ಕಟ್ಟಡ

ಸುಪ್ರೀಂಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಅಶೋಕ್ ಭಾನ್ ಅವರು, ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಬುಧವಾರ ಮಧ್ಯಾಹ್ನ 1.45ಗಂಟೆಗೆ ನಗರದ ಸಿದ್ದಯ್ಯ ರಸ್ತೆಯ ಬೆಂಗಳೂರು ಮಹಾನಗರಪಾಲಿಕೆ ಕಟ್ಟಡದ ನ್ಯಾಯಾ ದೇಗುಲ ಸಂರ್ಕೀಣದಲ್ಲಿರುವ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಹೊಸ ಕಟ್ಟಡವನ್ನು ಅವರು ಉದ್ಫಾಟಿಸುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಹಾಪೋಷಕರಾದ ಸಿರಿಯಾಕ್ ಜೋಸೆಫ್ ಅವರು ವಹಿಸುವರು. ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ವಿ. ಗೋಪಾಲ ಗೌಡ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳುವರು.

***

ಅಂಗವಿಕಲರಿಂದ ನಿವೇಶನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ/ಮನೆ ಪಡೆಯಲು ಅಂಗವಿಕಲರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶೇಕಡ 40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದ್ದು 18 ವಯೋಮಿತಿಯ ದಾಟಿದ ವಾರ್ಷಿಕ ರೂ 17000 ಆದಾಯ ಮಿತಿಯೊಳಗಿರುವವರು ಅರ್ಜಿ ಸಲ್ಲಿಸಬಹುದು.

ನಿಗದಿತ ಅರ್ಜಿಗಳನ್ನು ಪಡೆಯಲು ಹಾಗು ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹತ್ತಿರ, ಹೊಸೂರು ರಸ್ತೆ, ಬೆಂಗಳೂರು - 560 029 ಇಲ್ಲಿ ಸಂಪರ್ಕಿಸಬಹುದು.

***

ಶುಶ್ರೂಷಾ ತರಬೇತಿಗೆ ಅರ್ಜಿ ಆಹ್ವಾನ

ಈ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಶುಶ್ರೂಷಾ ತರಬೇತಿಯು ಮೂರುವರೆ ವರ್ಷಗಳಾಗಿದ್ದು, ಶಿಷ್ಯವೇತನರಹಿತವಾಗಿರುತ್ತದೆ.

ಅರ್ಜಿಯನ್ನು ವಿಕ್ಟೋರಿಯಾ ಆಸ್ಪತ್ರೆ/ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು/ಕೆ.ಆರ್. ಆಸ್ಪತ್ರೆ, ಮೈಸೂರು/ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು/ಸಿ.ಜಿ. ಆಸ್ಪತ್ರೆ, ದಾವಣಗೆರೆ ಹಾಗೂ ಜಿಲ್ಲಾ ಆಸ್ಪತ್ರೆ, ಬೆಳಗಾಂ/ಗುಲ್ಬರ್ಗಾ/ಬಿಜಾಪುರ/ಬಳ್ಳಾರಿ/ಚಿತ್ರದುರ್ಗ ಇವರಿಂದ ನೇರವಾಗಿ ಅಥವಾ ಅಂಚೆ ಮೂಲಕ ಪಡೆಯಬಹುದು. ಅರ್ಜಿ ಶುಲ್ಕ ರೂ. 100. (ಪ.ಜಾ./ಪ.ಪಂ. ವರ್ಗ -1 ಕ್ಕೆ ರೂ. 50).

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more