ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

38 ಕೆಎಎಸ್ ಹಾಗೂ 36 ಐಎಎಸ್ ಅಧಿಕಾರಿಗಳ ವರ್ಗ

By Staff
|
Google Oneindia Kannada News

ಬೆಂಗಳೂರು : ರಾಜ್ಯ ಸರ್ಕಾರ ಪ್ರಮುಖ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಭಾರಿ ಬದಲಾವಣೆ ತಂದಿದೆ.

ಬಿಬಿಎಂಪಿ ಆಯುಕ್ತರಾಗಿ ಡಾ. ಸುಬ್ರಮಣ್ಯ ಹಾಗೂಜಲಮಂಡಳಿ ಅಧ್ಯಕ್ಷೆಯಾಗಿ ಲತಾ ಕೃಷ್ಣರಾವ್ ವರ್ಗ ವರ್ಗವಾಗಿದ್ದಾರೆ.ಕಳೆದ ಎಂಟು ತಿಂಗಳಿನಿಂದ ಖಾಲಿಯಿದ್ದ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ಎಂ.ಆರ್.ಶ್ರೀನಿವಾಸ ಮೂರ್ತಿ ರವರ ಪಾಲಾಗಿದೆ.

ಮೈಸೂರು ಲ್ಯಾಂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್. ವಿಜಯಕುಮಾರ್ ಅವರನ್ನು ಮತ್ತೆ ವರ್ಗಾವಣೆ ಮಾಡಿ, ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾಗಿ ಜಿ.ಕುಮಾರ್ ನಾಯಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಉಳಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಜೈರಾಜ್, ಮದನ್ ಗೋಪಾಲ್, ಲಕ್ಷ್ಮಿ ನಾರಾಯಣ, ಎನ್.ಸಿ. ಮುನಿಯಪ್ಪ ಮತ್ತಿತ್ತರರ ಸ್ಥಾನ ಪಲ್ಲಟವಾಗಿದೆ.

ವರ್ಗಾವಣೆ ಪಟ್ಟಿ ಸೋಮವಾರ ಸಂಜೆಯೆ ಹೊರಬೀಳಬೇಕಾಗಿತ್ತು. ಆದರೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಕತ್ತರಿ ಪ್ರಯೋಗದ ನಂತರ 36 ಅಧಿಕಾರಿಗಳ ವರ್ಗಾವಣೆ ಪಟ್ಟಿ ಯನ್ನು ರಾತ್ರಿ ಸುಮಾರು 10 ಗಂಟೆಗೆ ಹೊರತಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X