ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಗಣೇಶ್ ಸೇರ್ಪಡೆಯಿಂದ ಜೆಡಿಎಸ್‌ಗೇನು ಲಾಭ?

By Staff
|
Google Oneindia Kannada News

ಬೆಂಗಳೂರು : ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಬುಧವಾರ ದೇವೇಗೌಡರ ಜೆಡಿಎಸ್ ಪ್ರವೇಶಿಸಲಿದ್ದಾರೆ.ಇದರಿಂದ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎನ್ನುವುದು ಸಹಜ ಪ್ರಶ್ನೆ.

ದೊಡ್ಡ ಗಣೇಶ್ ಪ್ರವೇಶದಿಂದ ಪಕ್ಷದ ಗ್ಲಾಮರ್ ಹೆಚ್ಚುವುದರಲ್ಲಿ ಎರಡು ಮಾತಿಲ್ಲ. ಯುವಕರನ್ನು ಪಕ್ಷದತ್ತ ಸೆಳೆಯಲು ದೊಡ್ಡ ಗಣೇಶ್ ಸೇರ್ಪಡೆ ಪೂರಕವಾಗಲಿದೆ.
ಬುಧವಾರ ನಡೆಯಲಿರುವ ಜೆಡಿಎಸ್ ಸಮಾರಂಭದಲ್ಲಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ದೊಡ್ಡ ಗಣೇಶ್, ರಾಜಕಾರಣದ ಅಧ್ಯಾಯವನ್ನು ಆರಂಭಿಸಲಿದ್ದಾರೆ.

ಇತ್ತ ಅಜರುದ್ದೀನ್ ಜೆಡಿಎಸ್ ಸೇರುತ್ತಾರೆ ಎಂಬ ವರದಿಗಳನ್ನು ಪಕ್ಷ ತಳ್ಳಿ ಹಾಕಿದೆ. ಬುಧವಾರ ನಡೆಯಲಿರುವ ಜೆಡಿಎಸ್ ಸಮಾರಂಭದಲ್ಲೂ ಅಜುರುದ್ದೀನ್ ಪಾಲ್ಗೊಳ್ಳಲಿದ್ದಾರೆ. ಅವರು ಪಕ್ಷಕ್ಕೆ ನೈತಿಕ ಬೆಂಬಲ ನೀಡಲಿದ್ದಾರೆ ಎಂದು ಜೆಡಿಎಸ್ ಹೇಳಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X