ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವೆಲ್ಲ ಲೈಫ್ನಲ್ಲಿ ಒಂದ್ಸಲ ಅಲ್ಲಿಗೆ ಹೋಗ್ಬೇಕು ಕಣ್ರೀ..

By Staff
|
Google Oneindia Kannada News

ಅಂಥವರು ಇಂಥವರು ಎಸ್ಎಂ ಕೃಷ್ಣ ಅಂಥವರು ಹೋಗ್ತಾರೆ, ನಾವು ಇಲ್ಲೇ ಟಿವಿನಲ್ಲಿ ನೋಡೋಣಂತ ಬಿಡ್ರೀ.

Ivan Lendlಇವಾನ್ ಲೆಂಡಲ್ ಹೆಸರು ನಿಮಗೆ ಗೊತ್ತಿರಬಹುದು. ಅವನ ಆಟದ ವೈಖರಿಯನ್ನೂ ನೋಡಿರಬಹುದು. ಮೆಕೆನ್ರೋ ರೀತಿ ಭಾವೋದ್ರೇಕ, ಸಿಟ್ಟು ಸೆಡವು ಯಾವುದನ್ನೂ ತೋರಿಸಿಕೊಳ್ಳದೆ ಹಲ್ಲು ಕಚ್ಚಿಕೊಂಡು ಆಡುತ್ತಿದ್ದ. ಅಂಡಾಟ ಭಂಢಾಟ ಆಡುತ್ತಿರಲಿಲ್ಲ ಅವನು. ಮಾನಸಿಕವಾಗಿ ತುಂಬಾ ಧೃಡ. ವೆಲ್ ಬಿಹೇವ್ಡ್ ಪಾರ್ಟಿ.

ಅವನ ಜೀವಮಾನದ ಒಂದು ಆಸೆಯೆಂದರೆ ವಿಂಬಲ್ಡನ್ ಟ್ರೋಫಿ ಗೆಲ್ಲುವುದು. ಆಸ್ಟ್ರೇಲಿಯ ಅಮೆರಿಕ ಮತ್ತು ಫ್ರೆಂಚ್ ಓಪನ್ ಪಾರಿತೋಷಕಗಳನ್ನು ಲೀಲಾಜಾಲವಾಗಿ ಗೆದಿದ್ದ ಲೆಂಡಲ್. ಆದರೆ, ಲಂಡನ್ನಿನ ಚುಮುಚುಮು ಮಳೆಯಲ್ಲಿ ಬ್ಯಾಟು ಬೀಸುತ್ತಾ ಹುಲ್ಲುಹಾಸಿನ ಟೆನಿಸ್ ಅಂಗಳದಲ್ಲಿ ಮಿಂಚಬೇಕೆಂಬ ಅವನ ಕನಸು ಕೊನೆಗೂ ನನಸಾಗಲೇ ಇಲ್ಲ. ಪಾಪ.

ವಿಂಬಲ್ಡನ್ನ ಸೆಂಟರ್ ಕೋರ್ಟ್ನನಲ್ಲಿ ಆಡಿ ಪ್ರಶಸ್ತಿ ಗೆಲ್ಲುವುದೆಂದರೆ ಅದು ದೊಡ್ಡ ಮಾತು. ಅದಕ್ಕೆ ಲೆಂಡಲ್ಲು ಹೇಳಿದ್ದ. ಒಂದು ವಿಂಬಲ್ಡನ್ನು ಪ್ರಶಸ್ತಿಗಾಗಿ ನನ್ನ ಉಳಿದೆಲ್ಲ ಪ್ರಶಸ್ತಿಗಳನ್ನೂ ಬಿಟ್ಟುಕೊಡುತ್ತೇನೆ ಅಂತ.

ಅಂಥ, 125 ವರ್ಷಗಳ ಅಮೋಘ ಇತಿಹಾಸವಿರುವ ವಿಂಬಲ್ಡನ್ ಪಂದ್ಯಾವಳಿಗಳು ಇವತ್ತಿನಿಂದ ಆರಂಭವಾಗುತ್ತಿವೆ. ಟೆನಿಸ್ ಪ್ರಿಯರಿಗೆ ಹಬ್ಬವೋ ಹಬ್ಬ. ಇವತ್ತು ಜೂನ್ 25ರ ಮಳೆಗಾಲದ ಸೋಮವಾರ ಸಂಜೆ ಆಟ ಶುರುವಾತ್ತೆ. ಬೇಗ ಮನೆಗೆ ಹೋಗಿ ಇಎಸ್‌ಪಿಎನ್ ಗುಂಡಿ ಒತ್ತಿ.

ಬೋನ್ ಬೋರ್ಗ್ ಸತತ ಐದು ಬಾರಿ ವಿಂಬಲ್ಡನ್ ಗೆದ್ದಿದ್ದ. ಅವನ ದಾಖಲೆಯನ್ನು ಫೆಡರರ್ ಮುರಿತಾನೋ ಬಿಡ್ತಾನೋ ಆಮೇಲೆ ನೋಡೋಣವಂತೆ. ನೀವು ಲಂಡನ್ನಲ್ಲಿದ್ದರೆ ಛತ್ರಿ ಹಿಡಿದುಕೊಂಡು ಚೆರ್ರಿ ಹಣ್ಣು ಬಾಯಿಗೆ ಎಸೆದುಕೊಳ್ಳುತ್ತಾ ಆಟ ನೋಡ್ತಾಯಿರಿ. ನಾವು ಕರ್ನಾಟಕದಲ್ಲಿ ಕಾಂಗ್ರೆಸ್ ಕಡ್ಲೆಕಾಯಿಬೀಜ ತಿನ್ನುತ್ತಾ ಆಟ ನೋಡ್ತೀವಿ. ಬೈ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X