ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ ಗೋಪಾಲಕೃಷ್ಣನ್ ಇನ್ಫೋಸಿಸ್‌ನ ನೂತನ ಸಿಇಓ

By Staff
|
Google Oneindia Kannada News

Kris Gopalakrishnanಬೆಂಗಳೂರು : ಇನ್ಫೋಸಿಸ್‌ನ ಶೇರುದಾರರು ಕ್ರಿಸ್ ಗೋಪಾಲಕೃಷ್ಣನ್ ಅವರನ್ನು ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ 26ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಅವಿರೋಧವಾಗಿ ಸಿಇಓ ಆಗಿ ಆಯ್ಕೆಯಾಗಿದ್ದಾರೆ. ನಂದನ್ ನಿಲೇಕಣಿ ಅವರನ್ನು ಕೂಡ ಇದೇ ಸಮಯದಲ್ಲಿ ಕಂಪನಿಯ ಕೋ-ಚೇರಮನ್ ಆಗಿ ಮುಂದುವರಿಯುವುದಕ್ಕೆ ಅನುಮೋದನೆ ನೀಡಲಾಗಿದೆ.

ಗೋಪಾಲಕೃಷ್ಣನ್ ಅವರು 5 ವರ್ಷಗಳ ಕಾಲ ಈ ನೂತನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಸಿಇಓ ಆಗುವ ಮೊದಲು ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ ದೇಶದ ಎರಡನೇ ಅತಿದೊಡ್ಡ ನಿರ್ಯಾತ ಕಂಪನಿಯ ಎಂಡಿ ಮತ್ತು ಸಿಓಓ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಶೇರುದಾರರನ್ನು ಉದ್ದೇಶಿಸಿ ಮಾತನಾಡಿದ ಇನ್ಫೋಸಿಸ್‌ನ ಚೇರಮನ್ ಮತ್ತು ಚೀಫ್ ಮೆಂಟರ್ ನಾರಾಯಣ ಮೂರ್ತಿ, ಕೋ-ಚೇರಮನ್ ಆಗಿರುವ ನಿಲೇಕಣಿ ಗೋಪಾಲಕೃಷ್ಣನ್ ಅವರಿಗೆ ಗ್ರಾಹಕರೊಡನೆ ಸಂಬಂಧ ಬಲಪಡಿಸುವಲ್ಲಿ ಸಹಾಯಹಸ್ತ ನೀಡಲಿದ್ದಾರೆ ಎಂದರು.

ಇನ್ಫೋಸಿಸ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಾರದ ದಿನದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಜರುಗಿದೆ. ಈ ಸಭೆಯಲ್ಲಿ ಕಾರ್ಯನಿರ್ವಾಹಕೇತರ ಅಧಿಕಾರಿಗಳಿಗೆ ಕಮಿಷನ್ ಮೂಲಕ ನೀಡುವ ಹಣವನ್ನು ಹೆಚ್ಚಿಸುವುದಕ್ಕೂ ಶೇರುದಾರರು ಮತ ಹಾಕಿದರು. ಕಂಪನಿ ಕಾಯ್ದೆಯಲ್ಲಿ ಶೇ.1ರಷ್ಟು ಕಮಿಷನ್ ನೀಡಲು ಅವಕಾಶವಿದ್ದರೂ ಇನ್ಫೋಸಿಸ್ ಕಡಿಮೆ ನೀಡುತ್ತಿತ್ತು.

ಕ್ರಿಸ್ ಗೋಪಾಲಕೃಷ್ಣನ್ ನಂತರ ಶೇರುದಾರರನ್ನು ಉದ್ದೇಶಿಸಿ ಮಾತನಾಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X