ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಒಂದು ಕೆಜಿ ಹೆರಾಯಿನ್ ವಶ, ಇಬ್ಬರ ಬಂಧನ

By Staff
|
Google Oneindia Kannada News

ಬೆಳಗಾವಿ : ನಗರದ ಪೊಲೀಸರು ಎರಡು ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಎಸ್.ಕೆ.ಹೆಗಡೆ, ಕಳೆದ ರಾತ್ರಿ ನಗರದ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಒಂದು ಕಿಲೋ ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರಾದ ಮೊಹಮ್ಮದ್ ಇಕ್ಬಾಲ್ ಅಬ್ದುಲ್ ಸಿದ್ದಿಕಿ ಮತ್ತು ಬಸವರಾಜ ಚಂದ್ರಶೇಖರ ಜಗನೂರ್ ಇಬ್ಬರೂ ಬೆಳಗಾವಿ ಜಿಲ್ಲೆಯವರೇ ಎಂದು ತಿಳಿಸಿದರು.

ರಾಜಸ್ಥಾನದಿಂದ ಕಳುಹಿಸಲ್ಪಟ್ಟ ಈ ಮಾದಕ ದ್ರವ್ಯವನ್ನು, ಇವರಿಬ್ಬರೂ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದರು.

ನಗರ ಪೊಲೀಸರು ಮೇ ತಿಂಗಳ ಕೊನೆಯ ವಾರದಲ್ಲಿ, 22ಕೋಟಿ ರೂಪಾಯಿ ಮೌಲ್ಯದ ಹಶಿಶ್ ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X