ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಗೆ ಬಂದ ಸುನೀತಾ ಬಯಕೆ ಮತ್ತು ಹಂಬಲಗಳು!

By Staff
|
Google Oneindia Kannada News

Sunita Williams is all set to return home on June 21 ಕ್ಯಾಲಿಫೋರ್ನಿಯಾ :ಆತಂಕದ ಕಾರ್ಮೋಡಗಳು ಕರಗಿದ್ದು, ಬಾಹ್ಯಾಕಾಶ ಯಾತ್ರೆ ಮುಗಿಸಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಏಳು ಗಗನಯಾತ್ರಿಗಳು ಭೂಮಿಗೆ ಶನಿವಾರ ಮರಳಿದ್ದಾರೆ.

ಮೊದಲು ಹೇರ್ ಕಟ್ ಮಾಡಿಸಿಕೊಳ್ಳುವುದು ಅವರ ಸದ್ಯದ ಅವಸರ. ಮನೆಗೆ ಮರಳಿ ತಮ್ಮ ಪತಿ ಮತ್ತು ಮೆಚ್ಚಿನ ನಾಯಿಯೊಂದಿಗೆ ಕೆಲ ಹೊತ್ತು ಕಡಲ ತೀರದಲ್ಲಿ ವಿಹಾರ ಮಾಡಲು ಅವರು ನಿರ್ಧರಿಸಿದ್ದಾರೆ. ಜೊತೆಗೆ ಪಿಜ್ಜಾ ಸವಿಯುವ ಬಯಕೆಯೂ ಅವರಲ್ಲಿದೆ.

ಗಗನಯಾತ್ರಿಗಳನ್ನು ಹೊತ್ತ ಅಂತರಿಕ್ಷ ನೌಕೆ ಅಟ್ಲಾಂಟಿಸ್ ಶನಿವಾರಬೆಳಗಿನ 1.19ಕ್ಕೆ ಕ್ಯಾಲಿಫೋರ್ನಿಯಾದಲ್ಲಿ ಭೂಸ್ಪರ್ಶ ಮಾಡಿತು. ವ್ಯತಿರಿಕ್ತ ಹವಾಮಾನದ ಹಿನ್ನೆಲೆಯಲ್ಲಿ ನೌಕೆಯ ಭೂಸ್ಪರ್ಶವನ್ನು ಎರಡು ಸಲ ಮುಂದೂಡಲಾಗಿತ್ತು.

ಸುದೀರ್ಘ 196ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದ ಸುನೀತಾ ದಾಖಲೆ ಸೃಷ್ಟಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X