ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಗಣೇಶ್‌ ಕ್ರಿಕೆಟ್‌ಗೆ ವಿದಾಯ ; ರಾಜಕೀಯದತ್ತ ಒಲವು...

By Staff
|
Google Oneindia Kannada News

ಬೆಂಗಳೂರು : ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶವಂಚಿತ ಕರ್ನಾಟಕದ ಹೆಮ್ಮೆಯ ವೇಗದ ಬೌಲರ್ ದೊಡ್ಡನರಸಯ್ಯ ಗಣೇಶ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದಿರುವುದು ನನಗೇನೂ ನಿರಾಶೆ ತಂದಿಲ್ಲ. ಯಾಕೆಂದರೆ ನಾನು ಕರ್ನಾಟಕದ ಪರಆಡಬಯಸಿದ್ದೆ ಎಂದು ಹೇಳಿದರು.

ಕಳೆದ 11ವರ್ಷದ ನನ್ನ ಕ್ರಿಕೆಟ್ ಜೀವನದಲ್ಲಿನೆರವು ನೀಡಿದ ಹಿರಿಯ ಆಟಗಾರರಾದ ಗುಂಡಪ್ಪ ವಿಶ್ವನಾಥ್, ಬ್ರಿಜೇಶ್ ಪಟೇಲ್ ಹಾಗೂಗೆಳೆಯರಾದ ಅನಿಲ್ ಕುಂಬ್ಳೆ, ವೆಂಕಟೇಶ್‌ಪ್ರಸಾದ್ ಮೊದಲಾದವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.

ಜಾತ್ಯತೀತ ಜನತಾದಳದ ಕಾರ್ಯಕರ್ತರಾಗಿರುವ ದೊಡ್ಡಗಣೇಶ್ ರಾಜಕೀಯ ಸೇರುವ ಆಶಯ ವ್ಯಕ್ತಪಡಿಸಿದರು.

ದೊಡ್ಡಗಣೇಶ್ ಸಾಧನೆ : ಒಟ್ಟು 104 ರಣಜಿ ಪಂದ್ಯಗಳಿಂದ 365 ವಿಕೆಟ್ ಪಡೆದಿದ್ದಾರೆ. 1995-96ರ ಋತುವಿನಲ್ಲಿ ಹರಿಯಾಣದ ವಿರುದ್ಧ 36ರನ್‌ಗೆ 7ವಿಕೆಟ್ ಉರುಳಿಸಿದ್ದು ಅವರ ಅತ್ಯುತ್ತಮ ಸಾಧನೆ.

1997ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್‌ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಜಾರ್ಜ್‌ಟೌನ್‌ನಲ್ಲಿ ನಡೆದ ಪಂದ್ಯ ಅವರ ಕೊನೆಯ ಟೆಸ್ಟ್ ಪಂದ್ಯ.

ದೊಡ್ಡಗಣೇಶ್ ಒಂದೇ ಒಂದು ಏಕದಿನ ಅಂತರಾಷ್ಟ್ರೀಯ ಪಂದ್ಯವಾಡಿದ್ದಾರೆ. ಆ ಪಂದ್ಯ 1997ರಲ್ಲಿ ಜಿಂಬಾಬ್ವೆ ವಿರುದ್ಧ ಬುಲವಾಯೋದಲ್ಲಿ ನಡೆದಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X