• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಿಯ ಕನ್ನಡಿಗರೇ, ನಿಮ್ಮೂರಿಗೆ ನಿಮ್ಮ ನೆರವು...

By Staff
|
ನೀವು ಹುಟ್ಟಿದ, ಓದು ಕಲಿತ, ನಿಮ್ಮೂರಿನ ಬಡ ಮಕ್ಕಳಿಗೆ ಸಹಾಯ ಮಾಡಲು ನಿಮಗೊಂದು ಸದವಕಾಶ.
  • ಶಿವಮೂರ್ತಿ ಕೀಲಾರ, ಶಿಕಾಗೊ

ಪ್ರಿಯ ಕನ್ನಡಿಗರೇ ನಮಸ್ಕಾರ.

Shivamurthy Keelaraಬಹಳ ಸಲ ನಮಗೆ ನಮ್ಮೂರಿನ ಬಡಜನರಿಗೆ ಸಹಾಯ ಮಾಡುವ ಮನಸ್ಸಿರುತ್ತದೆ. ಆದರೆ ನಮ್ಮ ಸಹಾಯವನ್ನು ಅಗತ್ಯವಿದ್ದವರಿಗೆ ತಲುಪಿಸಬಲ್ಲ ಸೂಕ್ತ ವ್ಯವಸ್ಥೆ ಇರುವುದಿಲ್ಲ. ನಾವು ಕಳುಹಿಸಿದ ಸಹಾಯ ತಲುಪಬೇಕಾದ ಕಡೆ ತಲುಪಿಲ್ಲವೆಂಬ ಕೊರಗೂ ನಮ್ಮನ್ನು ಕಾಡುವುದುಂಟು.

ಈ ಸಮಸ್ಯೆಯನ್ನು ಮನಗಂಡ ಅಕ್ಕ’ ಸಂಸ್ಥೆ (Association of Kannada Kootas of America) ಅದಕ್ಕೊಂದು ಸೂಕ್ತ ಮಾರ್ಗ ಕಲ್ಪಿಸಿದೆ.

ನಿಮ್ಮೂರಿನ ಮಕ್ಕಳಿಗೆ ನೋಟ್ ಬುಕ್‌ಗಳನ್ನು ಹಂಚುವುದು ಈ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಒಂದು ಯೋಜನೆ. ನಾನು ಈ ಯೋಜನೆಯನ್ನು ಅಕ್ಕ ಸಮಿತಿಯ ಮುಂದೆ ಮಂಡಿಸಿದೆ. ನಂತರ ಆ ಬಗ್ಗೆ ಚರ್ಚೆಗಳು ನಡೆದು, ಅನೇಕ ರೀತಿಯ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿದ ನಂತರ ಈ ಯೋಜನೆಯನ್ನು ಸಮರ್ಪಕವೆಂದು ಪರಿಗಣಿಸಲಾಯಿತು.

ಈ ಯೋಜನೆಯನ್ನು ನಾನೇ ಆರಂಭದಲ್ಲಿ ಪ್ರಯೋಗಿಸಿ ನೋಡಲು ನಿರ್ಧರಿಸಿದೆ. ನನ್ನ ಹುಟ್ಟೂರು ಮಂಡ್ಯ ಜಿಲ್ಲೆಯ "ಕೀಲಾರ". ಅಲ್ಲಿಯ ಶಾಲಾ ಮಕ್ಕಳಿಗೆ ನೋಟ್ ಬುಕ್‌ಗಳನ್ನು ತಲುಪಿಸುವ ಕಾರ್ಯದಲ್ಲಿ ಯಶಸ್ವಿಯಾದೆ. (ಉದಯ ಟಿವಿಯಲ್ಲಿ 2007, , ಜೂನ್ 12 ರಂದು ರಾತ್ರಿ 8 ಘಂಟೆಯ ವಾರ್ತೆಯಲ್ಲಿ ಈ ಸುದ್ದಿ ವಿವರವಾಗಿ ಪ್ರಸಾರವಾಗಿದೆ).

ನೀವೂ ನಿಮ್ಮೂರಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬಯಸಿದಲ್ಲಿ ವಿವರಗಳು ಈ ರೀತಿಯಾಗಿವೆ :-

ನಾವು ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೋಟ್ ಬುಕ್ಕುಗಳನ್ನು ವಿತರಿಸುವ ಯೋಜನೆಯನ್ನು ಕೈಗೊಂಡಿದ್ದೇವೆ. ಒಂದರಿಂದ ಏಳನೆಯ ತರಗತಿಯ ಮಕ್ಕಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡುವ ಉದ್ದೇಶ ನಮ್ಮದು.

School childrenಸರಕಾರಿ ಶಾಲೆಗಳನ್ನು ಮಾತ್ರ ಈ ಯೋಜನೆಗೆ ಆರಿಸಿಕೊಳ್ಳಲು ಕಾರಣವೇನೆಂದರೆ, ಖಾಸಗಿ ಶಾಲೆಗೆ ಹೋಗುವ ಶಕ್ತಿ ಇಲ್ಲದ ಬಡವರ ಮಕ್ಕಳು ಅಲ್ಲಿ ಮಾತ್ರ ಸಿಗುವುದು ಸಾಧ್ಯ. ಜಾತಿ, ಮತ ಬೇಧವಿಲ್ಲದೆ ಎಲ್ಲಾ ಬಡಮಕ್ಕಳಿಗೂ ನೋಟ್ ಬುಕ್ ನೀಡಲಾಗುತ್ತದೆ. ಈ ಯೋಜನೆ ಕೂಡ ಈಗ ಜನಪ್ರಿಯವಾಗಿರುವ "ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ" ಕಾರ್ಯಕ್ರಮದಂತೆ ಜನಪ್ರಿಯವಾಗುತ್ತದೆನ್ನುವ ನಂಬಿಕೆ ನಮಗಿದೆ.

ನೀವು ಇಲ್ಲಿಂದ ಕಳುಹಿಸುವ ಪುಸ್ತಕವನ್ನು ಮಕ್ಕಳಿಗೆ ತಲುಪಿಸಲು ಸಮರ್ಪಕ ವ್ಯವಸ್ಥೆ ಮಾಡಲಾಗುತ್ತದೆ. ಶಾಲೆಯ ಮುಖ್ಯೋಪಾಧ್ಯಾಯರು, ಊರಿನ ಮುಖ್ಯಸ್ಥರನ್ನೊಳಗೊಂಡ "ಅಭಿವೃದ್ಧಿ ಮಂಡಳಿ" ಪುಸ್ತಕ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತವೆ. ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ "ಸ್ತ್ರೀ ಶಕ್ತಿ" ಕಾರ್ಯಕರ್ತರ ನೆರವನ್ನು ಬಳಸಿಕೊಳ್ಳುವ ಉದ್ದೇಶವೂ ನಮಗಿದೆ. ಊರಿನಲ್ಲಿರುವ ನಿಮ್ಮ ಸಂಬಂಧಿಕರು, ಗೆಳೆಯರು ಕೂಡ ಈ ಕಾರ್ಯದಲ್ಲಿ ನೆರವಾಗಬಹುದಾಗಿದೆ.

ಒಂದು ಪುಸ್ತಕಕ್ಕೆ ಎಷ್ಟು ಖರ್ಚಾಗಬಹುದು ?

ಪ್ರತಿ ನೋಟ್ ಬುಕ್ಕಿಗೆ 7 ರೂಪಾಯಿ ಮತ್ತು ಅಂಚೆವೆಚ್ಚ1 ರೂಪಾಯಿ. ನೀವು ನಿಮ್ಮೂರಿಗೆ ಎಷ್ಟು ಪುಸ್ತಕಗಳನ್ನು ಕಳಿಸಬೇಕೆಂದು ನಮಗೆ ತಿಳಿಸಿದರೆ ಆ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ನೋಟ್ ಬುಕ್‌ಗಳ ಮುಖಪುಟದಲ್ಲಿ ನಿಮ್ಮ ಹೆಸರು, ಕುಟುಂಬದ ಹೆಸರು ಅಥವಾ ನಿಮ್ಮ ಭಾವಚಿತ್ರ, ಹಿಂಬದಿಯ ಪುಟದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವ "ಅಕ್ಕ" ಸಂಸ್ಥೆಯ ಹೆಸರನ್ನು ಪ್ರಕಟಿಸಲಾಗುತ್ತದೆ.

ಈ ಯೋಜನೆಯ ಪ್ರಯೋಜನ ಪಡೆದು ನಿಮ್ಮೂರಿನ ಬಡಮಕ್ಕಳ ಶಿಕ್ಷಣದಲ್ಲಿ ನೆರವಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ನೀವು 500ರಿಂದ 1000 ದವರೆಗೆ ನೋಟ್ ಬುಕ್ಕುಗಳನ್ನು ಕಳುಹಿಸಬಹುದಾಗಿದೆ. "ಅಕ್ಕ" ಅದನ್ನು ಸೂಕ್ತವಾಗಿ ವಿತರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯಲ್ಲಿ ಭಾಗಿಯಾಗಬಯಸಿದಲ್ಲಿ ನಿಮ್ಮ ವಿವರಗಳನ್ನು ನಮಗೆ ಕಳುಹಿಸಿಕೊಡಿ. ನಂತರ "ಅಕ್ಕ" ಬಳಗದಿಂದ ನಿಮ್ಮನ್ನು ಸಂಪರ್ಕಿಸಲಾಗುತ್ತದೆ.

ನಿಮ್ಮೂರಿನಲ್ಲಿರುವ ನೆಂಟರು, ಹಿತೈಷಿಗಳು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರೆ ಅವರ ಹೆಸರು, ವಿಳಾಸಗಳನ್ನು ನಮಗೆ ಕಳುಹಿಸಿಕೊಡಿ. ಅವರನ್ನೂ ಪುಸ್ತಕ ವಿತರಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ಈ ಜನೋಪಯೋಗಿ ಕಾಯಕ್ರಮದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :-

ಶಿವಮೂರ್ತಿ ಕೀಲಾರ

ಅಕ್ಕ’ ಸಂಚಾಲಕ

ಇಮೈಲ್ ವಿಳಾಸ : keelara@gmail.com

ದೂರವಾಣಿ : 847-571-6063

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X