ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯುನ್ನತ ಹುದ್ದೆ ಮಹಿಳೆಯ ಪಾಲಿಗೆ ಸಿಗುವುದೇ?

By Super
|
Google Oneindia Kannada News

Pratibha Patil
ನವದೆಹಲಿ : ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ಕಾಲ ಸಾಧ್ಯತೆಗಳು ನಿಶ್ಚಿತವಾಗುತ್ತಿದೆ.

ಗುರುವಾರ ನಡೆದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಭೆಯಲ್ಲಿ ಹಿರಿಯ ರಾಜಕಾರಣಿ ರಾಜಸ್ಥಾನದ ರಾಜ್ಯಪಾಲೆ ಪ್ರತಿಭಾ ಪಾಟೀಲ್ ಅವರ ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಒಮ್ಮತದಿಂದ ಆರಿಸಲಾಯಿತು ಎಂದು ಸೋನಿಯಾ ಗಾಂಧಿಯವರು ಸುದ್ದಿಗಾರರಿಗೆ ತಿಳಿಸಿದರು.

ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಿಂದ ಕೇಂದ್ರ ಸಚಿವ ಶಿವರಾಜ್ ಪಾಟೀಲ್, ಸುಶೀಲ್ ಕುಮಾರ್ ಶಿಂಧೆ, ಕರಣ್ ಸಿಂಗ್ ಅವರನ್ನು ಎಡಪಕ್ಷಗಳು ಸಾರಾಸಗಟಾಗಿ ತಿರಸ್ಕರಿಸಿದವು ಎನ್ನಲಾಗಿದೆ.

ಜು.19 ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಭಾರವರು ಹಾಲಿ ಉಪರಾಷ್ಟ್ರಪತಿ ಹಾಗೂ ರಾಜಸ್ಥಾನದ ಮೂಲದವರೇ ಆದ ಭೈರೋಸಿಂಗ್ ಶೆಖಾವತ್ ಅವರೊಂದಿಗೆ ಸೆಣಸಬೇಕಾಗಿದೆ.

ರಾಜಸ್ಥಾನ ಮೂಲದ 72 ವರ್ಷದ ಪ್ರತಿಭಾ ಪಾಟೀಲ್ ಅವರು ಮಹಾರಾಷ್ಟ್ರದ ಶಿಕ್ಷಣ ತಜ್ಞ ದೇವಿಸಿಂಗ್ ರಾಮ್‌ಸಿಂಗ್ ಶೆಖಾವತ್ ಅವರ ಪತ್ನಿ.ಮಹಾರಾಷ್ಟ್ರದ ಕಾಂಗ್ರೆಸ್‌ನ ಮೊದಲ ಅಧ್ಯಕ್ಷೆಯಾಗಿದ್ದರು.

(ದಟ್ಸ್ ಕನ್ನಡ ವಾರ್ತೆ)

English summary
Pratibha Patil likely to be India’s first woman Rashtrapati
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X