• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ತೆದಾರಿ ಕಾದಂಬರಿಕಾರ ನರಸಿಂಹಯ್ಯ ಜೊತೆ ಮಾತಾಡಿ

By Staff
|

ಕನ್ನಡದ ಶರ್ಲಾಕ್ ಹೋಮ್ಸ್ ಎಂದೇ ಗುರುತಿಸಲ್ಪಡುವ ಎನ್.ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳನ್ನು ಮರೆತ ಕನ್ನಡಿಗರು ಬಹಳ ಕಡಿಮೆ. ಈಗ ಅವರೊಂದಿಗೆ ಮಾತುಕತೆ ನಡೆಸುವ ಸಂದರ್ಭ ನಮ್ಮ ಮುಂದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಭವನದ ನಯನ ಸಭಾಂಗಣದಲ್ಲಿ ಏರ್ಪಡಿಸುತ್ತಿರುವ " ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಜೂನ್ 16ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಈ ಸಲದ ಅತಿಥಿ ನರಸಿಂಹಯ್ಯ . ಸಾರ್ವಜನಿಕರು ಅವರೊಂದಿಗೆ ಸಂವಾದ ನಡೆಸಬಹುದು.

***

ಅರಣ್ಯ ರಕ್ಷಕರ ಹುದ್ದೆ ನೇರ ನೇಮಕಾತಿ

ಮಾಜಿ ಸೈನಿಕ ಮೀಸಲಾತಿ ಅಡಿಯಲ್ಲಿ 4 ಅರಣ್ಯ ರಕ್ಷಕ ಹುದ್ದೆಗಳಿಗೆ ಒಟ್ಟು 517 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು , ಸದರಿ ಅಭ್ಯರ್ಥಿಗಳಿಗೆ ಡಿಸ್‌ಚಾರ್ಜ್ ಹೊಂದಿದ ಪ್ರಮಾಣ ಪತ್ರ ಸಲ್ಲಿಸಲು ತಿಳಿಸಲಾಗಿತ್ತು. ಒಟ್ಟು 223 ಅಭ್ಯರ್ಥಿಗಳು ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಅನುಬಂಧ-ಬಿ ಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಕಛೇರಿಯ ಸೂಚನಾ ಫಲಕದಲ್ಲಿ ಹಾಗೂ ಅರಣ್ಯ ಇಲಾಖೆಯ ಪ್ರಕಟಿಸಲಾಗಿದೆ.

***

ಸೇನೆಯ ನೇಮಕಾತಿ ಪ್ರಕ್ರಿಯೆ

ಭಾರತೀಯ ಸೇನೆಯು 1998ರಿಂದ ಕೆಲವು ಹುದ್ದೆಗಳನ್ನು ಹೊರತುಪಡಿಸಿ ಮುಕ್ತ ‍ಓಟದ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಯಾವುದೇ ರೀತಿಯ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕಾಗಿಲ್ಲ ಎಂದು ಸೇನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೆಲವು ಮಧ್ಯವರ್ತಿಗಳು ನಕಲಿ ಅರ್ಜಿಗಳನ್ನು ಮುದ್ರಿಸಿ ನಿರುದ್ಯೋಗಿ ಯುವಕರನ್ನು ವಂಚಿಸುತ್ತಿದ್ದು ಈ ಬಗ್ಗೆ ಉದ್ಯೋಗಾಕಾಂಕ್ಷಿಗಳು ಎಚ್ಚರ ವಹಿಸುವಂತೆ ಪ್ರಕಟಣೆ ತಿಳಿಸಿದೆ.

***

ಫ್ಯಾಷನ್ ಮತ್ತು ಗಾರ್ಮೆಂಟ್ ಟೆಕ್ನಾಲಜಿ ತರಬೇತಿ

ತಾಂತ್ರಿಕ ಶಿಕ್ಷಣ ಇಲಾಖೆಯು ಕೆ.ಆರ್. ವೃತ್ತದಲ್ಲಿರುವ ಸರ್ಕಾರಿ ತಾಂತ್ರಿಕ ಜವಳಿ ಸಂಸ್ಥೆಯಲ್ಲ್ಲಿ ಸ್ಧಾಪಿತವಾಗಿರುವ, ಸಿಸಿಟೆಕ್ ಉಪಘಟಕದಲ್ಲಿ ಫ್ಯಾಷನ್ ಮತ್ತು ಗಾರ್ಮೆಂಟ್ ಟೆಕ್ನಾಲಜಿ ವಿಷಯದಲ್ಲಿ ಜುಲೈ 7 ರಿಂದ 1 ವರ್ಷದ ತರಬೇತಿಯನ್ನು ನೀಡಲಿದೆ.

ಆಸಕ್ತ ವಿದ್ಯಾರ್ಥಿಗಳು ತರಬೇತಿಗೆ ರೂ 15,000 ಶುಲ್ಕವನ್ನು ಜೂನ್ 30 ರೊಳಗೆ ಪಾವತಿಸಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣೆ ಸಂಖ್ಯೆ 22267580 ಅಥವ ಮೊಬೈಲ್ ಸಂಖ್ಯೆ 9448705205ಸಂರ್ಪಕಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more