ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಾಜಿತೆರೆಗೆ ಬರಲಿ... ಆಮೇಲೆ ಮುಂದಿನ ಮಾತು!

By Staff
|
Google Oneindia Kannada News

ಬೆಂಗಳೂರು : ಶಿವಾಜಿ ತಮಿಳು ಚಲನಚಿತ್ರ ಬಿಡುಗಡೆಯಾಗಲು ಕೇವಲ 48ಗಂಟೆ ಬಾಕಿಯಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಹುನ್ನಾರಕ್ಕೆ ತಡೆಯೊಡ್ಡಲು ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿದೆ.

ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಾ,ರಾಜ್ಯಾದ್ಯಂತ ಕೇವಲ ನಾಲ್ಕು ಪ್ರಿಂಟುಗಳು,ನಾಲ್ಕು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಗೊಳ್ಳಲಿ. ಆಮೇಲೆ ಚಿತ್ರದ ಪೋಸ್ಟರುಗಳು ಸೇರಿದಂತೆ ಪ್ರಚಾರ ಸಾಮಗ್ರಿಗಳೆಲ್ಲ ಕನ್ನಡದಲ್ಲೇ ಇರಬೇಕು. ತಮಿಳಿನಲ್ಲಿರಕೂಡದು. ಹೊರರಾಜ್ಯದ ಚಿತ್ರಗಳನ್ನು ಪ್ರದರ್ಶಿಸುವಾಗ, ಸ್ಥಳೀಯ ಭಾಷೆಗಳಲ್ಲೇ ಪ್ರಚಾರ ಮಾಡುವ ನಿಯಮವನ್ನು ಎಲ್ಲ ರಾಜ್ಯಗಳೂ ಪಾಲಿಸಿಕೊಂಡು ಬರುತ್ತಿವೆ ಎಂದು ಅವರು ಹೇಳಿದರು.

ಚಿತ್ರ ಬಿಡುಗಡೆಯ ಮಾರ್ಗದರ್ಶಕ ಸೂತ್ರಗಳನ್ನು ಪಾಲಿಸುವಂತೆ ಚಿತ್ರ ವಿತರಕರು, ಅಭಿಮಾನಿ ಸಂಘಗಳು ಹಾಗೂ ಚಿತ್ರಮಂದಿರಗಳಿಗೆ ಕರವೇ ಹೇಳಿದೆ. ಈ ನಿಯಮಗಳನ್ನು ಗಾಳಿಗೆ ತೂರಿದರೆ, ಚಿತ್ರದ ರೀಲುಗಳನ್ನು ವಶಪಡಿಸಿಕೊಳ್ಳಲಾಗುವುದು. ಪರಿಸ್ಥಿತಿ ಎದುರಿಸಲು ಕರವೇ ಪೂರ್ಣ ಸಿದ್ಧಗೊಂಡಿದೆ. ಯಾರಿಗೂ ತಿಳಿಯದಂತೆ ನಮ್ಮ ಕಾರ್ಯಕರ್ತರು ಟಿಕೆಟ್ ಪಡೆದು ಚಿತ್ರಮಂದಿರ ಪ್ರವೇಶಿಸಲಿದ್ದಾರೆ. ಆ ಮೂಲಕ ಎಲ್ಲವೂ ಸರಿಯಾಗಿದೆಯೋ ಏನೋ ಎಂಬುದನ್ನು ಪರಿಶೀಲಿಸಲಿದ್ದಾರೆ ಎಂದು ಅವರು ವಿವರಿಸಿದರು.

ಕಾವೇರಿ ನದಿ ವಿವಾದ ಕುರಿತು ನಟ ರಜನೀಕಾಂತ್‌ರ ನಿಲುವು(ಸದ್ಯಕ್ಕೆ ಜಯಲಲಿತಾರ ಬೆಂಬಲಿಗ ಎಂದು ಬಿಂಬಿತವಾಗಿದ್ದಾರೆ), ಇಂಸೈ ಅರಸನ್ 23ನೇ ಪುಲಿಕೇಶಿ ಎಂಬ ತಮಿಳು ಚಿತ್ರದಲ್ಲಿ ಕನ್ನಡದ ಹೆಮ್ಮೆಯ ಪುಲಿಕೇಶಿ ಹಾಗೂ ಸಂಗೊಳ್ಳಿ ರಾಯಣ್ಣ ಅವರನ್ನು ಅವಮಾನಗೊಳಿಸಿರುವ ಶಂಕರ್ ಈ ಚಿತ್ರದ ನಿರ್ದೇಶಕ.

ತಮಿಳು ಚಿತ್ರಗಳು ಬಿಡುಗಡೆಯಾದನಂತರ ಕನ್ನಡ ಚಿತ್ರಗಳ ಗಳಿಕೆ ಮೇಲೆ ಆಗುವ ದುಷ್ಪರಿಣಾಮ, ಕನ್ನಡದ ಎರಡು ಚಿತ್ರಗಳ ಚಿತ್ರೀಕರಣವನ್ನು ತಮಿಳುನಾಡಿನಲ್ಲಿ ತಡೆದದ್ದು ಎಲ್ಲವೂ ರಕ್ಷಣಾ ವೇದಿಕೆ ಗಮನದಲ್ಲಿದೆ. ಹಾಗಾಗಿ ವೇದಿಕೆ ಈ ನಿಟ್ಟಿನಲ್ಲಿ ಸೂಕ್ತ ಹೆಜ್ಜೆ ಇಡಲಿದೆ ಎಂದು ಮೂಲಗಳು ಹೇಳಿವೆ.

ಕೆಲವು ಚಿತ್ರ ಮಂದಿರಗಳು ಪ್ರದರ್ಶನ ಮಾಡುವುದಾಗಿ ಹೇಳಿವೆ. ಆದರೆ ಯಾವುದೇ ಪ್ರಚಾರ ಮಾಡಲು ನಿರಾಕರಿಸಿವೆ. ಇನ್ನು ಕೆಲವು ಚಿತ್ರಮಂದಿರಗಳು ಚಿತ್ರ ಬಿಡುಗಡೆಯಾಗುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X