• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಡ ವಿದ್ಯಾರ್ಥಿಗಳ ಆಶಾಕಿರಣ ಬಿಹಾರದ ಐ ಡಿಸೈರ್

By Staff
|


ಪಟ್ನಾ: ಉನ್ನತ ವ್ಯಾಸಂಗ ಮಾಡಲು ಆಗದೇ ಪರಿತಪಿಸುವ ಬಡ ವಿದ್ಯಾರ್ಥಿಗಳನ್ನು ಕೈ ಹಿಡಿದು ನಡೆಸುತ್ತಿರುವ ಬಿಹಾರದ ಐ-ಡಿಸೈರ್ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.

ಇವತ್ತು ಪಟ್ನಾದ ಹೋಟೆಲ್‌ವೊಂದರಲ್ಲಿ ಪರಿಚಾರಕನಾಗಿರುವವನ ಮಗ ಐ‌ಐಟಿಯಲ್ಲಿ ತೇರ್ಗಡೆಯಾಗಿದ್ದಾನೆಂದರೆ, ಅದಕ್ಕೆ ಐ-ಡಿಸೈರ್ ಸಂಸ್ಥೆಯೇ ಕಾರಣ. ಬಿಹಾರದ ಐ‌ಐಟಿಯ ಹಳೆಯ ವಿದ್ಯಾರ್ಥಿಗಳು ಸೇರಿ ಕಟ್ಟಿದ ಐ-ಡಿಸೈರ್ ಎಂಬ ಆದಾಯ ರಹಿತ ಶಿಕ್ಷಣ ಸಂಸ್ಥೆ,2002 ರಿಂದ ಈ ರೀತಿ ಅನೇಕ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಮಾರ್ಗದರ್ಶಿಯಾಗಿದೆ.

ಐ‌ಐಟಿ-ಜೆ‌ಇ‌ಇ ಪರೀಕ್ಷೆ ಬರೆಯಲು ಯೋಗ್ಯತೆಯಿದ್ದು, ಹಣಕಾಸು, ಪುಸ್ತಕಗಳ ಕೊರತೆ ಹೀಗೆ ನಾನಾ ಸಮಸ್ಯೆಗಳಿಂದ ಕಷ್ಟಪಡುವ ವಿದ್ಯಾರ್ಥಿಗಳಿಗೆ, ತಾವು ಕಲಿತಿದ್ದನ್ನು ಹೇಳಿಕೊಡುತ್ತಾ, ಮಾಹಿತಿ ಹಂಚಿಕೆಯ ಕಾರ್ಯಕ್ಕೆ ಮುಂದಾಗಿದ್ದೇವೆ. ತಮ್ಮ ತಂಡದಲ್ಲಿ ಐ‌ಐಟಿಯಲ್ಲಿ ಉತ್ತಮ ಅಂಕ ಗಳಿಸಿದ ಪರಿಣತರಿದ್ದಾರೆ. ಅವರ ಅನುಭವಗಳನ್ನು ಆಸಕ್ತ ವಿದ್ಯಾರ್ಥಿಗಳೊಡನೆ ಹಂಚಿಕೊಳ್ಳುತ್ತಾರೆ. ಬಡ ಕುಟುಂಬದ ವಿದ್ಯಾರ್ಥಿಗೆ ಐ‌ಐಟಿಯಲ್ಲಿ ಸೀಟು ಸಿಕ್ಕ ನಂತರ, ಆತನ ಜೀವನ ಶೈಲಿ ಹಾಗೂ ಸಮಾಜದವರು ಆತನ ಕುಟುಂಬವನ್ನು ಕಾಣುವ ರೀತಿಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎನ್ನುತ್ತಾರೆ ಐ ಡಿಸೈರ್ ಸಂಸ್ಥೆಯನ್ನು ಹುಟ್ಟು ಹಾಕಿರುವ ಸುಶೀಲ್ ಸಿಂಗಾನಿಯ .

ಸ್ವತಃ ಕಾನ್‌ಪುರದ ಐ‌ಐಟಿಯಿಂದ ಪದವಿ ಪಡೆದ ಈ ಪ್ರತಿಭಾವಂತ , ಐ-ಡಿಸೈರ್ ಪ್ರಾರಂಭದ ದಿನಗಳಲ್ಲಿ 30 ಜನ ಬಿಹಾರ ಮೂಲದ ಐ‌ಐಟಿಯ ವಿದ್ಯಾರ್ಥಿಗಳು ಸೇರಿ ಸುಮಾರು ಒಂದು ತಿಂಗಳುಗಳ ಕಾಲ ಬಾಕಿ ಕೆಲಸಗಳನ್ನೆಲ್ಲಾ ಬದಿಗೊತ್ತಿ ಐ-ಡಿಸೈರ್ ಸಂಸ್ಥೆಯನ್ನು ರೂಪಿಸಿದೆವು. ಸುಮಾರು 1000ಕ್ಕೂ ಅಕ ಪ್ರತಿಭಾವಂತರಿಗೆ ಉಚಿತವಾಗಿ ತಜ್ಞರಿಂದ ಮಾರ್ಗದರ್ಶನ ನೀಡಲಾಗಿದೆ ಎನ್ನುತ್ತಾರೆ.

2003 ರಲ್ಲಿ ಬಿಹಾರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಉಂಟಾಗಿದ್ದ ಅವ್ಯವಹಾರವನ್ನು ಬಯಲಿಗೆಳೆಯುವ ಸಲುವಾಗಿ ಪ್ರಧಾನಿಯವರಿಗೆ ಪತ್ರ ಬರೆದು ದಿಟ್ಟತನ ತೋರಿ, ಕಡೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಐ‌ಐಟಿಯ ಇಂಜಿನೀಯರ್ ಸತ್ಯೇಂದ್ರ ದುಬೆ ನಮಗೆ ಆದರ್ಶ ಎಂದು ಸುಶೀಲ್ ಹೇಳುತ್ತಾರೆ.

ಸಾಮಾಜಿಕ ಸುಧಾರಣೆ :

ಮಣಿ ಭೂಷಣ್ ಸಿಂಗ್ ಎಂಬ 18ರ ಹರೆಯ ವಿದ್ಯಾರ್ಥಿ ಐ‌ಐಟಿ- ಜೆ‌ಇ‌ಇ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅವನ ತಂದೆಗೆ ಸಮಾಜದಲ್ಲಿ ಗೌರವ ಹಾಗೂ ಕಚೇರಿಯಲ್ಲಿ ಮಾನ್ಯತೆ ದೊರೆತಿದೆಯಂತೆ.

ನನ್ನ ಮಗ ಸಿಬಿ‌ಎಸ್‌ಸಿ ಪರೀಕ್ಷೆ ಬರೆಯಲು ಇಷ್ಟಪಟ್ಟಿದ್ದ, ಆದರೆ, ಹಣಕಾಸಿನ ತೊಂದರೆಯಿಂದ ಬಿಹಾರ ರಾಜ್ಯ ಪಠ್ಯಕ್ರಮದ ಪರೀಕ್ಷೆ ತೆಗೆದುಕೊಳ್ಳಬೇಕಾಯಿತು. ಮುಂದೆ ಉನ್ನತ ವ್ಯಾಸಂಗ ಮಾಡಬೇಕೆಂದಾಗ, ನಾನು ಚಿಂತಿತನಾದೆ. ಆದರೆ, ಐ-ಡಿಸೈರ್‌ಸಂಸ್ಥೆಯ ನೆರವಿನಿಂದ ಎಲ್ಲವೂ ಸಾಧ್ಯವಾಯಿತು ಎಂದು ಮಣಿಭೂಷಣ್ ಸಿಂಗ್‌ರವರ ತಂದೆ ಲಲ್ಲನ್ ಸಿಂಗ್ ಹರ್ಷದಿಂದ ಹೇಳುತ್ತಾರೆ. ಇದು ಐ-ಡಿಸೈರ್ ಸಂಸ್ಥೆ ಯ ಸಾಧನೆಗೆ ಒಂದು ಸಣ್ಣ ಉದಾಹರಣೆ.

ಪ್ರಶಂಸೆ, ಗುರಿ :

ಐ-ಡಿಸೈರ್ ಸಂಸ್ಥೆಯ ಕಾರ್ಯಕ್ಕೆ ಬಿಹಾರದ ಮುಖ್ಯಮಂತ್ರಿಯಿಂದ ಹಿಡಿದು ಅಮೆರಿಕದ ಬಿಲ್ ಗೇಟ್ ತನಕ ಪ್ರಶಂಸೆ ದೊರೆತಿದೆ. ಹಾರ್ವಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಐ-ಡಿಸೈರ್ ಸಂಸ್ಥೆಯ ಬಗ್ಗೆ ಬಿಲ್ ಕ್ಲಿಂಟನ್ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಆದರೆ, ನಮ್ಮ ಯಶಸ್ಸನ್ನು ಹೆಚ್ಚು ಮಾಡಿದ ಕೀರ್ತಿ ಭಾರತದ ಮಾಧ್ಯಮಗಳಿಗೆ ಸಲ್ಲಬೇಕು ಎಂದು ಐ -ಡಿಸೈರ್ ತಂಡದವರು ಹೇಳಿದ್ದಾರೆ.

ಭಾರತದ ಸಣ್ಣ ನಗರಗಳನ್ನು ನಮ್ಮ ತಂಡ ತಲುಪಬೇಕು, ಮಾಹಿತಿ ಹಂಚಿಕೆ, ಬಡ ವಿದ್ಯಾರ್ಥಿಗಳಿಗೆ ಮಾನ್ಯತೆ ನಮ್ಮ ಮುಂದಿನ ಗುರಿ ಎಂದು ಚಿಕಾಗೋದಲ್ಲಿ ನೆಲೆಸಿರುವ ಐ-ಡಿಸೈರ್‌ನ ರೂವಾರಿ ಸುಶೀಲ್ ಹೇಳುತ್ತಾರೆ.

ಒಟ್ಟಿನಲ್ಲಿ ಪುರಂದರ ದಾಸರು ಹೇಳಿದಂತೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಮಾತಿನ ರೀತಿಯಲ್ಲಿ ಕಾರ್ಯಗತವಾಗಿರುವ ಐ-ಡಿಸೈರ್ ಸಂಸ್ಥೆ ನಂತಹ ಸಂಸ್ಥೆಗಳು ಇನ್ನಷ್ಟು ಹೆಚ್ಚಲಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಸುಶೀಲ್ ಸಿಂಗಾನಿಯಾ sushil.singhania@gmail.com
ನಂ.3550, ಎನ್ ಲೇಕ್ ಶೋರ್ ಅಪಾರ್ಟ್ ಮೆಂಟ್ 805
ಚಿಕಾಗೋ, ಐಲ್- ಯುಎಸ್ಎ- 60657
www.i-desire.org

(ಏಜನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more