ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಕ್ರಿಕೆಟ್‌ ತಂಡಕ್ಕೆ ಗ್ರಹಾಂ ಫೋರ್ಡ್‌ ನೂತನ ಕೋಚ್‌

By Staff
|
Google Oneindia Kannada News

BCCI selects Graham Ford as new Coachಚೆನ್ನೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾದ ಗ್ರಹಾಂ ಫೋರ್ಡ್‌ರವರನ್ನು ಭಾರತ ಕ್ರಿಕೆಟ್‌ ತಂಡ ತರಬೇತುದಾರರನ್ನಾಗಿ ಒಂದು ವರ್ಷದ ಅವಧಿಗೆ ನೇಮಿಸಿದೆ.

ಶನಿವಾರ ಚೆನ್ನೈನಲ್ಲಿ ನಡೆದ 7 ಜನ ಸದಸ್ಯರ ಆಯ್ಕೆ ಸಮಿತಿಯ ಸಭೆಯಲ್ಲಿ ಅಂತಿಮವಾಗಿ ಕಣದಲ್ಲಿದ್ದ ಇಂಗ್ಲೆಂಡ್‌ನ ಜಾನ್‌ ಎಂಬುರೆ ಹಾಗೂ ಗ್ರಹಾಂ ಫೋರ್ಡ್‌ ಜತೆ ಮಾತುಕತೆ ನಡೆಸಿದ ಸಭಾ ಸದಸ್ಯರು, ರಾತ್ರಿ ಸುಮಾರು 10:30ಕ್ಕೆ ಫೋರ್ಡ್‌ ಅವರನ್ನು ಕೋಚ್‌ ಆಗಿ ಆರಿಸಿರುವುದಾಗಿ ಪ್ರಕಟಿಸಿದರು.

ಜೂನ್‌ 12 ರಂದು ನವದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ಸಭೆಯಲ್ಲಿ ಅಧಿಕೃತವಾಗಿ ಫೋರ್ಡ್‌ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಈ ತಿಂಗಳ 13 ರಂದು ಬೆಂಗಳೂರಿನಲ್ಲಿ ನಡೆಯುವ ಇಂಗ್ಲೆಂಡ್‌ ಪ್ರವಾಸದ ಪೂರ್ವಭಾವಿ ಅಭ್ಯಾಸ ಶಿಬಿರಕ್ಕೆ ಆಗಮಿಸಿ, ಫೋರ್ಡ್‌ ತಮ್ಮ ಕೆಲಸ ಆರಂಭಿಸುವ ನಿರೀಕ್ಷೆಯಿದೆ.

ಟೆನ್ನಿಸ್‌, ಸಾಕರ್‌, ರಗ್ಬಿಯಲ್ಲಿ ಆಡಿದ ಅನುಭವದ ಜತೆಗೆ ಕೋಚ್‌ ಆಗಿ, ರೆಫ್ರಿಯಾಗಿ ಕೂಡ ಪರಿಣತಿ ಹೊಂದಿರುವ ಫೋರ್ಡ್‌ರವರ ಆಯ್ಕೆ ಬಗ್ಗೆ ರವಿಶಾಸ್ತ್ರಿ ಹಾಗೂ ನಾಯಕ ದ್ರಾವಿಡ್‌ ಅವರಿಂದ ವಿಶೇಷ ಶಿಫಾರಸು ಬಂದಿತ್ತು ಎನ್ನಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X