• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಯುಸಿ : ರೀ-ಟೋಟಲ್‌ ಎಂಬ ಮ್ಯಾಜಿಕ್‌ ಕರಾಮತ್ತು!

By Staff
|

ಬೆಂಗಳೂರು : ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ತೃಪ್ತಿ ನೀಡದೆ, ಹೆಚ್ಚಿನ ಅಂಕಗಳ ನಿರೀಕ್ಷೆಯಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದ ಕೆಲ ವಿದ್ಯಾರ್ಥಿಗಳು ನಪಾಸಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿ, ಗೊಂದಲ ಸೃಷ್ಟಿಸಿದೆ.

ಮರು ಮೌಲ್ಯಮಾಪನಕ್ಕಾಗಿ ಬಂದ ಸುಮಾರು 13,000ಕ್ಕೂ ಅಧಿಕ ಅರ್ಜಿಗಳಲ್ಲಿ ಕೇವಲ 1,078 ವಿದ್ಯಾರ್ಥಿಗಳ ಅರ್ಜಿಗಳನ್ನು ಮೌಲ್ಯಮಾಪನ ಮಾಡಿ ಹಿಂದಿರುಗಿಸಲಾಗಿದೆ.

ಮರು ಮೌಲ್ಯಮಾಪನಗೊಂಡ ನಂತರ, ಮೊದಲು ಪಡೆದಿದ್ದ ಅಂಕಗಳಿಗಿಂತ ಕಡಿಮೆ ಅಂಕಗಳು ಬಂದಿರುವುದನ್ನು ಕಂಡು ವಿದ್ಯಾರ್ಥಿಗಳಿಗೆ ಶಾಕ್‌ ಆಗಿದೆ. ಇದು ಸಾಲದೆಂಬಂತೆ, ಮೊದಲು ಪಾಸಾದವರು ಮರು ಮೌಲ್ಯಮಾಪನದ ನಂತರ ಫೇಲಾಗಿದ್ದರೆಂದು ಘೋಷಿಸಲಾಗಿದೆ.

ಕಣ್ತಪ್ಪಿನಿಂದ ಆದ ದೋಷವೆಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ, ಮರು ಮೌಲ್ಯಮಾಪನದ ನಂತರ ಶೇ.50ಕ್ಕೂ ಅಧಿಕ ವಿದ್ಯಾರ್ಥಿಗಳು ಕಡಿಮೆ ಅಂಕಗಳ ಪಡೆದಿದ್ದಾರೆ!

ಅಂಕಗಳ ಜತೆ ಹಾವು-ಏಣಿ ಆಟ :

ಮರು ಮೌಲ್ಯಮಾಪನವನ್ನು ಸಾಮಾನ್ಯವಾಗಿ 3 ಜನರ ತಂಡ ಮಾಡುತ್ತದೆ. ಮರು ಮೌಲ್ಯಮಾಪನಕ್ಕೆ ಬಂದ ಉತ್ತರ ಪತ್ರಿಕೆಯಲ್ಲಿ 6 ಅಂಕ ಹೆಚ್ಚು- ಕಮ್ಮಿಯಾಗುವಂತಿದ್ದರೆ, ಅಂತಹ ಪತ್ರಿಕೆಯನ್ನು ಮರು ಪರಿಶೀಲನೆ ಮಾಡಿ, ಅಂಕಗಳನ್ನು ನೀಡಲಾಗುವುದು. ಇದರ ಜತೆಗೆ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಕ್ರಿಯೆಗಾಗಿ ಪಾವತಿಸಿದ 750 ರೂ.ಗಳನ್ನು ಕೂಡ ಹಿಂದಿರುಗಿಸಬೇಕಾಗುತ್ತದೆ.

ಅಂಕಗಳಲ್ಲಿ ಹೆಚ್ಚಿನ ಏರುಪೇರಿದ್ದರೆ ಬೇಜವಾಬ್ದಾರಿಯ ಕಾರಣವೊಡ್ಡಿ , ಮೌಲ್ಯಮಾಪಕರಿಗೆ ದಂಡ ವಿಧಿಸುವ ಸಾಧ್ಯತೆಯಿದೆ. ಪರಿಸ್ಥಿತಿ ಹೀಗಿದ್ದರೂ, ಈ ಬಾರಿ ಮೌಲ್ಯ ಮಾಪಕರು ಅಂಕಗಳ ಜತೆ ಆಟ ಆಡಿದಂತೆ ತೋರುತ್ತಿದೆ, ಕೆಲವರಿಗೆ ಮೊದಲು ಬಂದ ಅಂಕಕ್ಕಿಂತ ಕಡಿಮೆ ಅಂಕ ಲಭಿಸಿದೆ. ಮತ್ತೆ ಕೆಲವರಿಗೆ ಅಂಕಗಳು ಹೆಚ್ಚಿಗೆ ಸಿಕ್ಕಿವೆ. ವಿಜ್ಞಾನ ವಿಷಯದ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಹೆಚ್ಚಿನ ದೋಷಗಳು ಕಂಡು ಬಂದಿವೆ.

ಕೆಲವು ಉದಾಹರಣೆಗಳಿವೆ ನೋಡಿ :

  • ರಸಾಯನ ಶಾಸ್ತ್ರದಲ್ಲಿ 52 ಅಂಕ ಪಡೆದಿದ್ದ ನವೀನ್‌ ಕುಮಾರ್‌(ಪರೀಕ್ಷೆನೊಂದಣಿ ಸಂಖ್ಯೆ: 779275)ಗೆ ಮರು ಮೌಲ್ಯಮಾಪನದ ನಂತರ 23 ಅಂಕ ಬಂದಿವೆ! ಅವರು ಫೇಲಾಗಿದ್ದಾರೆ ಎಂಬ ಉತ್ತರ ಸಿಕ್ಕಿದೆ.
  • ರಸಾಯನ ಶಾಸ್ತ್ರದಲ್ಲಿಯೇ 51 ಅಂಕಗಳಿಸಿದ್ದ ಸಂದೇಶ್‌ ಶ್ರೀನಿಧಿ(ನೋ.ಸಂಖ್ಯೆ: 441249) ಈಗ 30 ಅಂಕ ಪಡೆದಿದ್ದಾರೆ.
  • ಮೊದಲು 15 ಅಂಕ ಗಳಿಸಿದ್ದ ಸಂದೀಪ್‌ ಐತಾಳ ಈಗ 33 ಹೆಚ್ಚುವರಿ ಅಂಕ ಪಡೆದು ಇಂಗ್ಲಿಷ್‌ನಲ್ಲಿ ಪಾಸಾಗಿದ್ದಾರೆ. ಇದೇ ರೀತಿ ರೂಪಾ .ಡಿ ಕೂಡ ಮೊದಲಿದ್ದ 27 ಅಂಕಗಳಿಗೆ ಬದಲಾಗಿ 53 ಅಂಕ ಪಡೆದು ಖುಷಿಯಲ್ಲಿದ್ದಾರೆ.
  • ಭೌತಶಾಸ್ತ್ರದಲ್ಲಿ 68 ಪಡೆದಿದ್ದ ವಿನೀತ್‌ ಕುಮಾರ್‌ ಈಗ 87 ಪಡೆದರೆ, ಗಣಿತದಲ್ಲಿ 62 ಪಡೆದಿದ್ದ ಜೆಫ್ರಿ ಲೆವಿಸ್‌ ಈಗ 83 ಅಂಕ ಪಡೆದಿದ್ದಾರೆ.
  • (ಏಜನ್ಸೀಸ್‌)

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more