• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಳ್ಳಾಲ ಚುನಾವಣಾ ಫಲಿತಾಂಶ-07: ಒಂದು ವಿಶ್ಲೇಷಣೆ

By Staff
|

ಮುಸ್ಲಿಮ್‌ ಸಮುದಾಯದವರು ಕಳೆದ ಶುಕ್ರವಾರ ಪ್ರಾರ್ಥನೆ ಮಾಡುವಾಗ ಸೂಚನೆ ಹೊರಗೆಡಹಿದ್ದರು. ಇದು ಕಾಂಗ್ರೆಸ್‌ ಅಭ್ಯರ್ಥಿ ಖಾದರ್‌ಗೆ ವರದಾನವಾಯಿತು!

ಮಂಗಳೂರು : ಅಲ್ಪ ಸಂಖ್ಯಾತರ ಮತಗಳನ್ನು ಬಿಟ್ಟು, ಉಳಿದವರ ಮತದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಪಾಳಯಕ್ಕೆ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನಿವಾರ್ಯವಾಯಿತು.

ಮುಖ್ಯಮಂತ್ರಿ, ಉಪಮಖ್ಯಮಂತ್ರಿ, ಸಚಿವರ ಬಂಡಿಗಟ್ಟಲೇ ಆಶ್ವಾಸನೆಯನ್ನು ಬದಿಗೊತ್ತಿದ ಜನ ಕಾಂಗ್ರೆಸ್‌ನ ಯು.ಟಿ.ಖಾದರ್‌ಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಅಬೂಬಕ್ಕರ್‌ ನಾಟೆಕಲ್‌ ಅವರ ಪರೋಪಕಾರದ ಸಾತ್ವಿಕ ಮನಸ್ಸಿಗಿಂತ, ಖಾದರ್‌ನ ಬಿಸಿರಕ್ತದ ಮನಸ್ಸೆ ಉಳ್ಳಾಲ ಮುಸ್ಲಿಮರಿಗೆ ಇಷ್ಟವಾದಂತಿದೆ. ಬಿಜೆಪಿಯ ಯಾವುದೇ ಸಚಿವರ ಆಶ್ವಾಸನೆ, ಕೋಮು ಸೌಹಾರ್ದವನ್ನು ಜನ ನಂಬದ ಕಾರಣ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಉಚ್ಚಿಲ ಅವರು ಸೋಲೊಪ್ಪಿಕೊಳ್ಳಬೇಕಾಯಿತು.

ನಮ್ಮ ಸಮುದಾಯದ ಇಬ್ಬರು ಕಣದಲ್ಲಿದ್ದಾರೆ, ಕೋಮುವಿಚ್ಛಿದ್ರಾಕಾರಿ ಶಕ್ತಿಗಳಿಗೆ ಗೆಲುವಾಗದಂತೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿ ಎಂದು ಮುಸ್ಲಿಮ್‌ ಸಮುದಾಯದವರು ಶುಕ್ರವಾರ ಪ್ರಾರ್ಥನೆ ಮಾಡುವಾಗ ಸೂಚನೆ ಹೊರಗೆಡಹಿದ್ದರು. ಇದು ಖಾದರ್‌ಗೆ ವರದಾನವಾಯಿತು.

ಸಾಂಪ್ರದಾಯಿಕ ವೈರಿಗಳಾದ ಸಲಫಿಗಳು, ಈ ಹಿಂದೆ ಸುನ್ನಿ ಸಮುದಾಯಕ್ಕೆ ವಿರೋಧವಾಗಿ ಮತ ಚಲಾಯಿಸುತ್ತಿದ್ದರು. ಈ ಬಾರಿ ಬಿಜೆಪಿ ಸೋಲಿಗಾಗಿ ಒಟ್ಟಾಗಿದ್ದಾರೆ.

ಸಲಫಿ ಮುಂದಾಳು ಇಸ್ಮಾಯಿಲ್‌ ಶಾಫಿ ಅವರು ಖಾದರ್‌ನ ‘ಒಂದಷ್ಟು ಮೌಲ್ಯದ’ ಮನವಿ ಮೇರೆಗೆ ನಾಮಪತ್ರ ವಾಪಸ್‌ ಪಡೆದಿರುವುದು ಬಿಜೆಪಿ ಸೋಲಿಗೆ ಕಾರಣವಾಗಿದೆ. ಶ್ರೀರಾಮಸೇನೆಯವರು ಮಾತ್ರ ಇಲ್ಲಿ ಹಿಂದುತ್ವಕ್ಕೆ ಬೆಂಬಲ ನೀಡದೆ ಬಿಜೆಪಿ ಸೋಲಿಗೆ ಶ್ರಮಿಸಿದ್ದಾರೆ. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಪಕ್ಷವು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿರುವುದು, ಸಿಪಿಎಂ ಮತಗಳಿಕೆ ಹಿನ್ನಡೆಯಾಗಿರುವುದು ಈ ಎಡಪಂಥೀಯ ಚಿಂತನೆ ಮತಗಳು ಕಾಂಗ್ರೆಸ್‌ಗೆ ಹೊರಳಿರುವುದು ಜಯದ ಅಂತರವನ್ನು ಹೆಚ್ಚಿಸಿತು.

ಇನ್ನೊಂದು ಮಖ್ಯ ಕಾರಣ ತ್ರಿಕೋನ ಸ್ಪರ್ಧೆ ನಡೆಯದೆ ಇರುವುದು. ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಜೆಡಿಎಸ್‌, ಈ ಬಾರಿ ನಿರ್ಣಾಹಕ ಎಂದೇ ಭಾವಿಸಲಾಗಿತ್ತು. ಆದರೆ ಜೆಡಿಎಸ್‌ ಲೆಕ್ಕಾಚಾರ ಉಲ್ಟಾಪಲ್ಟಾ ಆಯಿತು. ದೇವೇಗೌಡ ಮತ್ತು ಕುಮಾರಸ್ವಾಮಿ ಪೂಜೆಗಳು ಫಲಿಸಿಲ್ಲ!

ಉಳ್ಳಾಲ ಫಲಿತಾಂಶ

  • ಒಟ್ಟು ಮತಗಳು -1,60,862
  • ಯು.ಟಿ.ಖಾದರ್‌(ಕಾಂಗ್ರೆಸ್‌) -46,271(ಜಯ)
  • ಚಂದ್ರಶೇಖರ ಉಚ್ಚಿಲ(ಬಿಜೆಪಿ) -38,239(ಪ್ರತಿಸ್ಪರ್ಧಿ)
  • ಅಬೂಬಕರ್‌ ನಾಟೇಕಲ್‌(ಜೆಡಿಎಸ್‌) -6217(ಠೇವಣಿ ನಷ್ಟ!)
  • ಭರತ್‌ರಾಜ್‌ ಶೆಟ್ಟಿ -1196(ಠೇವಣಿ ನಷ್ಟ!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more