ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಗ್ಗದಾಸಪುರದಿ 300ಕೋಟಿ ವೆಚ್ಚದ ಸಾಫ್ಟ್‌ವೇರ್‌ ಪಾರ್ಕ್‌

By Staff
|
Google Oneindia Kannada News

ಬೆಂಗಳೂರು : ಸುಮಾರು 50ಸಾವಿರ ಉದ್ಯೋಗ ಸೃಷ್ಟಿಗೆ ಕಾರಣವಾಗಲಿರುವ ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್‌) ಸ್ಥಾಪನೆಗೆ, ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಈ ಪರಿಣಾಮ ನಗರದ ಕೆ.ಆರ್‌.ಪುರ ಸಮೀಪದ ಕಗ್ಗದಾಸಪುರದಲ್ಲಿ ಗೋಪಾಲನ್‌ ಎಂಟರ್‌ ಪ್ರೆೃಸಸ್‌, 38 ಎಕರೆ ಪ್ರದೇಶದಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿಗಾಗಿ ವಿಶೇಷ ಆರ್ಥಿಕ ವಲಯವನ್ನು ನಿರ್ಮಾಣ ಮಾಡಲಿದೆ.

ಸುಮಾರು 300 ಕೋಟಿ ರೂ. ಅಂದಾಜಿನ ಈ ಆರ್ಥಿಕ ವಲಯ ಅಂದರೆ ಸಾಫ್ಟ್‌ವೇರ್‌ ಪಾರ್ಕ್‌ನ ಕಾಮಗಾರಿ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X