ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟೇಶ್‌ ಕುಟುಂಬಕ್ಕೆ 2+3 ಲಕ್ಷ

By Staff
|
Google Oneindia Kannada News

ಕಳೆದ ಭಾನುವಾರ(ಮೇ 02)ದಂದು ಶೃಂಗೇರಿ ಬಳಿ ನಕ್ಸಲರಿಂದ ಹತರಾದ ವೆಂಕಟೇಶ್‌ರವರ ಕುಟುಂಬಕ್ಕೆ ವಿಧಾನಸಭಾ ಸದಸ್ಯ ಜೀವರಾಜ್‌ ಅವರು ಸರ್ಕಾರದ ಪರವಾಗಿ 2 ಲಕ್ಷ ಚೆಕ್‌ ನೀಡಿದ್ದಾರೆ.

ಹಣ ನೀಡದ ಹೊರತು ಹೆಣ ತೆಗಿಯುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆ ಬಳಿ ವೆಂಕಟೇಶ್‌ರವರ ಕುಟುಂಬದವರು ಹಾಗೂ ಸಾರ್ವಜನಿಕರು ಹಠ ಹಿಡಿದರು ಎನ್ನಲಾಗಿದೆ.

ಉಳಿದ ಪರಿಹಾರ ಧನ 3 ಲಕ್ಷ ಮೊತ್ತದ ಚೆಕ್‌ ಅನ್ನು ವಾರದೊಳಗೆ ನೀಡುವುದಾಗಿ ಜೀವರಾಜ್‌ ಭರವಸೆ ನೀಡಿದ್ದಾರೆ.

* * *

ಡಿಜೆ ಅಖಿಲ್‌ ದುಬೈನಲ್ಲಿ ಸೆರೆ

ಮಾದಕ ವಸ್ತು ಹೊಂದಿದ ಆರೋಪದ ಮೇಲೆ ಭಾರತ ಖ್ಯಾತ ಡಿಸ್ಕೋ ಜಾಕಿ(ಡಿಜೆ) ಅಖಿಲ್‌ ಅವರನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ದುಬೈನ ರೇಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದುರುಗುವಾಗ, ಅವರ ಬಳಿ 0.4 ಗ್ರಾಂ ಡ್ರಗ್ಸ್‌ ಸಿಕ್ಕಿದ್ದರಿಂದ ಬಂಧಿಸಲಾಗಿದೆ.

ಡಿಜೆ ಅಖಿಲ್‌ ಟಿಪ್ಪು ಸುಲ್ತಾನ್‌ ಖ್ಯಾತಿಯ ಸಂಜಯ್‌ ಖಾನ್‌ ಅವರ ಹಿರಿಯ ಮಗಳು ಫರಾ ಖಾನ್‌ಅವರ ಪತಿಯಾಗಿದ್ದಾರೆ.

* * *

ಸುಲಭ್‌ ಶೌಚಾಲಯಕ್ಕೆ ಪ್ರಶಸ್ತಿ

ಸುಲಭ್‌ ಶೌಚಾಲಯ ಸ್ಥಾಪಕ ಬಿಂದೇಶ್ವರ್‌ ಪಾಠಕ್‌ ಅವರಿಗೆ ಈ ಬಾರಿಯ ಇಂದಿರಾಗಾಂಧಿ ಪರ್ಯಾವರಣ್‌ ಪುರಸ್ಕಾರ್‌ ನೀಡಿ ಗೌರವಿಸಲಾಗಿದೆ.

ಪರಿಸರ ದಿನಾಚಾರಣೆ ಸಂದರ್ಭದಲ್ಲಿ ಪ್ರಶಸ್ತಿಯನ್ನು ಬಿಂದೇಶ್ವರ್‌ ಅವರಿಗೆ ನೀಡಿದ ವಿದೇಶಾಂಅಗ ಸಚಿವ ಪ್ರಣಬ್‌ ಮುಖರ್ಜಿರವರು, ಸುಲಭ್‌ ಶೌಚಾಲಯದ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಲು ಕ್ರಾಂತಿ ರೂಪದಲ್ಲಿ ದುಡಿದಿದ್ದಾರೆ ಎಂದು ಹೇಳಿದರು.

* * *

ನಶೆಗೆ ವೈಟ್ನರ್‌ ಬಳಕೆ!

ಟೈಪ್‌ ಮಾಡಿದಾಗ ಅಥವಾ ಏನಾದರೂ ತಪ್ಪು ಬರೆದಾಗ, ಅದರ ಮೇಲೆ ವೈಟ್ನರ್‌ ಬಳಿದು, ತಪ್ಪನ್ನು ಸರಿಪಡಿಸುತ್ತೇವೆ. ಆಗ ವೈಟ್ನರ್‌ಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ್‌ ಅನ್ನುತ್ತೇವೆ.

ಆದರೆ ಈ ವೈಟ್ನರ್‌ ಮಾದಕ ವಸ್ತು! ಪುಸ್ತಕದಂಗಡಿಯಲ್ಲಿ ಸಿಗುವ ಎರೇಜ್‌ ವೈಟ್ನರ್‌ ಮತ್ತು ಡೈಲ್ಯೂಟರ್‌ಗಳ ಬೆಲೆ 15ರಿಂದ 20ರೂಪಾಯಿ. ಅವುಗಳನ್ನು ಬೆಂಗಳೂರಿನ ಯುವಕರು, ಬೀದಿ ಮಕ್ಕಳು ಮತ್ತೇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂಬ ಅಂಶ ವರದಿಯಾಗಿದೆ.

ಒಣಗಿದ ಬಟ್ಟೆಯಲ್ಲಿ ಮೊದಲು ಎರೇಜ್‌ ವೈಟ್ನರ್‌ ಮತ್ತು ಡೈಲ್ಯೂಟರ್‌ ಬೆರೆಸಿಕೊಳ್ಳುವ ಈ ಮಂದಿ, ನಂತರ ಜೋರಾಗಿ ವಾಸನೆ ಹೀರುತ್ತಾರೆ. ಆ ಮೂಲಕ 4-5ಗಂಟೆ ನಶೆ ಪ್ರಪಂಚದಲ್ಲಿ ತೇಲಾಡುತ್ತಾರೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X