ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರ್ರೀ ಅದು ಅನಂತಮೂರ್ತಿ?-ಕಿರಣ್‌ ಮಜುಂದಾರ್‌

By Staff
|
Google Oneindia Kannada News

National Anthem Issue : Biocon Kiran supports Infosys Murthyಬೆಂಗಳೂರು : ಇನ್ಫೋಸಿಸ್‌ ನಾರಾಯಣಮೂರ್ತಿ ವಿರುದ್ಧ ಟೀಕೆ ಮಾಡಲು ಈ ಯು.ಆರ್‌.ಅನಂತಮೂರ್ತಿ ಯಾರು? ರಾಜ್ಯಕ್ಕೆ ಅವರ ಕೊಡುಗೆ ಏನು? ಎಂದು ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಕಿಡಿಕಾರಿದ್ದಾರೆ.

ಹೀಗೆ ಟೀಕಿಸುವ ಮೂಲಕ ಕಿರಣ್‌ ಮಜುಂದಾರ್‌,‘ರಾಷ್ಟ್ರಗೀತೆ ಅವಮಾನ’ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್‌ ನಾರಾಯಣಮೂರ್ತಿ ಬೆಂಬಲಕ್ಕೆ ನಿಂತಿದ್ದಾರೆ.

ಜೂನ್‌ 7ರಂದು ನಡೆಯಲಿರುವ ಬಯೋ ಮೇಳಕ್ಕೆ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯ ನಂತರ, ಸುದ್ದಿಗಾರರ ಬಳಿ ಮಜುಂದಾರ್‌ ಮಾತಿಗೆ ಕೂತರು. ಐಟಿ ಹೆಗ್ಗಳಿಕೆ ಬಗ್ಗೆ, ಸಾಹಿತ್ಯವಲಯದ ಬಗ್ಗೆ, ದೇಶದ ಜನರ ಬಗ್ಗೆ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಿರಣ್‌ ಮಜುಂದಾರ್‌ ಮಾತಿನ ಸಾರ :

  • ಕೈಗಾರಿಕೋದ್ಯಮಿಗಳಾದ ನಾವು ದೇಶದ ಸಂಪತ್ತು ವೃದ್ಧಿಗೆ ಪೂರಕವಾಗಿದ್ದೇವೆ. ದೇಶದಲ್ಲಿ ಉದ್ಯೋಗ ಸೃಷ್ಟಿಸಿದ್ದೇವೆ. ನಮ್ಮಿಂದ ವಿದೇಶಿ ವಿನಿಮಯ ಹೆಚ್ಚಿದೆ. ದೇಶದ ಘನತೆ ವಿಶ್ವಮಟ್ಟದಲ್ಲಿ ನಮ್ಮಿಂದ ಹೆಚ್ಚಿದೆ. ನಮ್ಮ ವಿರುದ್ಧ ಟೀಕೆ ಸಲ್ಲದು.
  • ‘ನಾರಾಯಣಮೂರ್ತಿ ದೇಶ ಕಂಡ ಅಪ್ರತಿಮ ದೇಶಭಕ್ತ. ನನ್ನ ಜೀವನದಲ್ಲಿ ಅವರಂಥ ಇನ್ನೊಬ್ಬ ರಾಷ್ಟ್ರವಾದಿಯನ್ನು ನೋಡಿಯೇ ಇಲ್ಲ. ನಾರಾಯಣಮೂರ್ತಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಸಲ್ಲದು.
  • ನಾರಾಯಣಮೂರ್ತಿ ಅವರನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುವುದು ನಾಚಿಕೆಗೇಡು ಮತ್ತು ಚಿಲ್ಲರೆತನದ ಪರಮಾವಧಿ.
  • ಈ ಅನಂತಮೂರ್ತಿ ಅದೇನೋ ಸಾಹಿತ್ಯದ ಬಗ್ಗೆ ಉದ್ದುದ್ದ ಮಾತನಾಡೋದನ್ನು ಬಿಟ್ಟರೆ ಬೇರೆ ಇನ್ನೇನು ಮಾಡಿದ್ದಾರೆ? ಅವರ ಸಾಧನೆ ಏನು?
  • ಸ್ವಂತ ಪ್ರತಿಭೆ, ಪರಿಶ್ರಮದಿಂದ ಮೇಲೇರುತ್ತಿರುವವರ ಕಾಲು ಏಕೆ ಜಗ್ಗುತ್ತೀರಿ?
  • ಐಟಿ ಮಂದಿ ಅಪಾರ ಹಣ ಗಳಿಸಿರುವುದನ್ನು ಕಂಡು ಕೆಲವರಿಗೆ ಅಸಹನೆ. ಅಡ್ಡದಾರಿಯಲ್ಲಿ ನಾವು ಹಣ ಗಳಿಸಿಲ್ಲ. ಅದರ ಹಿಂದಿನ ಕಷ್ಟ-ನಷ್ಟ ನಮಗಷ್ಟೇ ಗೊತ್ತು. ಜನ ನಮ್ಮ ಕಷ್ಟದ ಬಗ್ಗೆ ಯೋಚಿಸಬೇಕು.
  • ಬಾಲಿವುಡ್‌ ಸಿನಿಮಾದಲ್ಲಿ ಎಷ್ಟೊಂದು ಅಶ್ಲೀಲತೆ ಇದೆ. ಆದರೆ ಈ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಶಿಲ್ಪಾ ಶೆಟ್ಟಿ ಮತ್ತು ರಿಚರ್ಡ್‌ ಗೇರ್‌ ಚುಂಬನವನ್ನು ಪ್ರಶ್ನಿಸುತ್ತಾರೆ. ನಮ್ಮ ಜನರನ್ನು ಕಂಡು ಲಂಡನ್‌ನವರು ಗೇಲಿ ಮಾಡಿಕೊಂಡು ನಗುತ್ತಿದ್ದಾರೆ.
ಕಿರಣ್‌ ಮಜುಂದಾರ್‌ ಟೀಕೆ ಬಗ್ಗೆ ನೀವೇನನ್ನುತ್ತೀರಿ...?

(ದಟ್ಸ್‌ ಕನ್ನಡ ವಾರ್ತೆ)

ಇದನ್ನೂ ಓದಿ-ನೋಡಿ :
ವಸುಂಧರಾ ಮತ್ತು ಕಿರಣ್‌ರ ಅಧರ ಚುಂಬನ ತಪ್ಪೇ?!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X