ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳ್ಳಾಲ ಕಾಂಗ್ರೆಸ್‌ಗೆ, ಬಿಜೆಪಿ-ಜೆಡಿಎಸ್‌ಗೆ ಮುಖಭಂಗ!

By Staff
|
Google Oneindia Kannada News

ಉಳ್ಳಾಲ : ಉಳ್ಳಾಲ ವಿಧಾನಸಭಾ ಚುನಾವಣಾ ಫಲಿತಾಂಶ ಮಂಗಳವಾರ ಬೆಳಗ್ಗೆ ಹೊರಬಿದ್ದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ.ಖಾದರ್‌ ಜಯ ಪಡೆದಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಚಂದ್ರಶೇಖರ ಉಚ್ಚಿಲ್‌ ಅವರನ್ನು 8032ಮತಗಳ ಅಂತರದಿಂದ ಖಾದರ್‌ ಸೋಲಿಸಿದ್ದಾರೆ. ಖಾದರ್‌ ಪಡೆದ ಒಟ್ಟು ಮತಗಳು -48,271. ಜೆಡಿಎಸ್‌ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದೆ.

ರಾಜ್ಯ ರಾಜಕೀಯದಲ್ಲಿ ಪರಿಣಾಮ ಬೀರಲಿದೆ ಎನ್ನಲಾಗಿದ್ದ ಉಳ್ಳಾಲ ವಿಧಾನಸಭಾ ಚುನಾವಣೆ ಫಲಿತಾಂಶದ ಪರಿಣಾಮಗಳನ್ನು ಕಾದು ನೋಡಬೇಕಾಗಿದೆ.

ದೋಸ್ತಿ ಸರ್ಕಾರದ ಮೈತ್ರಿ ಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿ ಈ ಚುನಾವಣೆ ಮೂಲಕ ಶಕ್ತಿ ಪ್ರದರ್ಶನಕ್ಕೆ ನಿಂತಿದ್ದವು. ಒಂದು ವೇಳೆ ಕಾಂಗ್ರೆಸ್‌, ಕ್ಷೇತ್ರದಲ್ಲಿ ಸೋಲು ಕಂಡಿದ್ದರೇ, ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಕ್ಕಟ್ಟಿಗೆ ಸಿಲುಕುತ್ತಿದ್ದರು. ಅವರ ಸ್ಥಾನವನ್ನು ಸಿದ್ದರಾಮಯ್ಯ ಅಲಂಕರಿಸುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

ಉಳ್ಳಾಲ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು :

  1. ಯು.ಟಿ.ಖಾದರ್‌(ಕಾಂಗ್ರೆಸ್‌)
  2. ಚಂದ್ರಶೇಖರ ಉಚ್ಚಿಲ್‌(ಬಿಜೆಪಿ)
  3. ಅಬೂಬಕ್ಕರ್‌(ಜೆಡಿಎಸ್‌)
  4. ಬಾಲಕೃಷ್ಣ ಶೆಟ್ಟಿ(ಸಿಪಿಎಂ)
  5. ಭರತ್‌ ರಾಜ್‌ ಶೆಟ್ಟಿ(ಪಕ್ಷೇತರ)
(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ
ಉಳ್ಳಾಲ ಚುನಾವಣೆ: ಕಾಂಗ್ರೆಸ್ಸಿಗ ಖಾದರ್‌ನಿಂದ ನೀತಿ ಉಲ್ಲಂಘನೆ
ಉಳ್ಳಾಲ ಚುನಾವಣೆ: ಮೊದಲ ಹಂತದಲ್ಲಿ ಶೇ 20ರ ಮತದಾನ
ಬಿಎಸ್‌ವೈ, ಖರ್ಗೆಗೆ ಚುನಾವಣಾ ಆಯೋಗದ ನೋಟೀಸ್‌
ಉಳ್ಳಾಲ ವ್ಯಾಪ್ತಿಯಲ್ಲಿ ಜೂನ್‌ 2ರಂದು ಸಾರ್ವತ್ರಿಕ ರಜೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X