• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವಾನಂದ್‌ ಕಲರ್‌ಫುಲ್‌

By Staff
|

ಹಿಂದಿ ಚಿತ್ರರಂಗದ ಚಿರಯುವಕ ದೇವಾನಂದ್‌ ಅವರ ಖ್ಯಾತ ಕಪ್ಪು ಬಿಳುಪು ಚಿತ್ರ ಹಮ್‌ ದೋನೋ ಈಗ, ವರ್ಣ ಮಯವಾಗಿ ತೆರೆ ಕಾಣಲಿದೆ. ನಟಿ ನಂದಾ ಹಾಗೂ ಮೊದಲಬಾರಿಗೆ ದೇವಾನಂದ್‌ ದ್ವಿಪಾತ್ರದಲ್ಲಿ ನಟಿಸಿದ್ದ ಹಮ್‌ ದೋನೋ ಚಿತ್ರ ಕಲರ್‌ಫುಲ್‌ ಆಗಿ ತಯಾರಾಗಿದೆ.

ದಿಲೀಪ್‌ ಕುಮಾರ್‌ ಹಾಗೂ ಮಧು ಬಾಲಾ ಅಭಿನಯದ ಮುಘಲ್‌- ಎ- ಅಜಾಂ , ದಿಲೀಪ್‌ಕುಮಾರ್‌ ಮತ್ತು ವೈಜಯಂತಿ ಮಾಲಾ ಅಭಿನಯದ ನಯಾ ದೌರ್‌ ಈಗಾಗಲೇ ಕಪ್ಪು- ಬಿಳುಪಿನಿಂದ ವರ್ಣಮಯವಾಗಿ ಬದಲಾಗಿದೆ. ಈ ಸಾಲಿನಲ್ಲಿ ಹಮ್‌ ದೋನೋ ಮೂರನೇ ಚಿತ್ರವಾಗಲಿದೆ.

***

ವಾಟ್‌ ಮೋರ್‌ ರೇಸ್‌ನಿಂದ ಹೊರಕ್ಕೆ

ಭಾರತೀಯ ಕ್ರಿಕೆಟ್‌ ತರಬೇತುದಾರ ಹುದ್ದೆಗೆ ವಾಟ್‌ ಮೋರ್‌ ಅವರನ್ನು ಆಯ್ಕೆ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಸೋಮವಾರ ನಡೆದ ಆಯ್ಕೆ ಸಮಿತಿ ಸಭೆಯ ನಿರ್ಣಯದಿಂದ ತಿಳಿದುಬಂದಿದೆ.

ಕೋಚ್‌ ಹುದ್ದೆಗೆ ಶ್ರೀಲಂಕಾದ ಮಾಜಿ ಕ್ರಿಕೆಟಗ ಅರ್ಜುನ ರಣತುಂಗಾ ಹಾಗೂ ದಕ್ಷಿಣ ಆಫ್ರಿಕಾದ ತರಬೇತುದಾರ ಗ್ರಹಾಂ ಫೋರ್ಡ್‌ ಅವರ ಹೆಸರು ಚಾಲ್ತಿಯಲ್ಲಿದೆ.

ಜೂನ್‌ 9 ರಂದು ಚೆನ್ನೈ ನಲ್ಲಿ ನಡೆಯುವ ಸಭೆಯಲ್ಲಿ ಅಂತಿಮವಾಗಿ ನಿರ್ಧಾರವಾಗುವ ಸಾಧ್ಯತೆಗಳಿವೆ.

ರಣತುಂಗಾ ಬಂದು ನಮ್ಮವರನ್ನು ಚುರುಕಾಗಿ ಓಡುವಂತೆ ಮಾಡುವರೊ, ಅಥವಾ ಗ್ರಹಾಂ ಫೊರ್ಡ್‌ ಬಂದು ಕ್ಲುಸೆನರ್‌ನಂತಹ ಆಟಗಾರನನ್ನು ರೂಪಿಸುವರೊ ಕಾದು ನೋಡಬೇಕು.

***

ಪ್ರೇಂಜಿ ಮಗ ವಿಪ್ರೋ ಸೇರಾಯ್ತು!

ಅಜಿಂ ಪ್ರೇಂಜಿ ಅವರ ಹಿರಿಯ ಮಗ ರಿಷದ್‌ ಪ್ರೇಂಜಿ ವಿಪ್ರೋ ಸಾಫ್ಟ್‌ವೇರ್‌ ಸಂಸ್ಥೆಯ ಉದ್ಯೋಗಿಯಾಗಲಿದ್ದಾರೆ. ಹಾರ್ವಡ್‌ ವಾಣಿಜ್ಯ ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದಿರುವ 30 ವರ್ಷದ ರಿಷದ್‌ ಅವರನ್ನು ವ್ಯಾಪಾರ ವ್ಯವಹಾರಗಳ ವ್ಯವಸ್ಥಾಪಕ ಹುದ್ದೆಗೆ ಸೇರಿಸಿಕೊಳ್ಳಲಾಗಿದೆ.

ಬ್ಯಾಂಕಿಂಗ್‌, ವಾಣಿಜ್ಯ ಹಾಗೂ ವಿಮಾ ಸೌಲಭ್ಯದ ವಿಷಯದಲ್ಲಿ ಸೌಮಿತ್ರೊ ಘೋಷ್‌ ಅವರಿಗೆ ಸಹಾಯಕರಾಗಿ ದುಡಿಯಲಿದ್ದಾರೆ. ಬ್ಯಾಕಿಂಗ್‌ ಹಾಗೂ ಆರ್ಥಿಕ ವಿಭಾಗದ ಮುಖ್ಯಸ್ಥ ಗಿರೀಶ ಎಸ್‌ ಪರಾಂಜಪೆ ಅವರಿಗೆ ತಮ್ಮ ವಿಭಾಗದ ಚಟುವಟಿಕೆಗಳ ವರದಿಯನ್ನು ರಿಷದ್‌ ಸಲ್ಲಿಸಬೇಕಾಗುತ್ತದೆ.

***

ಪರಿಸರಕ್ಕೆ ನನ್ನ ಕಾಣಿಕೆ!

ಮಂಗಳವಾರ(ಜೂ.05) ವಿಶ್ವ ಪರಿಸರ ದಿನ. ಈ ಸಂದರ್ಭದಲ್ಲಿ ಪರಿಸರ ಜಾಗೃತಿಗಾಗಿ ನಾನಾ ಕಾರ್ಯಕ್ರಮಗಳು ವಿಶ್ವದೆಲ್ಲೆಡೆ ನಡೆದಿವೆ.

ಗಾಳಿ, ನೀರು, ಅನ್ನ, ಆಹಾರ, ಬದುಕು ಎಲ್ಲವನ್ನೂ ಕೊಟ್ಟ ಪರಿಸರಕ್ಕೆ ನಾವೇನಾದರೂ ಕೊಡುವುದು ನ್ಯಾಯವಲ್ಲವೇ? ಯೋಚಿಸುವ ಸಮಯ ಬಂದಿದೆ.. ಯೋಚಿಸಿ, ಏನಾದರೂ ಮಾಡಿ. ಏನೂ ಮಾಡಲಾಗದಿದ್ದರೇ, ಪರಿಸರ ಹಾಳು ಮಾಡದೇ, ಸುಮ್ಮನಿರಿ!

***

ಕುಮಾರ ‘ಸಂಧಾನ’

ಮುಖ್ಯಮಂತ್ರಿ ಜೊತೆ ಯಾವುದೇ ಭಿನ್ನ ಮತ ಇಲ್ಲ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸಾರಿಗೆ ಸಚಿವ ಎನ್‌.ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ನನ್ನ ಒಳ್ಳೆಯ ಸ್ನೇಹಿತರು. ಅವರ ಆಡಳಿತದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ರಾಜೀನಾಮೆ ಕೇವಲ ವದಂತಿ ಎಂದು ಸಚಿವರು ಹೇಳಿದ್ದಾರೆ. ನಿಜಕ್ಕೂ ಕುಮಾರಸ್ವಾಮಿ ಬಗ್ಗೆ ಚೆಲುವರಾಯಸ್ವಾಮಿ ಮುನಿಸಿಕೊಂಡಿದ್ದರು. ರಾಜಿ-ಸಂಧಾನದ ಬಳಿಕ ಎಲ್ಲವೂ ಶುಭಂ ಎಂಬುದು ರಾಜಕೀಯ ಮೂಲಗಳ ವಿವರಣೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more