ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘10 ಕೋಟಿ ಬೇವಿನ ಮರಗಳನ್ನು ಬೆಳೆಸಲು ನಾವ್‌ ರೆಡಿ’

By Staff
|
Google Oneindia Kannada News

ಬೆಂಗಳೂರು : ದೇಶದ ವಿವಿಧೆಡೆ 10ಕೋಟಿ ಬೇವಿನ ಮರಗಳನ್ನು ಬೆಳೆಸಲು ನೀಮ್‌ ಪ್ರತಿಷ್ಠಾನ ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಆರ್‌.ಸಿ.ಸಕ್ಸೆನಾ ಹೇಳಿದ್ದಾರೆ.

ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗ್ರೀನಿಂಗ್‌ ಇಂಡಿಯಾ ವಿತ್‌ ನೀಮ್‌ ಕಾರ್ಯಕ್ರಮದಡಿ, ಜಾಗತಿಕ ಆರೋಗ್ಯ ಕಾಳಜಿಯಿಂದ ಬೇವು ಬೆಳೆಸಲು ಪ್ರತಿಷ್ಠಾನ ಮುಂದಾಗಿದೆ ಎಂದು ಅವರು ವಿವರಿಸಿದರು.

ಐದನೇ ವಿಶ್ವ ಬೇವು ಸಮ್ಮೇಳನ ಕೊಯಮತ್ತೂರಿನಲ್ಲಿ ನ.21ರಿಂದ 24ರವರೆಗೆ ನಡೆಯಲಿದೆ. ಬೇವನ್ನು ಬಳಸಿಕೊಂಡು, ಜೀವನದ ಗುಣಮಟ್ಟ ಹೆಚ್ಚಿಸಿಕೊಳ್ಳುವುದು, ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. 400 ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X